Islam College: ಮುಸ್ಲಿಂ ಕಾಲೇಜುಗಳಲ್ಲಿ ಷರಿಯತ್ ಕಾನೂನು ಪಾಲನೆ!?
ಈ ಹಿಂದೆ ಹಿಜಾಬ್ ವಿಷಯದಲ್ಲಿ ಸಾಕಷ್ಟು ವಿವಾದಗಳು ನಡೆದಿತ್ತು. ಹಾಗೇ ಇದೀಗ ಕೆಲವು ಮುಸ್ಲಿಂ ಮಹಿಳೆಯರು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿರುವ ಕಾರಣ ಕರ್ನಾಟಕ ವಕ್ಫ್ ಮಂಡಳಿಯು ರಾಜ್ಯದಲ್ಲಿ ಹತ್ತು ಹೊಸ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಈ ಯೋಜನೆಗೆ ವಕ್ಫ್ ಮಂಡಳಿಯು ಆರ್ಥಿಕ ನೆರವನ್ನು ಒದಗಿಸಲಿದೆ. ಈ ಕಾಲೇಜುಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದಕ್ಕೆ ಹಾಗೂ ಶರಿಯತ್ ಕಾನೂನನ್ನು ಪಾಲಿಸುವುದಕ್ಕೆ ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದು ವಕ್ಫ್ ಮಂಡಳಿ ತಿಳಿಸಿರುವುದಾಗಿ ಮಾಹಿತಿ ದೊರೆತಿದೆ.
ಈ ರೀತಿಯ ಹೆಚ್ಚಿನ ಕಾಲೇಜುಗಳ ಸ್ಥಾಪನೆಗೆ ವಕ್ಫ್ ಬೋರ್ಡ್ ಚಿಂತನೆ ನಡೆಸಿದೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದ ವೇಳೆ ಸರ್ಕಾರದ ತೀರ್ಪು ಧರ್ಮ ತಟಸ್ಥ ಎಂದು ರಾಜ್ಯ ಆಡಳಿತವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿತ್ತು. ಹಾಗೂ ಪಿಎಫ್‌ಐ ಹಿಜಾಬ್ ಅನ್ನು ದಾಳವಾಗಿ ಬಳಸಿ ದೊಡ್ಡದಾದ ಪಿತೂರಿ ನಡೆಸುತ್ತಿದೆ ಎಂದು ಸರ್ಕಾರ ಪಿಎಫ್‌ಐ ಅನ್ನು ದೂಷಿಸಿತ್ತು. ಜೊತೆಗೆ ತನ್ನ ನಿಲುವನ್ನು ಸಮರ್ಥಣೆ ಮಾಡಿಕೊಂಡಿತ್ತು.
ನವೆಂಬರ್ 22 ರಂದು ಹಿಜಾಬ್ ಸಂಬಂಧಿತ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು. ಒಂದು ಗುಂಪಿಗೆ ಧಾರ್ಮಿಕ ವಸ್ತ್ರವನ್ನು ಧರಿಸಲು ಅನುಮತಿ ನೀಡಿದ್ದಕ್ಕಾಗಿ ಅಲ್ಲಿನ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ನಂತರ ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಆಗಮಿಸಲು ಕಾಲೇಜು ಮಂಡಳಿಯಲ್ಲಿ ಪ್ರವೇಶ ಕೇಳಿದರೂ ಕೂಡ ಮಂಡಳಿ ಅನುಮತಿ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ್ದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಕಾಲೇಜು ಮಂಡಳಿ ಹಾಗೂ ಅಲ್ಲಿನ ಅಧಿಕಾರಿ ವರ್ಗದ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ರಾಜ್ಯವಿಡೀ ಹಬ್ಬಿ ಕೋಲಾಹಲ ಸೃಷ್ಟಿಸಿತ್ತು. ನಂತರ ಕರ್ನಾಟಕದ ಹಲವಾರು ನಗರ ಪ್ರದೇಶಗಳಲ್ಲಿ ಕೂಡ ಇಂತಹದ್ದೆ ಪ್ರತಿಭಟನೆಗಳು ಆರಂಭವಾದವು. ಈ ಪ್ರತಿಭಟನೆ ಸಾಗರದಷ್ಟು ವಿಸ್ತಾರವಾಗುತ್ತಾ ಹೋಯಿತು. ಹಿಜಾಬ್ ಧರಿಸಿ ಕಾಲೇಜಿನ ತರಗತಿಗಳಿಗೆ ಆಗಮಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಹಿಂದೂ ವಿಧ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿ, ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಆಗಮಿಸಲಾಂಭಿಸಿದರು. ಹಿಂದೂ ವಿದ್ಯಾರ್ಥಿಗಳ ಪ್ರತಿಭಟನೆ ಕೂಡ ಎಲ್ಲೆಡೆ ಹಬ್ಬಿತು.
ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಹಿಜಾಬ್ ಕುರಿತು ವಿಭಜಿತ ತೀರ್ಪು ನೀಡಿದ್ದರು ಮತ್ತು ನಂತರದ ವಿಚಾರಣೆಗಾಗಿ ಅದನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಲಾಯಿತು. ಅದಕ್ಕೂ ಮುಂಚಿತವಾಗಿ ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ತೀರ್ಪು ನೀಡಿತು. ಹಾಗೂ ವೈಯಕ್ತಿಕ ಆಯ್ಕೆಗಿಂತ ಸಂಸ್ಥೆಯ ಶಿಸ್ತು ಮುಖ್ಯ, ಸಂಸ್ಥೆಯ ನೀತಿ ನಿಯಮಗಳಿಗೆ ಅನುಸಾರವಾಗಿ ಅಲ್ಲಿ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿಕೊಂಡು ಶಾಲೆ,ಕಾಲೇಜಿಗೆ ತೆರಳಬೇಕು ಎಂದು ಆದೇಶ ನೀಡಿತ್ತು.