ಗುತ್ತಿದುರ್ಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ!
ದಾವಣಗೆರೆ ಜಿಲ್ಲೆಯ ಗುತ್ತಿದುರ್ಗ ಪ್ರಾಥಮಿಕ ಶಾಲೆಗೆ ಅಲ್ಲಿನ ವಿದ್ಯಾರ್ಥಿನಿ ತನ್ನ ಸಾಧನೆಯಿಂದ ಕೀರ್ತಿ ತಂದು ಕೊಟ್ಟಿದ್ದಾಳೆ. ಶಾಲೆಯ ಹೆಸರು ಜಿಲ್ಲೆಯಲ್ಲಿ ರಾರಾಜಿಸುವಂತೆ ಮಾಡಿದ್ದಾಳೆ. ಹಾಗೂ ರಾಜ್ಯ ಮಟ್ಟದಲ್ಲೂ ಭಾಗವಹಿಸಿ, ಗೆಲುವು ಸಾಧಿಸಲು ಅವಕಾಶ ಬಂದೊದಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಇಂದು ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಬೇರೆ ಬೇರೆ ಶಾಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಕರ ನೇತೃತ್ವದಲ್ಲಿ ಆಗಮಿಸಿದ್ದರು. ಈ ವೇಳೆ ಗುತ್ತಿದುರ್ಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗುತ್ತಿದುರ್ಗ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಪ್ರಕೃತಿ ಎಂಬಾಕೆ ಭಾಗವಹಿಸಿದ್ದಳು. ಆಕೆ ಎತ್ತರ ಜಿಗಿತದಲ್ಲಿ ಭಾಗವಹಿಸಿ, ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಶಾಲೆಯ ಹೆಸರನ್ನು ಎಲ್ಲೆಡೆ ರಾರಾಜಿಸುವಂತೆ ಮಾಡಿದ್ದಾಳೆ. ತನ್ನ ಸತತ ಪರಿಶ್ರಮದಿಂದ ಆಟವನ್ನು ಗೆದ್ದು ಹೆತ್ತವರಿಗೆ, ಶಾಲೆಗೆ ಮತ್ತು ಜಿಲ್ಲೆಗೂ ಹೆಸರು ತಂದು ಕೊಟ್ಟಿದ್ದಾಳೆ. ಹೆತ್ತವರು ಮಗಳ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಹಾಗೇ ರಾಜ್ಯಮಟ್ಟಕ್ಕೂ ಕಾಲಿಡುತ್ತಿದ್ದಾಳೆ.
ವಿದ್ಯಾರ್ಥಿನಿ ಪ್ರಕೃತಿಯ ಗೆಲುವನ್ನು ಕಂಡು ಶಾಲೆಯ ಸಿಬ್ಬಂದಿಗಳು ತುಂಬಾ ಖುಷಿಪಟ್ಟಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು, ನಮ್ಮ ಶಾಲಾ ವಿದ್ಯಾರ್ಥಿನಿ ಪ್ರಕೃತಿ ಜಿಲ್ಲಾ ಮಟ್ಟದಲ್ಲಿ ಗೆದ್ದಿದ್ದಾಳೆ ಇನ್ನೂ ರಾಜ್ಯ ಮಟ್ಟದಲ್ಲಿ ಶಾಲೆಗೆ ಕೀರ್ತಿಯನ್ನು ತರುತ್ತಾಳೆ ಎಂದು ಹೆಮ್ಮೆಯಿಂದ ಈ ಮಾತುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗೂ ವಿದ್ಯಾರ್ಥಿನಿ ಪ್ರಕೃತಿಯ ಪರಿಶ್ರಮದ ಫಲಕ್ಕೆ, ಆಕೆಯ ಗೆಲುವಿಗೆ ಸ್ನೇಹಿತರು, ಸ್ಥಳಿಯರು, ಶಾಲಾ ಶಿಕ್ಷಕರು ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.