Loan EMI Hike: ಬಡ್ಡಿ ದರ ಹೆಚ್ಚಳ ಮಾಡಿದ ಈ ಬ್ಯಾಂಕ್‌ಗಳು ; ಇಎಂಐ ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್ ಆಗಿದ್ದು, ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರವನ್ನು ರೆಪೋ ದರ ಎಂದು ಪರಿಗಣಿಸಲಾಗುತ್ತದೆ.

ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಹಣ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸಲಿದ್ದು, ಈ ಬಡ್ಡಿದರವೆ ರೆಪೊ ದರವಾಗಿದೆ. ಬ್ಯಾಂಕುಗಳಿಗೆ  ಹೆಚ್ಚು ಸಾಲ ಪಡೆಯುವುದನ್ನು ನಿಯಂತ್ರಿಸಲು  ಆರ್‌ಬಿಐ  ರೆಪೊ ದರಗಳನ್ನು ಹೆಚ್ಚಿಸುತ್ತದೆ. ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ.


ಇತ್ತೀಚೆಗೆ ಹೆಚ್ಚುತ್ತಿರುವ ಹಣದುಬ್ಬರ (Inlfation) ತಡೆಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಿಸುವ ಮನವಿ ಸಲ್ಲಿಸಿದ್ದು , ಹಾಗಾಗಿ,  ಭಾರತದಲ್ಲಿಯೂ ಇತ್ತೀಚೆಗಷ್ಟೇ ಎಸ್​ಬಿಐ (SBI) ಸೇರಿದಂತೆ ಹಲವು ಬ್ಯಾಂಕ್​ಗಳು ಸಾಲದ ಹಾಗೂ ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.ಈ ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿದೆ.

ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) ಪಿಎನ್​ಬಿ (PNB), ಐಸಿಐಸಿಐ ಬ್ಯಾಂಕ್ (ICICI Bank), ಬ್ಯಾಂಕ್​ ಆಫ್ ಇಂಡಿಯಾ (Bank of India) ಏರಿಕೆ ಮಾಡಿದ್ದು, ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (December 1) ಜಾರಿಗೆ ಬರಲಿರುವ ಕುರಿತು ಬ್ಯಾಂಕ್​ಗಳು ಮಾಹಿತಿ ನೀಡಿವೆ. ಹಲವು  ಬ್ಯಾಂಕ್ಗಳು ಸಾಲದ ಹಾಗೂ ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡಿದ ಪರಿಣಾಮವಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಕಂತಿನ ಮೊತ್ತ ಹೆಚ್ಚಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಮೇ ನಂತರ ಈವರೆಗೆ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಳ ಮಾಡಿದ್ದು, ಇದಕ್ಕೆ ಅನುಸಾರವಾಗಿ, ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸುತ್ತವೆ.

ಹಾಗಾದ್ರೆ, ಐಸಿಐಸಿಐ, ಪಿಎನ್​ಬಿ, , ಬ್ಯಾಂಕ್​ ಆಫ್ ಇಂಡಿಯಾ ಪರಿಷ್ಕೃತ ಕನಿಷ್ಠ ಬಡ್ಡಿ ದರ ಎಷ್ಟು?? ಎಂಬ ಮಾಹಿತಿ ಇಲ್ಲಿದೆ ನೋಡಿ;

ಐಸಿಐಸಿಐ ಬ್ಯಾಂಕ್ (ICICI Bank)

ಐಸಿಐಸಿಐ ಬ್ಯಾಂಕಿನ ಪರಿಷ್ಕೃತ ದರ  ಎಂಸಿಎಲ್​ಆರ್ 10 ಮೂಲಾಂಶದಷ್ಟು ಏರಿಕೆಯಾಗಿದೆ. ಒಂದು ತಿಂಗಳವರೆಗಿನ ಎಂಸಿಎಲ್​ಆರ್ ಶೇಕಡಾ 8.05ರಿಂದ 8.15ಕ್ಕೆ ಹೆಚ್ಚಳವಾಗಿದ್ದು, ಆರು ತಿಂಗಳು ಮತ್ತು 1 ವರ್ಷ ಅವಧಿಯ ಎಂಸಿಎಲ್​ಆರ್ ಕ್ರಮವಾಗಿ ಶೇಕಡಾ 8.35 ಶೇಕಡಾ 8.40ಕ್ಕೆ ಏರಿಕೆ ಮಾಡಲಾಗಿದೆ. ಮೂರು ತಿಂಗಳ ಎಂಸಿಎಲ್​ಆರ್ ಅನ್ನು ಶೇಕಡಾ 8.25ರಿಂದ 8.35ಕ್ಕೆ ಹೆಚ್ಚಿಸಲಾಗಿದೆ.

ಇನ್ನೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ದರ (PNB) ಗಮನಿಸಿದರೆ:

ಸರ್ಕಾರಿ ಸ್ವಾಮ್ಯದ ಪಂಜಾನ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಎಂಸಿಎಲ್​ಆರ್​ ಅನ್ನು 5 ಮೂಲಾಂಶ ಏರಿಕೆ ಮಾಡಿದ್ದು, ಇದರೊಂದಿಗೆ ಬ್ಯಾಂಕ್​ನ ಒಂದು ವರ್ಷದ ಎಂಸಿಎಲ್​ಆರ್ ಈ ಹಿಂದೆ ಇದು ಶೇಕಡಾ 8.05 ಇತ್ತು. ಈಗ ಶೇಕಡಾ 8.10 ಆಗಿದೆ.  ಆರು ತಿಂಗಳ ಎಂಸಿಎಲ್​ಆರ್ ಶೇಕಡಾ 7.75ರಿಂದ ಶೇಕಡಾ 7.80ಗೆ ತಲುಪಿದೆ.

ಅದೇ ರೀತಿ ಬ್ಯಾಂಕ್ ಆಫ್ ಇಂಡಿಯಾ (Bank of India) ದ ಪರಿಷ್ಕೃತ ದರ ಗಮನಿಸಿದರೆ,

ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ಅನ್ನು 25 ಮೂಲಾಂಶ ಏರಿಕೆಯಾಗಿದ್ದು,  ಒಂದು ವರ್ಷ ಅವಧಿಯ ಎಂಸಿಎಲ್​ಆರ್ ಇದೀಗ ಶೇಕಡಾ 7.95ರಿಂದ 8.15ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ, ಮೂರು ತಿಂಗಳ ಮತ್ತು ಮೂರು ವರ್ಷಗಳ ಅವಧಿಯ ಎಂಸಿಎಲ್​ಆರ್ ಅನ್ನು ಕ್ರಮವಾಗಿ ಶೇಕಡಾ 7.30, ಶೇಕಡಾ 7.65 ಹಾಗೂ ಶೇಕಡಾ 7.70ಕ್ಕೆ ಏರಿಕೆ ಮಾಡಲಾಗಿದೆ.

Leave A Reply

Your email address will not be published.