ದೆವ್ವದ ಕಾಟವೋ ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ!!!! ಗಿರ ಗಿರ ತಿರುಗೋ ಆಟೋ ನೋಡಿ ದಂಗಾದ ಜನ!

Share the Article

ಗಾಡಿ ಚಲಾಯಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟನೇ. ಆದರೆ ಯಾವುದೇ ಚಾಲಕ ಇಲ್ಲದೆ ವಾಹನ ಅಥವಾ ಮೋಟಾರ್ ಓಡುವುದುನ್ನು ಕಂಡರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತೀರ. ಏಕೆಂದರೆ ಇಲ್ಲೊಂದು ಕಡೆ ಒಂದು ವೀಡಿಯೋ ಮುನ್ನೆಲೆಗೆ ಬಂದಿದ್ದು, ಚಾಲಕರಿಲ್ಲದೆ ಆಟೋ ರಿಕ್ಷಾವೊಂದು ರಸ್ತೆಯಲ್ಲಿ ಓಡಾಡುತ್ತಿದೆ. ಅದು ಕೂಡಾ ವೃತ್ತಾಕಾರದಲ್ಲಿ.

ಇಂತಹ ವಿಚಿತ್ರ ಘಟನೆ ನಡೆದದ್ದು ಮಹಾರಾಷ್ಟ್ರದ ರತ್ನಗಿರಿಯಲ್ಲಿ.

ಅಲ್ಲಿನ ಮಾರುಕಟ್ಟೆಯೊಂದರಲ್ಲಿ ರಸ್ತೆಯಲ್ಲಿ ಕಂಡು ಬಂದ ದೃಶ್ಯ ಕಂಡು ಕೆಲವರು ಭಯಗೊಂಡಿದ್ದು, ದೆವ್ವ ಬಂದಿರಬಹುದೆಂದು ಭಾವಿಸಿದ್ದಾರೆ. ಇಲ್ಲಿ ಚಾಲಕರಿಲ್ಲದೆ ಆಟೋ ರಿಕ್ಷಾ ರಸ್ತೆಯಲ್ಲಿ ಸುತ್ತಾಡುವುದನ್ನು ಜನ ನೋಡಿದರು. ಇದನ್ನು ನೋಡಲು ಜನಸಾಗರವೇ ನೆರೆದಿತ್ತು. ಜನರು ಮೊಬೈಲ್‌ನಿಂದ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು.

ಇದನ್ನು ನೋಡಿದ ಜನರಿಗೆ ಚಾಲಕರಿಲ್ಲದೆ ಆಟೋ ರಿಕ್ಷಾ ಹೇಗೆ ಓಡುತ್ತಿದೆ ಎಂಬುದು ಅರ್ಥವಾಗಲಿಲ್ಲ. ಕೆಲವರು ಈ ಆಟೋ ರಿಕ್ಷಾವನ್ನು ನಿಲ್ಲಿಸಲು ಪ್ರಯತ್ನ ಮಾಡಿದರೂ ಕೂಡಾ ಅದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಮತ್ತು ಅದು ಚಲಿಸುತ್ತಲೇ ಇತ್ತು. ಕೊನೆಗೆ ಗುಂಪಿನಲ್ಲಿದ್ದ ಕೆಲವರು ಮತ್ತೆ ಮುಂದೆ ಬಂದು ಸಾಕಷ್ಟು ಪ್ರಯತ್ನದ ನಂತರ ಆಟೋ ನಿಲ್ಲಿಸಿದರು.

ಚಾಲಕನಿಲ್ಲದೇ ರಸ್ತೆಯಲ್ಲಿ ಆಟೋ ಹೇಗೆ ಓಡಾಡುತ್ತಿದೆ ಎಂಬುದೇ ಇಲ್ಲಿ ಎಲ್ಲರಿಗೂ ಕಾಡುವ ಯಕ್ಷ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಈಗಲೂ ದೊರಕಿಲ್ಲ. ಈ ರೀತಿ ಆದಾಗ ಇಲ್ಲಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏಕಾಏಕಿ ಈ ಆಟೋ ರಿಕ್ಷಾದ ಸ್ಟೇರಿಂಗ್ ಲಾಕ್ ಆಗಿದೆ. ಸ್ಟೇರಿಂಗ್ ಲಾಕ್ ಆದ ಕಾರಣ ಸುಮಾರು ಎರಡು ನಿಮಿಷಗಳ ಕಾಲ ಚಾಲಕನಿಲ್ಲದೇ ಆಟೋ ರಸ್ತೆಯಲ್ಲೇ ಸುತ್ತಾಡುತ್ತಿತ್ತು. ಸದ್ಯ ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Leave A Reply