ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಹಾರಿಯೋಯ್ತು ವಧುವಿನ ಪ್ರಾಣ!
ಮದುವೆ…ಜೀವನದಲ್ಲಿ ಒಂದೇ ಬಾರಿ ಆಗೋದು. ಈ ದಿನವನ್ನು ಎಲ್ಲರೂ ಎಂಜಾಯ್ ಮಾಡ್ತಾರೆ. ಯಾರೇ ಆದರೂ ಈ ಕ್ಷಣಗಳನ್ನು ಜೀವಿಸ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಈ ಕ್ಷಣನಾ ಜೀವಿಸೋ ಸಂಭ್ರಮದಲ್ಲಿದ್ದ ವಧು ಹಠಾತ್ತನೆ ಸಾವಿಗೀಡಾಗಿದ್ದಾಳೆ.
ಲಕ್ನೋದಲ್ಲಿ ಈ ಘಟನೆ ನಡೆದಿದೆ. ಮಲಿಹಾಬಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಹಾರದ ವಿನಿಮಯದ ಸಮಯದಲ್ಲಿ ವಧು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ವಧು ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಲಕ್ನೋ ಹೊರವಲಯದಲ್ಲಿರುವ ಮಲಿಹಾಬಾದ ಭದ್ವಾನಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಾಜ್ವಾಲ್ ಅವರ ಮಗಳು 21 ವರ್ಷದ ಶಿವಾಂಗಿ ಶರ್ಮಾ ಅವರ ವಿವಾಹವು ಶುಕ್ರವಾರ ನಿಗದಿಯಾಗಿತ್ತು.
ಮದುವೆಯ ವಿಧಿವಿಧಾನಗಳ ನಂತರ, ವಧುವು ವೇದಿಕೆಯ ಮೇಲೆ ವಧು ನಿಂತಿದ್ದಳು. ಇದೇ ವೇಳೆ ಹೂಮಾಲೆ ವಿನಿಮಯದ ನಂತರ, ವೇದಿಕೆಯ ಮೇಲೆ ವಧು-ವರರ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದಾಗ, ಒಮ್ಮಿಂದೊಮ್ಮೆಲೇ ವಧು ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾಳೆ ಎನ್ನಲಾಗಿದೆ. ಕೂಡಲೇ ವಧುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಯಿತು.ವಆದರೂ ಆಕೆ ಮಾರ್ಗಮಧ್ಯೆ ಸಾವನ್ನಪ್ಪಿದಳು ಎನ್ನಲಾಗಿದೆ. ವಧು ಶಿವಾಂಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಭಾರವಾದ ಹೃದಯದಿಂದ ಶನಿವಾರ ವಧುವಿನ ಅಂತ್ಯಕ್ರಿಯೆಯನ್ನು ಕುಟುಂಬವು ಮಾಡಿದ್ದಾರೆ. ವಧುವಿನ ಕುಟುಂಬವು ಈ ಪ್ರಕರಣದಲ್ಲಿ ಯಾವುದೇ ಪೊಲೀಸ್ ತನಿಖೆ ಬೇಡ ಎಂದು ಹೇಳಿದ್ದಾರಂತೆ. ಯಾವ ತಂದೆ ತಾಯಿಗೂ ತನ್ನ ಹೆಣ್ಣು ಮಕ್ಕಳ ಮದುವೆ ಮಾಡಿ ಸುಖವಾಗಿ ಆಕೆ ತನ್ನ ಗಂಡನ ಮನೆಯಲ್ಲಿ ಇರಬೇಕು ಎನ್ನೋ ಆಸೆ ಇರುತ್ತೆ. ಅದೇ ಸಂದರ್ಭದಲ್ಲಿ ತನ್ನ ಮಗಳ ಸಾವನ್ನು ಕಂಡಿದ್ದು ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು.