ಇಂದಿನಿಂದ ಡಿಜಿಟಲ್ ರುಪಾಯಿ ಜಾರಿಗೆ | ಯಾವ ಬ್ಯಾಂಕ್ಗಳಲ್ಲಿ ದೊರೆಯುತ್ತೆ ? ಇದರ ಬಳಕೆ ಹೇಗೆ ?
2022-23ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದ ಅನ್ವಯ, ಸೆಂಟ್ರಲ್ ಬ್ಯಾಂಕ್ (Central Bank) ಡಿಜಿಟಲ್ ಕರೆನ್ಸಿ (Digital Currency) ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank Of India) ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ ತರುವುದಾಗಿ ತಿಳಿಸಿದೆ.
ಆನ್ಲೈನ್ ವಹಿವಾಟು ನಡೆಸುವಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿಕೊಂಡು ರೂಪಾಯಿಗಳನ್ನು ಬಳಕೆ ಮಾಡಬಹುದಾಗಿದೆ. ವ್ಯಾಲೆಟ್ನಲ್ಲಿ ಡಿಜಿಟಲ್ ಕರೆನ್ಸಿ ಬ್ಯಾಲೆನ್ಸ್ ಇದ್ದರೂ ಸಹಿತ ಅದರ ಮೇಲೆ ಯಾವುದೇ ಬಡ್ಡಿ ಹೇರಲಾಗುವುದಿಲ್ಲ ಎಂದು ಆರ್ಬಿಐ ಅಧಿಕೃತ ಪ್ರಕಟಣೆ ನೀಡಿದೆ.2022-23ರ ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಸೆಂಟ್ರಲ್ ಬ್ಯಾಂಕ್ (Central Bank) ಡಿಜಿಟಲ್ ಕರೆನ್ಸಿ (Digital Currency) ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank Of India) ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ.
ಡಿಜಿಟಲ್ ರೂಪಾಯಿ ಸಾಮಾನ್ಯವಾಗಿ ಜನರು ಮೂಲಭೂತವಾಗಿ ಪ್ರತಿದಿನ ಬಳಕೆ ಮಾಡುವ ಸಾಂಪ್ರದಾಯಿಕ ಕರೆನ್ಸಿಯ ಡಿಜಿಟಲ್ ಆವೃತ್ತಿಯಾಗಿದ್ದು, ಇದರ ಮೂಲಕ ಹಣವನ್ನು ಸುರಕ್ಷಿತ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದಾಗಿದೆ.
ಆರ್ಬಿಐ ಹೇಳಿದಂತೆ ಇ-ರೂಪಾಯಿ ಡಿಜಿಟಲ್ ಟೋಕನ್ನ ಒಂದು ರೂಪವಾಗಿದ್ದು ಇದು ಕಾನೂನು ಟೆಂಡರ್ ಅನ್ನು ಪ್ರತಿನಿಧಿಸುತ್ತದೆ.ಆರ್ಬಿಐ , ಈ ಯೋಜನೆ ಜಾರಿಗೆ ನಾಲ್ಕು ಬ್ಯಾಂಕ್ಗಳನ್ನು ಗುರುತಿಸಿದ್ದು ಎಸ್ಬಿಐ (SBI), ಐಸಿಐಸಿಐ (ICICI) ಸೇರಿ , ನಾಲ್ಕು ಬ್ಯಾಂಕ್ಗಳು ಡಿಜಿಟಲ್ ರೂಪಾಯಿಗಳನ್ನು (Digital Rupee) ಬಿಡುಗಡೆ ಮಾಡಲಿದ್ದು, ಈ ಬ್ಯಾಂಕ್ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ (Digital Wallet) ಮೂಲಕ ಸುಲಭವಾಗಿ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ವ್ಯಾಪಾರ-ವಹಿವಾಟನ್ನು ಸರಳಗೊಳಿಸುವ ಜೊತೆಗೆ ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ, ನೋಟುಗಳನ್ನು ಮುದ್ರಿಸುವ, ವಿತರಿಸುವ ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯ ಮಾಡಲು, ಜಾಗತಿಕ ಸ್ವೀಕಾರ, ಸುಲಭ ಬಳಕೆ, ವಂಚನೆಯಿಂದ ಪಾರು ಮಾಡುವ ದೆಸೆಯಲ್ಲಿ ಡಿಜಿಟಲ್ ರೂಪಾಯಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಅಂದಾಜಿಸಲಾಗಿದೆ.
ಡಿಜಿಟಲ್ ರೂಪಾಯಿ ಚಲಾವಣೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ಡಿಸೆಂಬರ್ 1 ರಿಂದಲೇ ಕೆಲವು ಬಳಕೆದಾರರು ವಹಿವಾಟು ಮಾಡಲು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಚಾಲನೆ ಹಂತಹಂತವಾಗಿ ನಡೆಯಲಿದ್ದು, ಮೊದಲ ಹಂತದಲ್ಲಿ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಮತ್ತು ಐಡಿಎಫ್ಸಿ ಬ್ಯಾಂಕ್ಗಳು ಡಿಜಿಟಲ್ ಹಣ ಒದಗಿಸಲಿವೆ.
ಪ್ರಸ್ತುತ ಪೇಪರ್ ಕರೆನ್ಸಿ ಮತ್ತು ನಾಣ್ಯಗಳಲ್ಲಿರುವ ಮೌಲ್ಯದಲ್ಲೇ ಡಿಜಿಟಲ್ ಕರೆನ್ಸಿಯನ್ನು ಆರ್ಬಿಐ ವಿತರಿಸಲಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಬ್ಯಾಂಕ್ಗಳಂತಹ ಮಧ್ಯವರ್ತಿಗಳ ಮೂಲಕ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ವಿತರಣೆ ಮಾಡುವ ಕುರಿತು ಆರ್ಬಿಐ ಮಾಹಿತಿ ನೀಡಿದೆ. ಇದು ಮೊದಲಿಗೆ, ಬೆಂಗಳೂರು, ಮುಂಬೈ, ದೆಹಲಿ, ಭುವನೇಶ್ವರದಲ್ಲಿ ಈ ಪ್ರಯೋಗಗಳನ್ನು ನಡೆಸಲಾಗುತ್ತದೆ.
ಈ ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ ಮೂಲಕ ವ್ಯವಹಾರ ನಡೆಸಬಹುದು. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳನ್ನು ಮಾಡಬಹುದಾಗಿದೆ.
ಅರ್ಹ ಬ್ಯಾಂಕ್ಗಳು ನೀಡುವ ಮತ್ತು ಮೊಬೈಲ್ ಫೋನ್ಗಳು ಅಥವಾ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯೊಂದಿಗೆ ವಹಿವಾಟು ನಡೆಸಲು ಅನುವು ಮಾಡಿಕೊಡಲಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದಾಗಿದ್ದು, ಡಿಜಿಟಲ್ ರೂಪಾಯಿಯ ಮೂಲಕ, ವಹಿವಾಟು ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿಯ (P2M) ನಡುವೆ ನಡೆಸಬಹುದು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ.
ಈ ಪ್ರಾಯೋಗಿಕ ಯೋಜನೆಯ ಪ್ರಾರಂಭಿಕ ಮೊದಲ ಹಂತದಲ್ಲಿ ಜಾರಿಯಾಗಲಿದ್ದು, ಇನ್ನೂ ಬೆಂಗಳೂರು, ಮುಂಬೈ, ಹೊಸದಿಲ್ಲಿ, ಭುವನೇಶ್ವರದಲ್ಲಿ ಜಾರಿಗೆ ತರಲು ಮುಂದಾಗಿದೆ. ಈ ಬಳಿಕ ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಅಹಮದಾಬಾದ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಾಟ್ನಾ ಮತ್ತು ಶಿಮ್ಲಾಕ್ಕೂ ವಿಸ್ತರಣೆ ಮಾಡುವ ಕುರಿತು ಆರ್ಬಿಐ ಮಾಹಿತಿ ನೀಡಿದೆ.
ಶೀಘ್ರದಲ್ಲೇ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಎಚ್ಡಿಎಫ್ಸಿ, ಕೋಟಕ್ ಮಹೀಂದ್ರ ಬ್ಯಾಂಕ್ಗಳು ಸೇರಿದಂತೆ ಇನ್ನೂ ನಾಲ್ಕು ಬ್ಯಾಂಕ್ಗಳು ಪ್ರಾಯೋಗಿಕ ಯೋಜನೆಗೆ ಸೇರಲಿವೆ.