ಪುತ್ತೂರು.ಮಾಡಾವು ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

Share the Article

ಪುತ್ತೂರು: ಮಾಡಾವು ಬೊಳಿಕ್ಕಳ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ವ್ಯಕ್ತಿಯೊಬ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.5 ರಂದು ನಡೆದಿದೆ.

ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮಾಡಾವು ಬೊಳಿಕ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45ವ) ರವರು ಮೃತಪಟ್ಟವರು. ಹರೀಶ್ಚಂದ್ರ ಸಹಿತ ನಾಲ್ವರು ಸಂಜೆ ಬೊಳಿಕ್ಕಳ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನಲ್ಲಿ ಸ್ನಾನಕ್ಕೆ ಹೋಗಿದ್ದರೆನ್ನಲಾಗಿದೆ.

ಈ ವೇಳೆ ಹರೀಶ್ಚಂದ್ರ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಮೇಲೆ ಎತ್ತಲು ಮಾಡಾವು ವಿಖಾಯ ತಂಡದ ಸದಸ್ಯರಾದ ಶಂಶುದ್ದೀನ್ ಪಾತುಂಜ, ಸೌವದ್ ಪಾತುಂಜ, ಹಾರೀಶ್ ಪಾತುಂಜ, ತಾಜುದ್ಧೀನ್ ಪಾತುಂಜ, ನಿಜಾಮುದ್ದೀನ್ ಹೊನೆಸ್ಟ್ ಮಾಡಾವು, ಇವರ ಸಂಪೂರ್ಣ ಸಹಾಕರದಿಂದ ರಾತ್ರಿ ಬೆಳಕಿನ ಸಹಾಯದಿಂದ ಮೃತದೇಹವನ್ನು ಮೇಲಕ್ಕೆ ತಂದಿದ್ದರು.

ಇದರಿಂದ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಘಟನಾ ಸ್ಥಳಕ್ಕೆ ಸಂಪ್ಯ ಎಸ್ ಐ ರಾಮಕೃಷ್ಣ ಸಹಿತ ಸಿಬ್ಬಂದಿಗಳು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Leave A Reply