Shivamogga : ಶಿವಮೊಗ್ಗದಲ್ಲಿ ಕಂಡ ವಿವಾದಿತ ಗೋಡೆಬರಹ !

ಶಿವಮೊಗ್ಗದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (Popular front of india) ಅಂಗಸಂಸ್ಥೆಯಾಗಿರುವ ಸಿಎಫ್​ಐ (CFI- Campus Front of India ) ಸೇರುವಂತೆ ವಿವಾದಾತ್ಮಕ ಬರಹ ಬರೆದಿರುವುದು ಬೆಳಕಿಗೆ ಬಂದಿದೆ.

ಹೌದು!!!..ನವೆಂಬರ್ 28ರಂದು ಪೊಲೀಸರು ಗಸ್ತು ತಿರುಗುವ ಸಂದರ್ಭ ಗೋಡೆ ಬರಹ ಮುನ್ನಲೆಗೆ ಬಂದಿದ್ದು,. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪಿಎಫ್ಐನ ಅಂಗಸಂಸ್ಥೆ ಸಿಎಫ್ಐ ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿದೆ.ಪಿಎಫ್ಐ, ಸಿಎಫ್ಐ ನಿಷೇಧಿತ ಸಂಘಟನೆಗಳಾಗಿವೆ.
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ (Shiralakoppa, Shivamogga) JOIN CFI ಎಂದು ಗೋಡೆ ಬರಹ ಬರೆಯಲಾಗಿದ್ದು, ಪಟ್ಟಣದ 9ಕ್ಕೂ ಹೆಚ್ಚು ಕಡೆ ನೀಲಿ, ಕೆಂಪು ಬಣ್ಣದ ಸ್ಪ್ರೇಯಿಂದ ಬರೆದು ಸ್ಟಾರ್ ಮಾಡಲಾಗಿದೆ ಎಂಬ ವಿಚಾರ ಹೊರಬಿದ್ದಿದೆ.

ಈ ರೀತಿ ಅನೇಕ ಕಡೆಗಳಲ್ಲಿ ಬರೆಯಲಾಗಿದ್ದು, ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬದ ಮೇಲೆ, ಚಂದ್ರಪ್ಪ ಎಂಬವರ ಮನೆಯ ಕ್ರಾಸ್​​ನ ವಿದ್ಯುತ್ ಕಂಬ, ಬಿಲಾಲ್ ಎಂಬವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ, ಹಾಗೂ ಫಾರೂಕ್ ಮತ್ತು ಬಿಲಾಲ್ ಈ ಎಲ್ಲ ಕಡೆಗಳ ಮನೆಯ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ.

ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದ್ದು, ಈ ಬರಹವನ್ನು ಬರೆದವರ ಪತ್ತೆಗಾಗಿ ಖಾಕಿ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಹಿಂದೆ ಕಡಲನಗರಿ ಮಂಗಳೂರಿನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆಯ ಪರ ಬರಹ ಬರೆಯಲಾಗಿತ್ತು. ಲಷ್ಕರ್ ಉಗ್ರರನ್ನು ಕರೆಸುವುದಾಗಿ ಬೆದರಿಕೆಯ ಬರೆಹದ ಜೊತೆಗೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದ್ದು, ಇದೀಗ, ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದ್ದು, ಪೋಲಿಸ್ ಪಡೆ ಇಂತವರ ಹೆಡೆ ಮುರಿ ಕಟ್ಟಲು ಮುಂದಾಗಿದೆ.

Leave A Reply

Your email address will not be published.