SSLC ವಿದ್ಯಾರ್ಥಿನಿಗೆ “ಹನಿಮೂನ್” ಬಗ್ಗೆ ಪ್ರಶ್ನೆ ಕೇಳಿದ ಶಿಕ್ಷಕ | ವಿದ್ಯಾರ್ಥಿನಿ ಮಾಡಿದ್ದಿಷ್ಟೇ!!!
ಶಿಕ್ಷಕ ವಿದ್ಯಾರ್ಥಿಯ ಸಂಬಂಧ ಗುರು ಹಾಗೂ ಶಿಷ್ಯನ ಸಂಬಂಧ. ಈ ಸಂಬಂಧ ಯಾವತ್ತಿಗೂ ನಿರ್ಮಲ. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಈ ಶಿಕ್ಷಕರ ವರ್ತನೆಗಳು ಹೆಣ್ಮಕ್ಕಳಿಗೆ ನಿಜಕ್ಕೂ ಮುಜುಗರ ತರುವಂತೆ ಮಾಡುತ್ತಿದೆ. ಏನಕ್ಕೆ ಈಗ ಈ ವಿಷಯವೆಂದರೆ, ಕಲಿಯಲು ಬರುವ ಮಕ್ಕಳಲ್ಲಿ ಶಿಕ್ಷಕನೋರ್ವ ಫಸ್ಟ್ ನೈಟ್ , ಹನಿಮೂನ್ ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳಿದ್ದಾನೆ.
ಈ ಘಟನೆ ಕೋಲಾರ ಸಮೀಪದ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೇಳಿಬಂದಿದ್ದು, ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಈಗ ಕೇಳಿ ಬಂದಿದೆ.
ಶಾಲೆಯ ಕನ್ನಡ ಶಿಕ್ಷಕರೋರ್ವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಹನಿಮೂನ್ ಹೇಗಿರುತ್ತದೆ ಎಂದು ಪ್ರಶ್ನಿಸಿ ಮುಜುಗರ ತರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿಕ್ಷಕ ಪ್ರಕಾಶ್ ವಿದ್ಯಾರ್ಥಿನಿಯರ ಜೊತೆ ಕೆಟ್ಟದಾಗಿ ಮಾತನಾಡಿ, ವಿದ್ಯಾರ್ಥಿನಿಯರ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿನಿ ಮನೆಗೆ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಪೋಷಕರು ಶಾಲೆ ಹಾಗೂ ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ ಹಾಗೂ ಶಿಕ್ಷಕನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.