ಮನೇಲಿ ಈಸಿಯಾಗಿ ಮಾಡಿ ಅವಲಕ್ಕಿ ಕಟ್ ಲಟ್

ಅವಲಕ್ಕಿ ಅಂದ ಕೂಡಲೇ ಕೆಲ ಜನರಿಗೆ ಅಯ್ಯೋ ಇದು ಬೇಡ ಅಂತ ಮಾತುಗಳೇ ಜಾಸ್ತಿ. ಆದ್ರೆ ಅವಲಕ್ಕಿಯಲ್ಲು ಕೂಡ ಸಖತ್ ಆಗಿ ತಿಂಡಿ ರೆಡಿ ಮಾಡ್ಬೋದು ಗೊತ್ತಾ?

ನೀವು ಮನೆಯಲ್ಲಿ ಈಸಿಯಾಗಿ ದೊರೆಯುವ ಸಾಮಗ್ರಿಗಳ ಮೂಲಕ ಅವಲಕ್ಕಿಗೊಂದು ರೂಪು ಕೊಡಿ. ಅದುವೇ ಅವಲಕ್ಕಿ ಕಟ್ ಲಟ್. ಹೌದು, ಹೇಗೆ ಅಂತ ಕೇಳ್ತೀರಾ? ಹೇಳ್ತೀವಿ ನೋಡಿ.

ಒಂದು ಕಪ್‌ ತೆಳು ಅವಲಕ್ಕಿ, ಎರಡು ಬೇಯಿಸಿದ ಆಲೂಗಡ್ಡೆ, ತಲಾ ಕಾಲು ಚಮಚ ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್, ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸಿನ ಪುಡಿ, 3 ಚಮಚ ಕಾರ್ನ್‌ ಫ್ಲೋರ್‌, 3 ಚಮಚ ಬ್ರೆಡ್‌ ಪುಡಿ, ಎರಡು ಚಮಚ ಕೊತ್ತಂಬರಿ ಸೊಪ್ಪು, ಒಂದು ಚಮಚ ಮೈದಾ ಹಿಟ್ಟು, ಅರ್ಧ ಲೀಟರ್‌ ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೆಳು ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದ ತಕ್ಷಣವೇ ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು. ಅದೇ ಪಾತ್ರೆಗೆ ಎರಡು ಬೇಯಿಸಿದ ಆಲೂಗಡ್ಡೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್ ಪುಡಿ (ಮಾವಿನಹಣ್ಣಿನ ಪುಡಿ), ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ ಹಾಕಬೇಕು.

ನೀರು ಹಾಕದೇ ಚಪಾತಿ ಹಿಟ್ಟಿನ ಹದಕ್ಕಿಂತ ಕಡಿಮೆ ಹದದಲ್ಲಿ ಕಲೆಸಿಕೊಳ್ಳಬೇಕು. ಮತ್ತೊಂದು ಪಾತ್ರೆಗೆ ಕಾರ್ನ್ ಫ್ಲೋರ್, ಮೈದಾಹಿಟ್ಟು, ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ನೀರು ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಬೇಕು. ಇದೇ ಮಿಶ್ರಣಕ್ಕೆ ಈ ಹಿಂದೆ ಮಾಡಿದ್ದ ಮಿಶ್ರಣವನ್ನು ದಪ್ಪವಾಗಿ ಚಪ್ಪಟೆ ಆಕಾರದಲ್ಲಿ ಮಾಡಿ ಹಾಕಬೇಕು. ತಕ್ಷಣವೇ ತೆಗೆದು ಬ್ರೆಡ್ ಪುಡಿಯೊಳಗೆ ಅದ್ದಿ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಬಂಗಾರದ ಬಣ್ಣ ಬರುವವರೆಗೆ ಕರಿಯಬೇಕು.

ಈಗ ನೋಡಿ ರುಚಿ ರುಚಿಯಾದ ಗರಿ ಗರಿಯಾಗಿ ರೆಡಿಯಾಗಿದೆ ಅವಲಕ್ಕಿ ಕಟ್ಲಟ್.

Leave A Reply

Your email address will not be published.