Health Tip : ಇಡ್ಲಿ ಸಾಂಬರ್ ತಿಂದರೆ ದೀರ್ಘಾಯುಷ್ಯ | ಅರೆ ಏನಿದು ಅಂತೀರಾ?
ನಾವು ಆಹಾರವನ್ನು ಯಾವ ರೀತಿಯಾಗಿ ಸೇವಿಸುತ್ತೇವೆ ಎನ್ನುವುದು ಸಹ ಒಂದು ಸವಾಲು. ಹೌದು ನಾವು ಸಾಂಬಾರು ಮಾಡುವಾಗ ತೆಂಗಿನಕಾಯಿಯನ್ನು ನಾವು ದಿನನಿತ್ಯ ಉಪಯೋಗಿಸುತ್ತೇವೆ. ಹೌದು ನಮ್ಮ ಆರೋಗ್ಯ ವೃದ್ಧಿಯಲ್ಲಿ ಸಾಂಬಾರಿನ ಪಾತ್ರ ತುಂಬಾ ಇದೆ.
ಅದಲ್ಲದೆ ತೆಂಗಿನಕಾಯಿ ಚಟ್ನಿ, ಸಾಂಬಾರ್ ಇದ್ದರೆ ಇಡ್ಲಿಯ ರುಚಿ ಅದ್ಭುತವಾಗಿರುತ್ತದೆ. ಹಾಗೂ ಇಡ್ಲಿ-ಸಾಂಬಾರ್ ಇದು ನಿಮ್ಮ ತೂಕ ಇಳಿಸುವಲ್ಲಿ ಸಹಾಯಕವಾಗಿರುವಲ್ಲಿ ತನ್ನ ಪಾತ್ರ ವಹಿಸುವಲ್ಲಿ ಸಹಕಾರಿಯಾಗಿದೆ.
ಅದಲ್ಲದೆ ಪೌಷ್ಟಿಕತಜ್ಞರ ಪ್ರಕಾರ ನೀವು ಪ್ರತಿ ದಿನ ಇಡ್ಲಿ-ಸಾಂಬಾರ್ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಹೆಚ್ಚಿನ ಕೊಬ್ಬಿನ ಅಂಶವನ್ನು ಕರಗಿಸುವ ಶಕ್ತಿ ಇದಕ್ಕಿದೆ. ಇಡ್ಲಿ ಸಾಂಬಾರ್ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಸಹಾಯ ಮಾಡುತ್ತದೆ ಎಂದು ಸಲಹೆ ನೀಡುತ್ತಾರೆ.
ಹೇಗೆ ಅಂದರೆ, ಸಾಮಾನ್ಯವಾಗಿ ಇಡ್ಲಿ ತಯಾರಿಸುವಾಗ ಅದರ ಹಿಟ್ಟನ್ನು ಹಿಂದಿನ ದಿನವೇ ಸಿದ್ಧಪಡಿಸಿ ಇಡಲಾಗುತ್ತದೆ. ಇಂತಹ ಹುದುಗಿಸಿದ ಆಹಾರಗಳಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದ್ದರಿಂದ ನೀವು ಇಡ್ಲಿ ಸೇವಿಸುವುದ್ದರಿಂದ ನಿಮ್ಮ ದೇಹವನ್ನು ಆರೋಗ್ಯವಾಗಿ ಇಡಬಹುದಾಗಿದೆ. ಮುಂದಿನ ದಿನ ರಾತ್ರಿಯೇ ಹಿಟ್ಟು ತಯಾರಿಸಿ ಇಡುವುದರಿಂದ ಮಾರನೇ ದಿನ ಹಿಟ್ಟು ಹುಬ್ಬಿಕೊಂಡು ಇರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಅದಲ್ಲದೆ ಇಡ್ಲಿಯಂತಹ ಹುದುಗಿದ ಆಹಾರಗಳು ನಿಮ್ಮ ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ವಿಭಜನೆಯನ್ನು ಮಾಡಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಹೊರತಾಗಿ, ಹುದುಗಿಸಿದ ಆಹಾರಗಳಲ್ಲಿ ಇರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಇದು ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡುತ್ತದೆ ಎಂದು ಹೇಳುತ್ತಾರೆ.
ಹಾಗೂ ಕೇವಲ ಇಡ್ಲಿ ಮಾತ್ರವಲ್ಲದೇ ಇಡ್ಲಿಯೊಂದಿಗೆ ಸವಿಯುವ ಸಾಂಬಾರಿನಿಂದಲೂ ಕೂಡ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳಿವೆ. ಸಾಮಾನ್ಯವಾಗಿ ಇಡ್ಲಿಯೊಂದಿನ ಸಾಂಬಾರಿನಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಲಾಗುತ್ತದೆ. ಇಂತಹ ತರಕಾರಿಗಳು ನಿಮ್ಮ ಆರೋಗ್ಯವನ್ನು ವೃದ್ದಿಸುವಲ್ಲಿ ಸಹಕಾರಿಯಾಗಿದೆ.
ಸಾಂಬಾರ್ ವಿಷಯಕ್ಕೆ ಬಂದರೆ, ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್ಗಳು ಹೆಚ್ಚಾಗಿದ್ದು, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ. ಉತ್ತಮವಾದ ಜೀರ್ಣಕ್ರಿಯೆಯು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಳಿಯದಂತೆ ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿನ ಹೆಚ್ಚಿನ ತೂಕವನ್ನು ಇಳಿಸಲು ಪ್ರಚೋದನೆ ನೀಡುತ್ತದೆ.
ಹೀಗೆ ಬೇರೆ ಬೇರೆ ರೀತಿಯ ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡುವುದರಿಂದ ಅದು ನಮ್ಮ ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.