ನಿಮಗಿದು ಗೊತ್ತೇ!ತೆಂಗಿನಕಾಯಿ ಮೊಳಕೆಯಿಂದ ಅದ್ಭುತ ಪ್ರಯೋಜನಗಳಿವೆ
ತೆಂಗಿನಕಾಯಿ ಕಾಯಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ತೆಂಗಿನಕಾಯಿ ಗೆ ತನ್ನದೇ ಆದ ವೈಧಿಕ ಇತಿಹಾಸ ಇದೆ. ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಯಾವುದೋ ಒಂದು ಬಗೆಯಲ್ಲಿ ತೆಂಗಿನಕಾಯಿಯನ್ನು ಉಪಯೋಗಿಸುವುದು ಸಾಮಾನ್ಯ ಆಗಿದೆ. ಆದರೆ ಇದರ ಹೊರತು ನೀವು ತೆಂಗಿನಕಾಯಿ ಒಡೆದಾಗ ಆ ತೆಂಗಿನಕಾಯಿ ತುಂಬಾ ಬಲಿತ್ತಿದ್ದರೆ ಅದರೊಳಗಡೆ ಬಿಳಿ ಮೊಟ್ಟೆಯಾಕಾರದಲ್ಲಿ ಮೊಳಕೆ ಇರುತ್ತದೆ ಅದನ್ನು ನೀವು ಗಮನಿಸಿ ಇರಬಹುದು. ಇದನ್ನು ಖೂಬು ಎಂದು ಆಡುಭಾಷೆಯಲ್ಲಿ ಕರೆಯಲಾಗುವುದು. ತುಳುವಿನಲ್ಲಿ ಮುಂಗೆ ಎಂದು ಕರೆಯುತ್ತಾರೆ. ಈ ಖೂಬು ನ್ನು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಸ್ಪಾಂಜ್ ತರಹ ಮೃದುವಾದ ರೀತಿಯಲ್ಲಿ ಸಿಹಿ ಸಿಹಿಯಾಗಿದ್ದು ಬಾಂಬೆ ಮಿಠಾಯಿ ತಿಂದಂತೆ ಅನಿಸುವುದು. ಕೆಲವರು ಇದನ್ನು ತಿನ್ನುತ್ತಾರೆ, ಇನ್ನು ಕೆಲವರು ಎಸೆದು ಬಿಡುತ್ತಾರೆ.
ತೆಂಗಿನಕಾಯಿ ತುಂಬಾ ಸಮಯ ಇಟ್ಟರೆ ಇಂಥ ಖೂಬು ಆಗುತ್ತದೆ. ಈ ಖೂಬು ನ್ನು ಸಲಾಡ್‌ನಲ್ಲಿ ಚಿಕ್ಕದಾಗಿ ಕತ್ತರಿಸಿ ಹಾಕಿ ಕೂಡ ಬಳಸಬಹುದು. ಆದರೆ ಅಡುಗೆಗೆ ಖೂಬು ಬಳಸಬೇಡಿ, ಇದರಿಂದ ಅಡುಗೆಯ ರುಚಿ ಹಾಳಾಗುತ್ತದೆ, ಇದನ್ನು ಹಾಗೆಯೇ ತಿನ್ನಿ, ಬೇಕಿದ್ದರೆ ಜ್ಯೂಸ್ ಮಾಡಿ ಕುಡಿಯಿರಿ, ಇನ್ನು ಸಲಾಡ್‌ನಲ್ಲೂ ಬಳಸಬಹುದು. ಈ ಖೂಬು ಚಿಕ್ಕ ಗಾತ್ರದಲ್ಲಿದ್ದರೆ ತಿನ್ನಲು ರುಚಿ, ತುಂಬಾ ದೊಡ್ಡದಾಗಿದ್ದರೆ ಚೆನ್ನಾಗಿರಲ್ಲ.
ಈ ಖೂಬು ನಿಂದ ಹಲವಾರು ಪ್ರಯೋಜನಗಳು ಇವೆ
- ತೆಂಗಿನಕಾಯಿ ಖೂಬು ತಿಂದಾಗ ದೇಹಕ್ಕೆ ಶಕ್ತಿ ದೊರೆಯುತ್ತದೆ. ದೇಹವು ಖೂಬು ತಿಂದಾಗ ಹೆಚ್ಚಿನ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ.
- • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಇದಕ್ಕೆ ಬ್ಯಾಕ್ಟಿರಿಯಾ ಹಾಗೂ ಸೋಂಕಾಣುಗಳನ್ನು ತಡೆಗಟ್ಟುವ ಶಕ್ತಿ ಇದೆ.
- ತೂಕ ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಅದಲ್ಲದೆ ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ , ಅಲ್ಲದೆ ನಿಮ್ಮ ಚಯಪಚಯ ಕ್ರಿಯೆ ಮತ್ತಷ್ಟು ಉತ್ತಮವಾಗುವುದರಿಂದ ತೂಕ ಇಳಿಕೆಗೆ ಸಹಕಾರಿ ಆಗಲಿದೆ.
- ಜೀರ್ಣಕ್ರಿಯೆ ತುಂಬಾ ಸಹಕಾರಿ ಕೆಲವರಿಗೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಅಂಥವರು ದಿನಾ ಇದನ್ನು ತಿನ್ನುವುದರಿಂದ ಮಲಬದ್ಧತೆ ತಡೆಗಟ್ಟಬಹುದು.
- ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ ಇದನ್ನು ತಿನ್ನುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಬಹುದು, ಇದರಿಂದಾಗಿ ಕ್ಯಾನ್ಸರ್ ಅಪಾಯ ತಡೆಗಟ್ಟಬಹುದು.
- ತೆಂಗಿನಕಾಯಿ ತ್ವಚೆಗೆ ಒಳ್ಳೆಯದು, ಇದರಲ್ಲಿರುವ ಖೂಬು ಇನ್ನಷ್ಟೂ ಒಳ್ಳೆಯದು. ಇದನ್ನು ನಿಯಮಿತವಾಗಿ ಅಥವಾ ವಾರದಲ್ಲಿ ಎರಡು ಬಾರಿ ತಿನ್ನುವುದರಿಂದ ನೀವು ಯೌವನ ಕಳೆ ದೀರ್ಘಕಾಲದವರೆಗೆ ಕಾಪಾಡಬಹುದು. ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ, ತ್ವಚೆ ಸಡಿಲವಾಗಲ್ಲ, ತ್ವಚೆಯಲ್ಲಿ ಯೌವನದ ಕಳೆ ಕಾಪಾಡುತ್ತದೆ.
- ನೀವು ಖೂಬು ತಿಂದ್ರೆ ನಿಮಗೆ ವಿಟಮಿನ್ ಸಿ, ವಿಟಮಿನ್ ಬಿ 1, ವಿಟಮಿನ್ ಬಿ 3, ಬಿ5, ಬಿ6, ಪೊಟಾಷ್ಯಿಯಂ, ರಂಜಕ, ಕ್ಯಾಲ್ಸಿಯಂ, ಕಬ್ಬಿಣದಂಶ ಮೊದಲಾದ ಅಂಶಗಳು ದೊರೆಯುತ್ತದೆ. ಅಲ್ಲದೆ ಇದರಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಂಶವಿದೆ. ಈ ಎರಡು ಆರೋಗ್ಯಕರ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗ್ಯತವಾಗಿದೆ.
- ಥೈರಾಯ್ಡ್ ಸಮಸ್ಯೆ ಇರುವವರಿಗೂ ಒಳ್ಳೆಯದು ಥೈರಾಯ್ಡ್ ಸಮಸ್ಯೆ ಇರುವವರಿಗೆ ತೆಂಗಿನಕಾಯಿ ತುಂಬಾ ಒಳ್ಳೆಯದು. ದಿನಾ ಒಂದು ತುಂಡು ಕೊಬ್ಬರಿ ತಿನ್ನುವುದು, ತೆಂಗಿನೆಣ್ಣೆ ಸೇವಿಸುವುದು, ತೆಂಗಿನಕಾಯಿ ಖೂಬು ತಿನ್ನುವುದು ಥೈರಾಯ್ಡ್ ಹಾರ್ಮೋನ್ ಸಮತೋಲನದಲ್ಲಿಡಲು ಸಹಕಾರಿ. ಆದ್ದರಿಂದ ಹೈಪೋ, ಹೈಪರ್ ಯಾವುದೇ ಆಗಿರಲಿ ಅವುಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
- ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿದ್ದರೆ ಅದಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಇದೂ ಒಂದು. ನೀವು ತೆಂಗಿನಕಾಯಿ ಖೂಬು ತಿನ್ನುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ಕೂಡ ಕರಗುವುದು. ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು.
- ಖೂಬು ನಿಮ್ಮಲ್ಲಿರುವ ಜಡತ್ವ ದೂರ ಮಾಡುತ್ತದೆ. ಹ್ಯಾಂಗೋವರ್‌ನಿಂದ ಬೇಗನೆ ಚೇತರಿಸಿಕೊಳ್ಳಲು ಇದನ್ನು ತಿಂದ್ರೆ ಸಾಕು ನಂತರ ನೀವು ಉತ್ಸಹಕತೆಯಿಂದ ಇರಲು ಸಹಾಯ ಮಾಡುತ್ತದೆ.
ಹೀಗೆ ಬಲಿತ ತೆಂಗಿನಕಾಯಿ ಒಳಗಡೆ ಬೆಳೆಯುವ ಖೂಬು ನ್ನು ನೀವು ಎಸೆಯಬೇಡಿ ಯಾಕೆಂದರೆ ಇದರಿಂದಾಗಿ ಈ ಮೇಲಿನ ಹಲವಾರು ಆರೋಗ್ಯ ಪ್ರಯೋಜನಗಳಿವೆ.