ಭಾರತಕ್ಕೆ ಎಂಟ್ರಿ ನೀಡಲಿದೆ ಸೂಪರ್ ಸ್ಮಾರ್ಟ್‌ಫೋನ್‌ಗಳು! ಹೊಸ ವರ್ಷಕ್ಕೆ ಮೊದಲೇ ಬಂಪರ್‌ ಕೊಡುಗೆ

2022ರ  ಕೊನೆಯ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳು ಕೂಡ ಬಾಕಿ ಉಳಿದಿವೆ. ಕ್ರಿಸ್ಮಸ್, ಹೊಸ ವರ್ಷದ ಹೊಸ್ತಿಲಲ್ಲಿ ಸಂಭ್ರಮದ ಭರಾಟೆಯ ನಡುವೆ ಜನರಿಗೆ ಹೊಸ ಸ್ಮಾರ್ಟ್ಫೋನ್  ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಮೊಬೈಲ್ ಪ್ರಿಯರಿಗೆ ನವೀನ ಮಾದರಿಯ ಹೊಸ ವೈಶಿಷ್ಟ್ಯದಲ್ಲಿ ದೊರೆಯಲಿದೆ.

 

ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು  ಡಿಸೆಂಬರ್‌ ತಿಂಗಳ ಅಂತ್ಯದಲ್ಲೇ ಭಾರತಕ್ಕೆ ಲಗ್ಗೆ  ಇಡಲಿದ್ದು, ಹಾಗಾಗಿ,  ಮೊಬೈಲ್  ಮಾರುಕಟ್ಟೆ ವಲಯದಲ್ಲಿ ಮಾತ್ರವಲ್ಲದೇ ಗ್ರಾಹಕರ ಮನದಲ್ಲಿ ಕೂಡ  ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಈ ತಿಂಗಳ ಕೊನೆಯಲ್ಲಿ ಇಲ್ಲವೆ  ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಅನೇಕ ಹೊಸ ಆಫರ್ ಮೂಲಕ ಮೊಬೈಲ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ನಡುವೆ ಡಿಸೆಂಬರ್  ತಿಂಗಳಿನಲ್ಲಿಯು  ಕೂಡ  ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ್ದು, ಈ ಮೂಲಕ ಇಯರ್‌ ಎಂಡ್‌ ಗಿಂತಲೂ ಮೊದಲೇ   ಸ್ಮಾರ್ಟ್‌ಫೋನ್‌ ಪ್ರಿಯರಿಗೆ ನವೀನ ಮಾದರಿಯ ಮೊಬೈಲ್ ಗಳು ಕೈ ಸೇರಲಿದೆ. ಈ ಲಿಸ್ಟ್ ನಲ್ಲಿ  ಇನ್ಫಿನಿಕ್ಸ್‌, ರಿಯಲ್‌ಮಿ, ಐಕ್ಯೂ, ವಿವೋ, ಒನ್‌ಪ್ಲಸ್‌ ನಂತಹ ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿದ್ದು, ಇವುಗಳ ವಿಶೇಷತೆಯ ಮೂಲಕ ಜನರ ಮನದಲ್ಲಿ ಲಗ್ಗೆ ಇಡಲು ಮುಂದಾಗಿದೆ.


ಹಾಗಾದ್ರೆ ಡಿಸೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು ಯಾವುದು ಅಂತ ಯೋಚಿಸುತ್ತಿದ್ದೀರಾ??

ಒನ್‌ಪ್ಲಸ್‌ 11 5G
ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು  ಒಳಗೊಂಡಿವೆ. ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದ್ದು, 526 ppi ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ ಈ ಸ್ಮಾರ್ಟ್‌ಫೋನ್‌ 6.7 ಇಂಚಿನ QHD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು,  ಈ ಡಿಸ್‌ಪ್ಲೇ 1440 x 3216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ .

ವಿವೋ X90 ಸರಣಿ
  ಚೀನಾದಲ್ಲಿ ಬಿಡುಗಡೆಯಾಗಿರುವ ವಿವೋ X90 ಸರಣಿ ಶೀಘ್ರದಲ್ಲೇ ಭಾರತಕ್ಕೆ ಲಗ್ಗೆ ಇಡಲಿದೆ.  ಇದರಲ್ಲಿ ವಿವೋ X90, ವಿವೋ X90 ಪ್ರೊ ಮತ್ತು ವಿವೋ X90 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಬರಲಿದ್ದು,  ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ.

ರಿಯಲ್‌ಮಿ 10ಪ್ರೊ ಸರಣಿ

ಭಾರತದಲ್ಲಿ ಇದೇ ಡಿಸೆಂಬರ್ 8 ರಂದು ರಿಯಲ್‌ಮಿ 10ಪ್ರೊ ಸರಣಿ ಶುರುವಾಗಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಇನ್ನು ಈ ರಿಯಲ್‌ಮಿ 10ಪ್ರೊ ಸರಣಿಯು 5G ಮತ್ತು 5G ಅಲ್ಲದ ಎರಡೂ ರೂಪಾಂತರದ ಆಯ್ಕೆಗಳಲ್ಲಿ ಬರಲಿದ್ದು,  ಸ್ಮಾರ್ಟ್‌ಫೋನ್‌ ಸುಮಾರು 25,000ರೂ. ಬೆಲೆಯಲ್ಲಿ ಬರುವ ನಿರೀಕ್ಷೆ ಇದೆ. ಇನ್ನು ಈ ಸ್ಮಾರ್ಟ್‌ಫೋನ್‌ 3X ಅಲ್ಟ್ರಾ ಜೂಮ್, ಸ್ಟ್ರೀಟ್ ಮೋಡ್ 3.0, AI ವಿಡಿಯೋ-ಟ್ರ್ಯಾಕಿಂಗ್ ಆಫರ್ ಅನ್ನು  ಹೊಂದಿದೆ ಎನ್ನಲಾಗಿದೆ.

ಇನ್ಫಿನಿಕ್ಸ್‌ ಹಾಟ್‌ 20 5G

ಡಿಸೆಂಬರ್‌ ತಿಂಗಳ ಆರಂಭದಲ್ಲಿ ಲಗ್ಗೆ ಇಡಲಿರುವ  ಇನ್ಫಿನಿಕ್ಸ್‌ ಹಾಟ್‌ 20 5G ಸ್ಮಾರ್ಟ್‌ಫೋನ್‌ ಆಕರ್ಷಕ ಆಫರ್ ಮೂಲಕ  ಜನರನ್ನು ಗಮನ ಸೆಳೆಯಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ 11,999 ರೂ.ಆಗಿದ್ದು  ಹಾಗೆಯೇ 5G ಅಲ್ಲದ ಸ್ಮಾರ್ಟ್‌ಫೋನ್‌ ರೂಪಾಂತರವು 8,999ರೂ.ಗಳಿಗೆ ಸೇಲ್‌ ಆಗಲಿದೆ.

ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್ 6 ರಂದು  ಮಾರಾಟ ವಾಗಲಿದೆ .  ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುವ ಜೊತೆಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 810SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Leave A Reply

Your email address will not be published.