ಕೇವಲ10 ರೂಗೆ 150 ಕಿ.ಮೀ ಮೈಲೇಜ್ ಕೊಡೋ ಗಾಡಿ ; 6 ಜನರ ಪ್ರಯಾಣಿಸಬಲ್ಲ ಈ ವಿಶೇಷ ಬೈಕ್‌ಗೆ ಮನಸೋತ ಆನಂದ್ ಮಹೀಂದ್ರ !

ಭಾರತದ ಎಲೆಕ್ಟ್ರಿಕ್ ವಾಹನ ತಯಾರಿಕೆ ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಾರಣ ಏನೆಂದರೆ ಕೇವಲ 10 ರೂಪಾಯಿಗಳಲ್ಲಿ ಅತ್ತ ಸೈಕಲ್ಲೂ ಥರ ಕಾಣುವ ಈ ವಿಶೇಷ ಬೈಕ್ ಸಂಪೂರ್ಣ ಚಾರ್ಜ್ ಆಗುತ್ತದೆ ಮತ್ತು ಒಂದು ಸಂಪೂರ್ಣ ಚಾರ್ಜ್‌ಗೆ ಈ ಗಾಡಿ ಬರೋಬ್ಬರಿ 150 ಕಿಲೋಮೀಟರ್ ಓಡುತ್ತದೆ. ಇಷ್ಟೇ ಅಲ್ಲ ಈ ಬೈಕಿನ ವಿಶೇಷತೆ. ಈ ಬೈಕ್ ಕೇವಲ12,000 ರೂಪಾಯಿಗಳ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ ಒಟ್ಟು 6 ಸೀಟ್‌ಗಳಿವೆ. ರೈಡರ್ ಸೇರಿ ಆರು ಮಂದಿ ಆರಾಮವಾಗಿ ಪ್ರಯಾಣಿಸಲು ಈ ಬೈಕಿನಲ್ಲಿ ಸಾಧ್ಯ.

 

ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಈ ಬಾರಿ ಇಂತಹಾ ವಿಶೇಷ ಬೈಕಿನ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಾಗಿ ಈ ವಿಡಿಯೋ ಹಲವರ ಆಸಕ್ತಿಯನ್ನು ಡಬಲ್ ಮಾಡಿದೆ.

” ಸರಳ ಹಾಗೂ ಸಣ್ಣ ವಿನ್ಯಾಸ. ಈ ವಾಹನ ಜಾಗತಿಕ ಮಟ್ಟದಲ್ಲಿ ಅಳವಡಿಸಲು ಸಾಧ್ಯವಿರುವ ತಂತ್ರಜ್ಞಾನವಾಗಿದೆ. ಕಿಕ್ಕಿರಿದ ಯುರೋಪಿಯನ್ ಪ್ರವಾಸಿ ಕೇಂದ್ರಗಲ್ಲಿ ಪ್ರವಾಸಿ ಬಸ್ ಆಗಿ ಸಾಧ್ಯವಿದೆ. ಗ್ರಾಮೀಣ ಪ್ರದೇಶದಲ್ಲಿನ ಹೊಸ ಆವಿಷ್ಕಾರಗಳಿಂದ ನಾನು ಯಾವತ್ತೂ ಪ್ರಭಾವಿತನಾಗುತ್ತೇನೆ. ಕಾರಣ ಈ ಗ್ರಾಮೀಣ ಪ್ರದೇಶ ಆವಿಷ್ಕಾರದ ತಾಯಿಯಾಗಿದೆ ( ಮದರ್ ಆಫ್ ಆಲ್ ಇನ್ವೆಂಶನ್) ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ನೂತನ ಎಲೆಕ್ಟ್ರಿಕ್ ವಾಹನ ಕುರಿತು ಮಾಹಿತಿ ನೀಡಿದ್ದಾರೆ. ಈ ವಾಹನದ ಉತ್ಪಾದನಾ ವೆಚ್ಚ 12,000 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ 10 ರೂಪಾಯಿಗೆ ಈ ವಾಹನ ಸಂಪೂರ್ಣ ಚಾರ್ಜ್ ಮಾಡಲು ಸಾಧ್ಯವಿದೆ ಎಂದಿದ್ದಾರೆ. ಈ ಬೈಕಿಗೆ ಸೈಕಲ್ ರೀತಿಯಲ್ಲಿ ಒಂದರ ಹಿಂದೆ ಒಂದು ಸೀಟುಗಳನ್ನು ಜೋಡಿಸಲಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಒಟ್ಟು 6 ಮಂದಿ ಕುಳಿತು ಇಲ್ಲಿ ಪ್ರಯಾಣಿಸಬಹುದು. ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಗ್ರಾಮೀಣ ಪ್ರತಿಭೆಗೆ ಮೆಚ್ಚುಗೆಗಳ ಮಹಾಪೂರ ಸುರಿದುಬಂದಿದೆ.

Leave A Reply

Your email address will not be published.