ಲೆಗ್ಗಿನ್ಸ್ ಧರಿಸಿ ಶಾಲೆಗೆ ಬಂದ ಶಿಕ್ಷಕಿ | ನಂತರ ನಡೆಯಿತು ಈ ಕೃತ್ಯ!
ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸದೆ ಬಂದಾಗ ಶಿಕ್ಷಕರು ಬೈಯುದು ಇಲ್ಲವೆ ಗದರುವುದು ಸಹಜ. ಆದರೆ, ಶಾಲೆಗೆ ಲೆಗ್ಗಿನ್ ಧರಿಸಿ ಬಂದ ಶಿಕ್ಷಕಿಗೆ ಮುಖ್ಯ ಶಿಕ್ಷಕಿಯೊಬ್ಬರು ನಿಂದಿಸಿ ಅನುಚಿತವಾಗಿ ವರ್ತಿಸಿದ ಘಟನೆ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದೆ.
ಮಿಸಸ್ ಕೇರಳ ಎಂಬ ಬಿರುದು ಪಡೆದಿರುವ ಸರಿತಾರವರು, 13 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಸರಿತಾ ಶಾಲೆಗೆ ಬಂದ ಸಂದರ್ಭದಲ್ಲಿ ಲೆಗ್ಗಿನ್ಸ್ ಧರಿಸಿ ಬಂದಿದ್ದು , ಸರಿತಾ ಅವರು ಧರಿಸಿದ ಉಡುಪು ನೋಡಿ ಮುಖ್ಯ ಶಿಕ್ಷಕಿ ರಾಮಲತಾ ‘ಶಿಕ್ಷಕಿ ಆಗಿ ಸರಿತಾ ಅವರೇ ಇಂತಹ ಬಟ್ಟೆ ಧರಿಸಿ ಶಾಲೆಗೆ ಬರುವಾಗ ಮಕ್ಕಳಿಗೆ ಶಿಸ್ತಿನ ಉಡುಪು ಧರಿಸಿಕೊಂಡು ಬರಲು ಮಾರ್ಗದರ್ಶನ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಅವಮಾನಿಸುವ ಸಲುವಾಗಿ ಮುಖ್ಯ ಶಿಕ್ಷಕಿ ಹೀಗೆ ಹೇಳಿದ್ದು, ಇದನ್ನು ತಮಾಷೆಯಾಗಿ ತೆಗೆದುಕೊಂಡ ಶಿಕ್ಷಕಿ ಸರಿತಾ ‘ಶಿಕ್ಷಕರಿಗಾಗಿ ಬೇರೆ ಸಮವಸ್ತ್ರ ಇದೆಯೇ ಎಂದು ಮುಖ್ಯ ಶಿಕ್ಷಕಿಯನ್ನೂ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಸರಿತಾ ಅವರಿಗೆ ರಾಮಲತಾ ‘ನಮ್ಮ ಶಾಲೆಯ ಹೆಣ್ಣು ಮಕ್ಕಳು ಕೂಡ ಈ ರೀತಿ ಬಟ್ಟೆ ಧರಿಸಿ ಶಾಲೆಗೆ ಬರುವುದಿಲ್ಲ. ನಾವು ಧರಿಸುವ ಉಡುಪುಗಳು ಅವರ ಸಂಸ್ಕೃತಿಯನ್ನು ತಿಳಿಸುತ್ತವೆ. ಅದೇ ರೀತಿ, ಸರಿತಾ ಅವರು ಹಾಕಿರೋ ಪ್ಯಾಂಟಿನಿಂದಲೇ ಅವರ ಸಂಸ್ಕೃತಿ ತಿಳಿಯುತ್ತದೆ ಎಂದಿದ್ದಾರೆ.
ಸರಿತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ನಾನು ಸಭ್ಯವಾಗಿ ಬಟ್ಟೆ ಧರಿಸಿದ್ದು, ಮುಖ್ಯ ಶಿಕ್ಷಕಿಯ ನಡೆ ತನಗೆ ನೋವು ಉಂಟು ಮಾಡಿದೆ ಎಂದಿದ್ದಾರೆ.ಈ ಕುರಿತಾಗಿ, ಶಿಕ್ಷಕಿ ಸರಿತಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ತಾನು ಹಾಕಿದ್ದ ಫೋಟೋ ಸಮೇತ ದೂರು ನೀಡಿದ್ದರು ಕೂಡ ಯಾವುದೇ ಕ್ರಮ ಮಾತ್ರ ಜಾರಿಯಾಗಿಲ್ಲ’ ಎಂದು ಸರಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.