ಮಂಗಳೂರು : ಹದಿಹರೆಯದ ವಿದ್ಯಾರ್ಥಿಯ ಕಾಮವಾಂಛೆ | ಹಾಸ್ಪಿಟಲ್‌ನಲ್ಲಿ ರಹಸ್ಯ ಕ್ಯಾಮೆರಾ | ಪತ್ತೆ ಹಚ್ಚಿದ್ದು ಯಾರು ಗೊತ್ತಾ?

Share the Article

ಮಂಗಳೂರು : ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ಇರಿಸಿದ್ದ ಘಟನೆ ನಡೆದಿದೆ. ಈ ಕೃತ್ಯವೆಸಗಿದ 21 ವರ್ಷದ ನರ್ಸಿಂಗ್‌ ವಿದ್ಯಾರ್ಥಿ ಪವನ್ ಕುಮಾರ್ ಎಂಬಾತ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.

ಈ ಘಟನೆ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದದ್ದಾಗಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿ ಪವನ್ ಕುಮಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಮೂಲತಃ ಕಲಬುರಗಿಯವನಾದ ಪವನ್ ಬಜಪೆಯಲ್ಲಿ ವಾಸವಾಗಿದ್ದ. ಆಸ್ಪತ್ರೆಗೆ ಚಿಕಿತ್ಸೆಗೆ, ತಪಾಸಣೆಗೆ ಹೋಗುವವರು ಸ್ಯಾನಿಂಗ್‌ಗೆ ಒಳಗಾಗುವ ಮೊದಲು ತಮ್ಮ ಬಟ್ಟೆ ಬದಲಾಯಿಸಬೇಕು. ಇದು ತಿಳಿದಿರುವ ಆರೋಪಿ ಪವನ್ ಮಹಿಳೆಯರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ರಹಸ್ಯವಾಗಿ, ಯಾರಿಗೂ ತಿಳಿಯದಂತೆ ಕ್ಯಾಮೆರಾ ಇರಿಸಿ, ಮಹಿಳೆಯರು ಬಟ್ಟೆ ಬದಲಾಯಿಸುವ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ.

ಈ ಬಾರಿ ಆಸ್ಪತ್ರೆಗೆ ಸ್ಯಾನಿಂಗ್‌ಗೆಂದು ಬಂದಿದ್ದ ಯುವತಿಯೊಬ್ಬರು ಬಟ್ಟೆ ಬದಲಾಯಿಸಲು ಆ ಕೋಣೆಗೆ ತೆರಳಿದ್ದಾರೆ. ಉಡುಪು ಬದಲಾಯಿಸುವ ಮೊದಲು ಕೋಣೆಯ ಪೂರ್ತಿ ಸೂಕ್ಮವಾಗಿ ಪರಿಶೀಲಿಸಿದ್ದಾರೆ. ಅದಾಗಲೇ ಮೂಲೆಯಲ್ಲಿ ರಹಸ್ಯ ಕ್ಯಾಮೆರಾ ಇರುವುದು ಪತ್ತೆಯಾಗಿದೆ.

ಕ್ಯಾಮೆರಾ ನೋಡಿ ಯುವತಿ ಬೆಚ್ಚಿಬಿದ್ದಿದ್ದಾರೆ. ನಂತರ ಅವರು ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಪವನ್ ಕುಮಾರ್‌ ಕ್ಯಾಮೆರಾ ಇಟ್ಟಿರುವುದೆಂದು ತಿಳಿದು ಬಂದಿದೆ. ಇದೀಗ ಸುರತ್ಕಲ್ ಠಾಣೆಯಲ್ಲಿ ಆರೋಪಿ ಮೇಲೆ ದೂರು ದಾಖಲಾಗಿದೆ.

Leave A Reply