KGF ಖ್ಯಾತಿಯ ತಾತ ಆಸ್ಪತ್ರೆಗೆ ದಾಖಲು

ಕೆಜಿಎಫ್ (KGF) ಸಿನಿಮಾದಿಂದ ಭಾರೀ ಖ್ಯಾತಿ ಪಡೆದು ನಂತರ ಕಿರುತೆರೆಯಲ್ಲಿ ನಟಿಸಿದ ತಾತಾ ಖ್ಯಾತಿಯ ಹಿರಿಯ ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ (Hopitalized) ‌ದಾಖಲಾದ ಕೃಷ್ಣ ಜಿ ರಾವ್ (Krishna G Rao) ಅವರು ಸದ್ಯ ಐಸಿಯುವಿನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಜಿಎಫ್ ಹಾಗು ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜೊತೆ ನಟಿಸಿ ದೊಡ್ಡ ಹೆಸರು ಮಾಡಿದ್ದ ಇವರು ಬೆಂಗಳೂರಿನ (Bengaluru) ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ಕೃಷ್ಣ ಜಿ ರಾವ್ ಅವರನ್ನು ಸುಸ್ತಾದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿತ್ತು. ಸದ್ಯಕ್ಕೆ ಐಸಿಯುನಲ್ಲಿ ತಾತ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Leave A Reply

Your email address will not be published.