ಹರಿಪ್ರಿಯಾ ವಸಿಷ್ಠ ವಯಸ್ಸಿನ ಅಂತರವೆಷ್ಟು? ಯಾರು ದೊಡ್ಡವರು…ಇವರೊಳಗೆ?

ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸಂಭ್ರಮ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಮದುವೆ ಅದ್ಧೂರಿಯಾಗಿ ನಡೆಯಿತು. ಇದರ ಬೆನ್ನಲ್ಲೇ ಬಂದ ಸುದ್ದಿ ಹರಿ ಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಸುದ್ದಿ. ಈ ಮದುವೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಬರದಿದ್ದರೂ ಅಲ್ಲಲ್ಲಿ ಗುಸುಗುಸು ಮಾತು ಕೇಳಿ ಬರುತ್ತಿದೆ. ಹೌದು ಈಗಾಗಲೇ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಅದಲ್ಲದೆ ಸಾವಿರಾರು ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಹೌದು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ . ಇದನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇವರು ದುಬೈಗೆ ತೆರಳಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ.

 

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ತಿಳಿದುಕೊಳ್ಳುವ ಹಂಬಲ ಇದ್ದೇ ಇರುತ್ತದೆ. ಹಾಗೆಯೇ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ . ಸದ್ಯ ವಯಸ್ಸಿನಲ್ಲಿ ಹರಿಪ್ರಿಯಾಗಿಂತ ವಸಿಷ್ಠ ಸಿಂಹ ಮೂರು ವರ್ಷ ದೊಡ್ಡವರು ಎಂಬ ಮಾಹಿತಿ ಹೊರಬಂದಿದೆ.

ಹರಿಪ್ರಿಯಾಗೆ 31 ವರ್ಷ ವಯಸ್ಸು ನಡೆಯುತ್ತಿದ್ದು ಅವರು ಜನಿಸಿದ್ದು 1991ರಲ್ಲಿ. ವಸಿಷ್ಠ ಸಿಂಹ ಜನಿಸಿದ್ದು 1988ರಲ್ಲಿ. ಅವರ ವಯಸ್ಸು 34 ಆಗಿದೆ. ಆದರೆ ವಿಶೇಷ ಏನೆಂದರೆ ಇಬ್ಬರೂ ಜನಿಸಿದ್ದು ಅಕ್ಟೋಬರ್ ತಿಂಗಳಲ್ಲೇ. ಹರಿಪ್ರಿಯಾ ಬರ್ತ್​ಡೇ ಅಕ್ಟೋಬರ್ 29 ಹಾಗೂ ವಸಿಷ್ಠ ಸಿಂಹ ಹುಟ್ಟುಹಬ್ಬ ಅಕ್ಟೋಬರ್ 19ರಂದು ಆಗಿದೆ.

ಸದ್ಯಕ್ಕೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಡಿಸೆಂಬರ್ ತಿಂಗಳಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡುತ್ತಿದೆ ಆದರೆ ಈ ಬಗ್ಗೆ ಸ್ವತಃ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದರಿಂದ ಇವರ ಅಭಿಮಾನಿಗಳಿಗೆ ಈ ವಿಚಾರ ಗೊಂದಲದ ಪ್ರಶ್ನೆ ಆಗಿಯೇ ಉಳಿದಿದೆ.

Leave A Reply

Your email address will not be published.