ಹಿಂದೂಗಳೂ ನಾಲ್ಕೈದು ಲವ್ ಜಿಹಾದ್ ನಡೆಸಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಕರ್ಕೊಂಡು ಹೋಗಿ – ಸಲಹೆ ನೀಡಿದ್ದು ಇದೇ ಮುಸ್ಲಿಂ ನಾಯಕ !

ಹಿಂದೂಗಳು ಕೂಡಾ ಮುಸ್ಲಿಂರು ಅನುಸರಿಸುವ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಹಿಂದೂಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಿಂದುಗಳು ಕೂಡ ಅಲ್ಲಾಹು ನಡೆಸಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಕರ್ಕೊಂಡು ಹೋಗಬಹುದು ಎಂದು ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅಜ್ಮಲ್, 40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡ ಬಂದ ಮೇಲೆ ಮದುವೆಯಾಗುತ್ತಾರೆ. ಅಷ್ಟು ತಡವಾಗಿ, 40ರ ಪ್ರಾಯದ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದ್ರೆ ಮಾತ್ರ ಉತ್ತಮ ಇಳುವರಿ ತೆಗೆಯಲು ಸಾಧ್ಯ. ಆದ್ದರಿಂದ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು.18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು ಎಂದು ಕರೆ ನೀಡಿದ್ದಾರೆ.

ಮುಸ್ಲಿಂ ಹುಡುಗರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಅತ್ತ ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ, ಜೀವನವನ್ನು ಆನಂದಿಸುತ್ತಾರೆ ಮತ್ತು ಹಣ ಉಳಿಸುತ್ತಾರೆ ಅಷ್ಟೇ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಲವ್ ಜಿಹಾದ್ ಅಂಶ ಉಲ್ಲೇಖಿಸಿದ್ದ ಅಸ್ಸಾಂ ಸಿಎಂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಸಂದರ್ಭ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು (Shraddha Walker Murder ) ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಲವ್ ಜಿಹಾದ್ (Love Jihad) ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಜ್ಮಲ್, ಅಸ್ಸಾಂ ಸಿಎಂ ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು. ಆದ್ರೆ ಅವರನ್ನ ತಡೆಯೋರು ಯಾರು. ನೀವು ಬೇಕಿದ್ರೆ ನಾಲ್ಕೈದು ಲವ್ ಜಿಹಾದ್ ನಡೆಸಿ, ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ, ನಾವು ಅದನ್ನ ಸ್ವಾಗತ ಮಾಡುತ್ತೇವೆಯೇ ಹೊರತು ಜಗಳವಾಡುವುದಿಲ್ಲ. ಹಾಗೆ ಮಾಡಿದ್ರೆ ನಿಮ್ಮಲ್ಲೂ ಎಷ್ಟು ಶಕ್ತಿಯಿದೆ ಎಂದು ನಾವು ನೋಡಬಹುದು ಎಂದು ಅವರು ಲೇವಡಿ ಮಾಡಿದ್ದಾರೆ.

Leave A Reply

Your email address will not be published.