FD Rules : ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ | FD ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ
ಇದೀಗ ಆರ್‌ಬಿಐ, FD ನಿಯಮಗಳಲ್ಲಿ ಭಾರಿ ಬದಲಾವಣೆಯನ್ನು ಮಾಡಿದೆ. ಆರ್ಬಿಐಯ ರೆಪೋ ದರವನ್ನು ಹೆಚ್ಚಿಸಿದ ನಂತರ ಹಲವು ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕುಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಹಾಗಾಗಿ ನೀವು ಎಫ್‌ಡಿ ಮಾಡಲು ಮುಂದಾಗಿದ್ದರೆ ಅಥವಾ ಅದನ್ನು ಪೂರ್ಣಗೊಳಿಸಿದ್ದರೆ, ಮೊದಲು ನೀವು ಕೆಲವು ವಿಷಯವನ್ನು ತಿಳಿಯಬೇಕಿದೆ. ಇಲ್ಲದಿದ್ದರೆ ನಷ್ಟವನ್ನು ಅನುಭವಿಸಬೇಕಾಗಬಹುದು. ಇನ್ನೂ ಅದರ ಮಾಹಿತಿ ಇಲ್ಲಿದೆ.
ಆರ್‌ಬಿಐ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ನಿಯಮಗಳನ್ನು ಬದಲಾಯಿಸಿದೆ. ಈಗ ನೀವು ಮುಕ್ತಾಯದ ನಂತರ ಮೊತ್ತವನ್ನು ಕ್ಲೈಮ್ ಮಾಡದಿದ್ದರೆ, ನೀವು ಅದರ ಮೇಲೆ ಕಡಿಮೆ ಬಡ್ಡಿಯನ್ನು ಪಡೆಯುತ್ತೀರಿ. ಆ ಬಡ್ಡಿ ಉಳಿತಾಯ ಖಾತೆಯಲ್ಲಿ ನೀವು ಪಡೆಯುವ ಬಡ್ಡಿಗೆ ಸಮನಾಗಿರುತ್ತದೆ. ಸದ್ಯ ಬ್ಯಾಂಕುಗಳು 5 ರಿಂದ 10 ವರ್ಷಗಳ ದೀರ್ಘಾವಧಿಯ ಎಫ್‌ಡಿಗಳ ಮೇಲೆ 5% ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತವೆ. ಹಾಗೂ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರಗಳು ಸುಮಾರು 3% ರಿಂದ 4% ರಷ್ಟಿದೆ.
ಇನ್ನೂ ಆರ್‌ಬಿಐ ನ ಪ್ರಕಾರ, ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಸ್ಥಳೀಯ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗೆ ಹೊಸ ನಿಯಮ ಅನ್ವಯ ಆಗುತ್ತದೆ. ಸ್ಥಿರ ಠೇವಣಿ ಮುಕ್ತಾಯ ಮತ್ತು ಮೊತ್ತವು ಪಾವತಿಸದೆ ಅಥವಾ ಕ್ಲೈಮ್ ಮಾಡದೆ ಉಳಿದಿದ್ದರೆ, ಉಳಿತಾಯ ಖಾತೆಗೆ ಅನ್ವಯಿಸುವ ಬಡ್ಡಿ ದರ ಅಥವಾ ಪ್ರಬುದ್ಧ ಎಫ್‌ಡಿಗಳಿಗೆ ನಿಗದಿಪಡಿಸಿದ ಬಡ್ಡಿ ದರ ಇದರಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ನೀಡಲಾಗುತ್ತದೆ.
ಅಂದರೆ, ನೀವು 5 ವರ್ಷಗಳ ಮೆಚ್ಯೂರಿಟಿಯೊಂದಿಗೆ ಎಫ್‌ಡಿಯನ್ನು ಪಡೆದಿರುತ್ತೀರಿ ಎಂದಿಟ್ಟುಕೊಂಡರೆ, ಅದು ಇಂದು ಪ್ರಬುದ್ಧವಾಗಿರುತ್ತದೆ. ಆದರೆ ನೀವು ಈ ಹಣವನ್ನು ಹಿಂತೆಗೆದುಕೊಳ್ಳುತ್ತಿಲ್ಲ. ಯಾಕೆಂದರೆ, ಎಫ್‌ಡಿಯಲ್ಲಿ ಪಡೆದ ಬಡ್ಡಿ ಆ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಗಿಂತ ಕಡಿಮೆಯಿದ್ದರೆ, ನೀವು ಎಫ್‌ಡಿ ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ. ಹಾಗೂ ಎಫ್‌ಡಿಯಲ್ಲಿ ಪಡೆದ ಬಡ್ಡಿ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಗಿಂತ ಹೆಚ್ಚಿದ್ದರೆ, ಆಗ ನೀವು ಮುಕ್ತಾಯದ ಬಳಿಕ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪಡೆಯುತ್ತೀರಿ.
ಆದರೆ ಹಿಂದಿನ ನಿಯಮಗಳೇನಿತ್ತೆಂದರೆ, ನಿಮ್ಮ ಎಫ್‌ಡಿ ಮೆಚ್ಯೂರ್ ಆದಾಗ ಮತ್ತು ನೀವು ಅದರ ಹಣವನ್ನು ಹಿಂಪಡೆಯದಿದ್ದರೆ ಅಥವಾ ಅದನ್ನು ಕ್ಲೈಮ್ ಮಾಡದಿದ್ದರೆ, ಬ್ಯಾಂಕ್ ನಿಮ್ಮ ಎಫ್‌ಡಿಯನ್ನು ಹಿಂದಿನ ಎಫ್‌ಡಿ ಅವಧಿಗೆ ವಿಸ್ತರಿಸುತ್ತಿತ್ತು. ಆದರೆ ಈಗೀನ ನಿಯಮ ಹಾಗಿಲ್ಲ, ಈಗ ನೀವು ಮೆಚ್ಯೂರಿಟಿಯಲ್ಲಿ ಹಣವನ್ನು ಹಿಂಪಡೆಯದಿದ್ದರೆ ಅದರ ಮೇಲೆ ಎಫ್‌ಡಿ ಬಡ್ಡಿ ಸಿಗುವುದಿಲ್ಲ. ಹಾಗಾಗಿ ನೀವು ಮೆಚ್ಯೂರಿಟಿ ಆದ ತಕ್ಷಣ ಹಣವನ್ನು ಹಿಂತೆಗೆದುಕೊಳ್ಳಿ ಇದು ಉತ್ತಮ.