PF Withdrawal : ಪಿಎಫ್ ಗ್ರಾಹಕರೇ ನಿಮಗೆ ಬಿಗ್ ಬಿಗ್ ನ್ಯೂಸ್ | ಇಪಿಎಫ್ ನ ಈ ಹೊಸ ನಿಯಮ ಇಲ್ಲಿದೆ
ಪಿಎಫ್ ಖಾತೆ ಹೊಂದಿದ್ದಿರಾ?? ಹೌದು ಎನ್ನುವ ಹಾಗಿದ್ದರೆ, ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೆಬೇಕು. ಇದೀಗ, ಹೊಸ ನಿಯಮಗಳು ಜಾರಿಗೆ ಬಂದಿದ್ದು, ಭವಿಷ್ಯ ನಿಧಿ ಹೊಂದಿರುವವರಿಗೆ ನೆಮ್ಮದಿ ತರುವುದು ಖಚಿತ.
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ.
ನೀವು ಪಿಎಫ್ ಖಾತೆ ಹೊಂದಿದ್ದರೆ ನಿಮಗೆ ಸಿಹಿ ಸುದ್ದಿ ಇದೆ. ಹೌದು!!.. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇದರಿಂದ ಭವಿಷ್ಯ ನಿಧಿ ಹೊಂದಿರುವವರಿಗೆ ನೆಮ್ಮದಿ ಸಿಗಲಿದೆ ಎನ್ನಲಾಗಿದ್ದು ಪಿಎಫ್ ಹಿಂಪಡೆಯುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.
ಪಿಎಫ್ ಚಂದಾದಾರರು ಪಿಎಫ್ ಹಣವನ್ನು ಹಿಂತೆಗೆದುಕೊಳ್ಳುವ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ, ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಿರಸ್ಕೃತಗೊಂಡಿರಬಹುದು. ಹೀಗಾಗಿ ಪಿಎಫ್ ಕ್ಲೈಮ್ ನಿರಾಕರಣೆಯ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಶೀಲನೆ ನಡೆಸಲು ಇಪಿಎಫ್ಒ ಹೊಸ ನಿಯಮಗಳನ್ನು ರೂಪಿಸಲಾಗಿದೆ.
ಇಪಿಎಫ್ಒ ಕ್ಷೇತ್ರ ಕಚೇರಿಗಳಿಂದ ಹಲವು ಬಾರಿ ಪಿಎಫ್ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತಿದ್ದು ಜೊತೆಗೆ ನಿಗದಿತ ಅವಧಿಯ ಒಳಗೆ ಸೇವೆಗಳು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಪಿಎಫ್ ಗ್ರಾಹಕರಿಂದ ಸಚಿವಾಲಯಕ್ಕೆ ತಲುಪಿದೆ. ಹಾಗಾಗಿ, ಸಂವಹನ ಸಚಿವಾಲಯವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.
ಇಷ್ಟೇ ಅಲ್ಲದೆ, ಕೆಲವು ಕ್ಷೇತ್ರ ಕಚೇರಿಗಳಲ್ಲಿ, ಪಿಎಫ್ ಕ್ಲೈಮ್ಗಳಲ್ಲಿ ಅನಪೇಕ್ಷಿತ ಎಂದು ಸಚಿವಾಲಯ ಹೇಳಿದ್ದು, ಅನಗತ್ಯ ದಾಖಲೆಗಳಿಗಾಗಿ ಕರೆ ಮಾಡುತ್ತಿರುವ ವಿಚಾರವನ್ನು ಕೂಡ ಗಂಭಿರವಾಗಿ ಪರಿಗಣಿಸಿದೆ. ಹಾಗಾಗಿ, ಈ ವಿಷಯಗಳನ್ನು ಪರಿಶೀಲನೆ ನಡೆಸುವ ಸಲುವಾಗಿ ಹೊಸ ನಿಯಮಗಳನ್ನು ರೂಪಿಸಲಾಗಿದೆ.
ಈಗ ನಡೆಯುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಲು ಓಐಸಿಗಳು ತಮ್ಮ ಕ್ಷೇತ್ರ ಕಚೇರಿಗಳಲ್ಲಿ ಖಂಡಿತವಾಗಿಯೂ ತಪಾಸಣೆ ನಡೆಸಬೇಕು ಎಂದು ಸಚಿವಾಲಯ ತಿಳಿಸಿದ್ದು, ಪ್ರತಿ ಕ್ಲೈಮ್ ಅನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂಬ ಸೂಚನೆ ನೀಡಿದೆ.
RPFC 1 ಅಥವಾ OIC ಪ್ರತಿ ತಿಂಗಳು 50 ಅಥವಾ ಒಂದು ಶೇಕಡಾ ತಿರಸ್ಕರಿಸಿದ ಕ್ಲೈಮ್ಗಳನ್ನು ಪರಿಶೀಲಿಸಬೇಕು ಜೊತೆಗೆ ಈ ವರದಿಯನ್ನು ಸಂಬಂಧಪಟ್ಟ ವಲಯ ಕಚೇರಿಗೆ ಸಲ್ಲಿಸಬೇಕಾಗಿದೆ. ಹಲವು ಬಾರಿ ತಿರಸ್ಕೃತವಾಗಿರುವ ಪಿಎಫ್ ಕ್ಲೇಮ್ ವರದಿಯನ್ನು ವಲಯ ಕಚೇರಿಗೆ ಕಳುಹಿಸಬೇಕೆಂದು ಐಎಸ್ ವಿಭಾಗ ಹೇಳಿದ್ದು, ಪ್ರಾದೇಶಿಕ ಕಚೇರಿ ಮತ್ತು ಐಎಸ್ ವಿಭಾಗದಿಂದ ಬಂದಿರುವ ಎರಡು ವರದಿಗಳನ್ನು ವಲಯ ಕಚೇರಿಗಳು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿವರಣೆ ನೀಡಿದೆ.
ಕ್ಲೈಮ್ ಅನ್ನು ತಿರಸ್ಕರಿಸುವ ಸಂದರ್ಭ ಮೊದಲ ಪ್ರಯತ್ನದಲ್ಲಿ ಕಾರಣಗಳನ್ನು ಪೂರ್ಣವಾಗಿ ನೀಡಬೇಕಾಗಿದ್ದು, ಪಿಎಫ್ ಖಾತೆದಾರರು ಸಮಸ್ಯೆಯನ್ನು ಪರಿಹರಿಸಿ ಕ್ಲೈಮ್ ತಿರಸ್ಕರಿಸಿದ ನಂತರ ಮತ್ತೊಮ್ಮೆ ಕ್ಲೈಮ್ ಮಾಡಿದರೆ, ಈಗ ಇನ್ನೊಂದು ಕಾರಣವನ್ನು ಉಲ್ಲೇಖಿಸಿ ಕ್ಲೈಮ್ ಅನ್ನು ತಿರಸ್ಕರಿಸುವ ಪ್ರಕ್ರಿಯೆಯನ್ನು ಕೊನೆಗೊಳಿಸಬೇಕು ಎಂದು ವಿವರಣೆ ನೀಡಿದೆ.
ಈ ರೀತಿ ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ, ಮೊದಲ ಬಾರಿಗೆ ಹಕ್ಕು ತಿರಸ್ಕರಿಸಿದಾಗ ಎಲ್ಲಾ ಕಾರಣಗಳನ್ನು ನೀಡಬೇಕು ಎಂದುಸಚಿವಾಲಯ ತಿಳಿಸಲಾಗಿದೆ. ಪಿಎಫ್ ಕ್ಲೈಮ್ ಅನ್ನು ಹಲವು ಬಾರಿ ತಿರಸ್ಕರಿಸಿದರೆ, ಆರ್ಪಿಎಫ್ಸಿ 2 ಮತ್ತು ಎಪಿಇಎಸ್ ಅದಕ್ಕೆ ಹೊಣೆಯಾಗುತ್ತವೆ ಎಂದು ಕೂಡ ಉಲ್ಲೇಖಿಸಿದೆ. ಕ್ಲೈಮ್ ಅನ್ನು ತಿರಸ್ಕರಿಸಿದ ನಂತರ, ಪಿಎಫ್ ಗ್ರಾಹಕರಿಂದ ಕ್ಲೈಮ್ ಅನ್ನು ಮತ್ತೆ ಸ್ವೀಕರಿಸಿದರೆ, ಅಂತಹ ಕ್ಲೈಮ್ಗಳು ಇನ್ನು ಮುಂದೆ ಬಾಕಿ ಉಳಿದಿಲ್ಲ ಎಂದು ಸೂಚಿಸಲು ಕ್ಷೇತ್ರ ಕಚೇರಿಗಳಲ್ಲಿ ಅಂತಹ ಕ್ಲೈಮ್ಗಳಿಗೆ ಫ್ಲ್ಯಾಗ್ ಅನ್ನು ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದೆ.