ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸೋ ಆಸಕ್ತಿ ಇದೆಯೇ ? ಹಾಗಾದರೆ ನಿಮಗೊಂದು ಬಂಪರ್ ಅವಕಾಶ | ಸದುಪಯೋಗ ಮಾಡ್ಕೊಳ್ಳಿ!

Share the Article

ರಾಜ್ ಬಿ. ಶೆಟ್ಟಿ (Raj B Shetty) ಓರ್ವ ಉತ್ತಮ ನಿರ್ದೇಶಕ. ಉತ್ತಮ ಬರಹಗಾರ. ಒಂದೊಳ್ಳೆಯ ಆ್ಯಕ್ಟರ್ ಎಂದರೆ ತಪ್ಪಾಗಲಾರದು‌. ಅವರ ಅದ್ಭುತ ನಟನೆಯ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಸಿನಿಮಾ (Cinema) ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಪ್ರತಿಬಾರಿ ಸಿನಿಮಾ ಮಾಡಿದಾಗಲೂ ಡಿಫರೆಂಟ್ ಕಾನ್ಸೆಪ್ಟ್ ಇಟ್ಟು ಸಿನಿಮಾ ಮಾಡುವ ನಟ ರಾಜ್. ಬಿ ಶೆಟ್ಟಿ ಪ್ರಾಜೆಕ್ಟ್‌ಗಳ (Project) ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಯಾವಾಗಲೂ ಹೆಚ್ಚು ಕುತೂಹಲ ಹೊಂದಿರುತ್ತಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಮುಗಿಸಿರುವ ರಾಜ್ ಬಿ. ಶೆಟ್ಟಿ ಅವರು ಈಗ ತಮ್ಮ ಮುಂದಿನ ಸಿನಿಮಾಗೆ ಕಾಸ್ಟಿಂಗ್ ಕಾಲ್ (Casting call) ಮಾಡಿದ್ದಾರೆ.

ವಿಷಯ ಏನೆಂದರೆ, ನಟ ರಾಜ್ ಬಿ. ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರ ಮುಂದಿನ ಚಿತ್ರಕ್ಕೆ ಕಲಾವಿದರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಾಸ್ಟಿಂಗ್ ಕಾಲ್ ಕೊಟ್ಟು ಕಲಾವಿದರನ್ನು ಆಯ್ಕೆ ಮಾಡೋದಾಗಿ ಹೇಳಿದ್ದಾರೆ. ಹಾಗಾಗಿ ಒಂದು ಮೊಟ್ಟೆಯ ಕಥೆ ಹೀರೋ ಸಿನಿಮಾದಲ್ಲಿ (Cinema) ನೀವೂ ಕೆಲಸ ಮಾಡಬೇಕೆಂಬ ಆಸೆ ಇದ್ದರೆ ಈ ಅವಕಾಶ ನಿಮಗಾಗಿ.

https://www.instagram.com/p/ClyDkzZBmLu/?utm_source=ig_web_copy_link
Leave A Reply