Haripriya Vasishta Simha Engagement | ಗುಟ್ಟಾಗಿ ನಡೆದೇ ಹೋಯ್ತು, ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ-ವಸಿಷ್ಠಾ ಸಿಂಹ ನಿಶ್ಚಿತಾರ್ಥ!

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು,  ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ..

 

ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರು ಹಸೆಮಣೆ ಏರಲಿದ್ದಾರಾ?? ಎಂಬ ಅನುಮಾನ  ಕಾಡುತ್ತಿತ್ತು. ಇತ್ತೀಚೆಗಷ್ಟೇ, ಹರಿಪ್ರಿಯಾ  ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ವೈರಲ್  ಆದ ಬೆನ್ನಲ್ಲೇ ಚಂದನವನದ ಚೆಲುವೆಯ ಕೈ ಹಿಡಿಯುವ ಸುಕುಮಾರ ವಸಿಷ್ಠ ಸಿಂಹ ಎನ್ನಲಾಗಿತ್ತು. ಇದೀಗ ಸೈಲೆಂಟ್ ಆಗಿ ನಟಿ ಹರಿಪ್ರಿಯಾ ನಿಶ್ಚಿತಾರ್ಥ ನಡೆದಿದೆ.

ಹೌದು!!.ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್​ ಆಗಿ ನಿಶ್ಚಿತಾರ್ಥ ಕಾರ್ಯ ನಡೆದಿದೆ. ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಅವರು ನಿಶ್ಚಿತಾರ್ಥ  ಮಾಡಿಕೊಂಡಿದ್ದಾರೆ.  ಕೆಲವೇ  ಕೆಲವು ಅತಿ ಆಪ್ತರ ಸಮ್ಮುಖದಲ್ಲಿ  ಹಾಗೂ ಎರಡು ಕುಟುಂಬದ ಸದಸ್ಯರು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹರಿಪ್ರಿಯಾ ಅವರು ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ. ರಿಷಬ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ಶ್ರೀಮುರಳಿ ಮುಂತಾದ ಸ್ಟಾರ್​ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ.


ಇತ್ತೀಚಿನ ಕೆಲವು ದಿನಗಳಿಂದ ಈ ಜೋಡಿಯ ಬಗ್ಗೆ   ಸುದ್ದಿ  ಹರಿದಾಡುತ್ತಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಅಲ್ಲದೆ , ಸದ್ಯದಲ್ಲೇ ಹಸೆ ಮಣೆ ಏರಲಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹಬ್ಬಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಒಂದೆರಡು ಫೋಟೋಗಳು ಕೂಡ ವೈರಲ್​ ಆಗಿತ್ತು.
ಇದೀಗ,  ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಎಂಗೇಜ್​ಮೆಂಟ್​ (Vasishta Simha Haripriya Engagement) ಮಾಡಿಕೊಂಡಿದ್ದಾರೆ.

ಹರಿಪ್ರಿಯಾ ಅವರ ನಿವಾಸದಲ್ಲಿ ಸಿಂಪಲ್​ ಆಗಿ ಈ ಶುಭಕಾರ್ಯ ನಡೆದಿದ್ದು, ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಲಾಗಿದ್ದು, ಅತಿ  ಶೀಘ್ರದಲ್ಲೇ ಹರಿಪ್ರಿಯಾ-ವಸಿಷ್ಠ ಸಿಂಹ ತಾರಾ ಜೋಡಿ  ಮದುವೆ ಎಂಬ ಬಂಧನಕ್ಕೆ  ಸೆರೆಯಾಗಲಿದ್ದಾರೆ.
ಚಂದನ ವನದ ಬ್ಯೂಟಿ ಕ್ವೀನ್ ಗಳೆಲ್ಲ ಮದುವೆ ಯಾಗುತ್ತಿದ್ದು, ಇದೀಗ ನಟಿ ಹರಿಪ್ರಿಯಾ  ಕೂಡ ಮದುವೆಗೆ ಅಣಿಯಾಗುತ್ತಿದ್ದಾರೆ .ನಟ ವಸಿಷ್ಠ ಸಿಂಹ ಅವರು ಕನ್ನಡದಲ್ಲಿ  ಮಾತ್ರವಲ್ಲದೆ, ಪರಭಾಷೆಯಲ್ಲೂ ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಕೂಡ ಬೇಡಿಕೆಯ ನಟಿಯೇ!!. ಈ ಮಧ್ಯೆ ಇವರಿಬ್ಬರು ಮದುವೆ ಆಗಲಿದ್ದಾರೆ.
ಹಲವು ವರ್ಷಗಳಿಂದ ನಟಿ ಹರಿಪ್ರಿಯಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು,  ಅನೇಕ ಹಿಟ್​ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇತ್ತೀಚೆಗೆ ಮೂಗು ಚುಚ್ಚಲಾಗಿದ್ದು,  ಆ ವಿಡಿಯೋ ನೋಡಿದ ಬಳಿಕ ಅನೇಕ ಅಭಿಮಾನಿಗಳಿಗೆ ಮದುವೆಯ ತಯಾರಿ  ಎಂಬ ಸುದ್ದಿ ಹಬ್ಬಿತ್ತು.

ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದು,  ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಸುದ್ಧಿ  ಗಾಂಧಿನಗರದಲ್ಲಿ ಹಬ್ಬಿದೆ.  ಆದರೆ, ಎಂಗೇಜ್​ಮೆಂಟ್​ ಸಲುವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚಿಗೆ ಶಾಪಿಂಗ್​ ಮಾಡಿದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Leave A Reply

Your email address will not be published.