ಮುಖ ಪಳ ಪಳ ಹೊಳೆಯುವಂತೆ ಮಾಡುತ್ತೆ, ಈ ಸಿಂಪಲ್ ಟಿಪ್ಸ್!
ನಿಮ್ಮ ಮುಖದ ಕಾಂತಿಯು ಚೆನ್ನಾಗಿ ಇರಬೇಕಾ? ಹಾಗಾದ್ರೆ ಸಿಂಪಲ್ ಆಗಿ ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ.
ತುಳಸಿ ಅನೇಕ ಚರ್ಮದ ಸಮಸ್ಯೆ ನಿವಾರಣೆಗೆ ಸಹಕಾರಿ. ತುಳಸಿಯಲ್ಲಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ. ಹಾನಿಗೊಳಗಾದ ಚರ್ಮದ ವಿರುದ್ಧ ಹೋರಾಡಲು ಮತ್ತು ಸೂಕ್ಷ್ಮ ರೇಖೆ, ಸುಕ್ಕುಗಳ ಸಮಸ್ಯೆ ನಿವಾರಿಸುತ್ತದೆ. ಚರ್ಮದ ಮೇಲೆ ಪಿಗ್ಮೆಂಟೇಶನ್ ಕಡಿಮೆ ಮಾಡಿ, ಆರೋಗ್ಯಕರವಾಗಿಸುತ್ತದೆ. ಚರ್ಮಕ್ಕೆ ತುಳಸಿ ಬಳಕೆ ಮೊಡವೆ ಸಮಸ್ಯೆ ಕಡಿಮೆ ಮಾಡುತ್ತದೆ.
ತುಳಸಿ ಫೇಸ್ ಪ್ಯಾಕ್; ಒಣ ತ್ವಚೆ ಇರುವವರು ಒಂದು ಚಮಚ ತುಳಸಿ ಪುಡಿ, ಎರಡು ಚಮಚ ಮೊಸರು ಬೆರೆಸಿ ಹಚ್ಚಿದರೆ ಒಣ ತ್ವಚೆ ನಿವಾರಣೆಯಾಗುತ್ತದೆ. ಎಣ್ಣೆಯುಕ್ತ ಚರ್ಮದವರು ಒಂದು ಚಮಚ ತುಳಸಿ ಪುಡಿ, ಶ್ರೀಗಂಧದ ಪುಡಿ, ಮುಲ್ತಾನಿ ಮಿಟ್ಟಿ, ಜೊಜೊಬಾ ಎಣ್ಣೆಯ ಕೆಲವು ಹನಿ ಮಿಶ್ರಣ ಮಾಡಿ. ರೋಸ್ ವಾಟರ್ ಸೇರಿಸಿ ಹಚ್ಚಿರಿ.
ಬೆಟ್ಟದ ನೆಲ್ಲಿಕಾಯಿ: ಆರೋಗ್ಯ ಹಾಗೂ ಚರ್ಮಕ್ಕೂ ಬೆಟ್ಟದ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಇದರಲ್ಲಿ ಸಾಕಷ್ಟಿದೆ. ಚರ್ಮಕ್ಕೆ ಬಲವಾದ ಉತ್ಕರ್ಷಣ ನಿರೋಧಕವಾಗಿದೆ ವಿಟಮಿನ್ ಸಿ. ಇದು ಕೋಶಗಳನ್ನು ಹಾನಿಯಿಂದ ರಕ್ಷಿಸಿ, ವಯಸ್ಸಾದ ವಿರೋಧಿ ಗುಣ ಹೊಂದಿದೆ. ಚರ್ಮಕ್ಕೆ ಹೊಳಪು ತರುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಚರ್ಮದಲ್ಲಿ ಕಾಲಜನ್ ವಿಭಜನೆ ತಡೆದು, ಚರ್ಮ ಮೃದುವಾಗಲು ಸಹಕಾರಿ.
ಆಮ್ಲಾ ಫೇಸ್ ಪ್ಯಾಕ್: ಒಂದು ಚಮಚ ಆಮ್ಲಾ ಪುಡಿ, ಜೇನುತುಪ್ಪ ಮತ್ತು ಮೊಸರು ಸೇರಿಸಿ. ಈ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಯ ಮೇಲೆ 20 ನಿಮಿಷ ಇರಿಸಿ. ನಂತರ ಸರಳ ನೀರಿನಿಂದ ಮುಖ ಸ್ವಚ್ಛಗೊಳಿಸಿ.
ಮೂಲೇತಿ: ಲೈಕೋರೈಸ್ ಚರ್ಮಕ್ಕೆ ಅತ್ಯುತ್ತಮವಾಗಿದೆ. ಲೈಕೋರೈಸ್ ಪ್ರತಿಜೀವಕ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣ ಹೊಂದಿದೆ. ಚರ್ಮದ ಸೋಂಕುಗಳನ್ನು ತೊಡೆದು ಹಾಕುತ್ತದೆ. ಲೈಕೋರೈಸ್ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಚರ್ಮದ ಸೋಂಕು ನಿವಾರಿಸುತ್ತದೆ. ಚರ್ಮದ ಸಮಸ್ಯೆಗಳಾದ ಕಲೆಗಳು ಮತ್ತು ಮೊಡವೆಗೆ ತ್ವರಿತ ಪರಿಹಾರ ನೀಡುತ್ತದೆ.
.