ನಿಮಗೆ ಮದುವೆಯಾಗಿದೆಯೇ ? ಹಾಗಾದರೆ ದೊರೆಯಲಿದೆ ರೂ. 5,000 ಪಿಂಚಣಿ | ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ
ನಮ್ಮ ಭವಿಷ್ಯದ ಚಿಂತನೆ ನಡೆಸುವ ಪ್ರತಿಯೊಬ್ಬರು ಕೂಡ ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳುವುದು ಸಹಜ.. ಅದರಂತೆ, ನಾಳೆ ಏನಾಗುವುದೋ ಯಾರು ಊಹಿಸಲು ಸಾಧ್ಯವಿಲ್ಲ. ಈ ರೀತಿಯ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಮುಂದೊಂದು ದಿನ ಎದುರಾಗುವ ಆರ್ಥಿಕ ಮುಗ್ಗಟ್ಟಿನ ಸಮಸ್ಯೆಯನ್ನು ನಿಭಾಯಿಸಲು ನೆರವಾಗುವುದು ಖಚಿತ!!
ನಮ್ಮ ಜೀವನದಲ್ಲಿ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಮದುವೆ ಪ್ರಮುಖ ಪಾತ್ರ ವಹಿಸುತ್ತದೆ. ಹೌದು!!.ಈ ಪ್ರಮುಖ ಘಟ್ಟವನ್ನು ಸಾಮಾನ್ಯವಾಗಿ ನಾವು ದಾಟಿದಾಗ ಹಣದ ಅವಶ್ಯಕತೆ ಮುಖ್ಯವಾಗುತ್ತದೆ. ಜೀವನದ ಎಲ್ಲ ಹಂತದಲ್ಲಿಯೂ ಹಣವು ಅತೀ ಮುಖ್ಯವಾಗಿದ್ದು, ಅದರಂತೆಯೇ ವಿವಾಹಕ್ಕೂ ಕೂಡಾ ಅತ್ಯವಶ್ಯಕವಾಗಿದೆ.
ಉಳಿತಾಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು, ಅದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಯೋಜನೆ ಕೂಡ ಒಂದಾಗಿದ್ದು, ನೀವು ವಿವಾಹಿತರಾಗಿದ್ದರೆ ಮಾಸಿಕ ಐದು ಸಾವಿರ ರೂಪಾಯಿ ನಿಮಗೆ ಸಿಗುವುದಾದರೆ ನೀವು ಅದರ ಸದುಪಯೋಗ ಪಡಿಸಿಕೊಳ್ಳಲು ಒಪ್ಪುತ್ತೀರಾ?? ಅಥವಾ ಬೇಡ ಎಂದು ಬಿಟ್ಟು ಬಿಡುತ್ತಿರಾ? ಹೌದು ಎನ್ನುವುದಾದರೆ, ಇಲ್ಲಿದೆ ನೋಡಿ ಮಾಹಿತಿ:
ಈ ಒಂದು ಯೋಜನೆಯಲ್ಲಿ ನೀವು ವಿವಾಹಿತರಾಗಿದ್ದರೆ ಮಾಸಿಕ ಐದು ಸಾವಿರ ರೂಪಾಯಿಯನ್ನು ಪಡೆಯಬಹುದಾಗಿದೆ.ಅಟಲ್ ಪಿಂಚಣಿ ಯೋಜನೆಯು ಅತೀ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಲ್ಲಿ ನೀವು ವಿವಾಹಿತರಾಗಿದ್ದರೆ ಮಾತ್ರ ಈ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ.
ಈ ಯೋಜನೆಯ ಮೂಲಕ ಮಾಸಿಕವಾಗಿ 5 ಸಾವಿರ ರೂಪಾಯಿಯನ್ನು ಪಡೆಯಬಹುದಾಗಿದೆ. ಈ ಯೋಜನೆಯ ಲಾಭವನ್ನು ಪತಿ, ಪತ್ನಿ ಇಬ್ಬರೂ ಪಡೆಯಬಹುದು. ನೀವು ಈ ಯೋಜನೆಯಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿವರೆಗೆ ಹಣವನ್ನು ಪಡೆಯಬಹುದಾಗಿದೆ.ಈ ಯೋಜನೆಯು 18 ವರ್ಷದಿಂದ 40 ವರ್ಷದೊಳಗಿನವರಿಗೆ ಆಗಿದ್ದು, ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಮೊದಲು ಹೂಡಿಕೆಯನ್ನು ಮಾಡಬೇಕಾದ ಅವಶ್ಯಕತೆ ಇದೆ.
ಈ ಯೋಜನೆಯ ಲಾಭವನ್ನು ಪಡೆಯಲು ಮೊದಲು ನಿಮ್ಮಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲದೆ ಇದ್ದಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗಿದ್ದು, ನಂತರ ಸಮೀಪದ ಅಂಚೆ ಕಚೇರಿಯಲ್ಲಿ ಅಟಲ್ ಪಿಂಚಣಿ ಯೋಜನೆಯ ಅರ್ಜಿಯನ್ನು ಭರ್ತಿ ಮಾಡಬೇಕು.
ನೀವು ಈ ಯೋಜನೆಯ ಪ್ರಯೋಜನ ಪಡೆಯಲು, ನಿಮ್ಮಲ್ಲಿ ಬ್ಯಾಂಕ್ ಖಾತೆ ಇರಬೇಕಾಗಿದ್ದು, ಹಾಗೆಯೇ ಆಧಾರ್ ಕಾರ್ಡ್, ಮೊಬೈಲ್ ಫೋನ್ ದಾಖಲೆಗಳು ಬೇಕಾಗುತ್ತವೆ. ಈ ಯೋಜನೆ ಪಿಂಚಣಿ ಆಧಾರದಲ್ಲಿ ನಿಮಗೆ ಲಭ್ಯವಾಗಲಿದ್ದು, ಹಾಗಾಗಿ, ನಿಮಗೆ 60 ವರ್ಷವಾದಾಗ ಈ ಯೋಜನೆಯಡಿಯಲ್ಲಿ ನಿಮಗೆ ಪಿಂಚಣಿಯ ಲಾಭ ಪಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರರು ಸಾವನ್ನಪ್ಪಿದರೆ ಮುಂದೇನಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಈ ಯೋಜನೆಯಲ್ಲಿ ಅರ್ಜಿದಾರರು ನಿಧನರಾದರೂ ಕೂಡ ಈ ಯೋಜನೆಯ ಲಾಭ ದೊರೆಯಲಿದ್ದು, ಅಂದರೆ ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಸಿಗಲಿದೆ.
ಒಂದು ವೇಳೆ, ಅರ್ಜಿದಾರರಾದ ಪತಿ ಮರಣ ಹೊಂದಿದರೆ ಕುಟುಂಬ ಸದಸ್ಯೆಯಾದ ಪತ್ನಿಗೆ ಈ ಪಿಂಚಣಿ ಲಭ್ಯವಾಗಲಿದೆ. ಅಥವಾ, ಅರ್ಜಿದಾರರ ಪತ್ನಿ ಮರಣ ಹೊಂದಿದರೆ ಪತಿಗೆ ಪಿಂಚಣಿ ದೊರೆಯಲಿದ್ದು, ಅಲ್ಲದೆ, ಪತಿ, ಪತ್ನಿ ಇಬ್ಬರೂ ಸಾವನ್ನಪ್ಪಿದ ಸಂದರ್ಭದಲ್ಲಿ ಕೆಲವು ಷರತ್ತುಗಳು ಅನುಸಾರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ನೀವು ವಿವಾಹಿತರಾಗಿದ್ದು, 40 ವರ್ಷದ ಒಳಗಿನವರಾಗಿದ್ದರೆ, ಇನ್ನೂ ಈ ಯೋಜನೆ ಅಡಿಯಲ್ಲಿ ಸೇರ್ಪಡೆ ಯಾಗದಿದ್ದರೆ, ಯೋಜನೆಗೆ ಅರ್ಜಿ ಸಲ್ಲಿಸಿ ಪಿಂಚಣಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.