Marriage Cancel : ‘ಕೋಳಿ’ಯಿಂದಾಗಿ ಮದುವೆ ಕ್ಯಾನ್ಸಲ್ | ಏನಿದು ಕೋಳಿ ಜಗಳ? ಠಾಣೆ ಮೆಟ್ಟಿಲೇರಿದ ಚಿಕನ್ ವಿಷಯ!

ಮದುವೆ ಅಂದರೆ ಗಂಡು ಹೆಣ್ಣಿನ ಮನೆಯಲ್ಲಿ ಸಡಗರ ಸಂಭ್ರಮ ಮನೆಮಾಡುತ್ತೆ. ಅದರಲ್ಲೂ ಮುಖ್ಯವಾಗಿ ಊಟ ಉಪಚಾರದ ವಿಷಯದಲ್ಲಿ ಕೂಡಾ ಹಾಗೆನೇ. ಎಲ್ಲನೂ ಫರ್ಫೆಕ್ಟ್ ಆಗಿದ್ದರೆ ಚಂದ. ಅಷ್ಟು ಮಾತ್ರವಲ್ಲದೇ ಗಂಡು ಹಾಗೂ ಹೆಣ್ಣಿನ ಕುಟುಂಬದ ನಡುವೆಯೂ ಹೊಂದಾಣಿಕೆ ಇರಬೇಕು. ಇಲ್ಲವಾದರೆ ಆಗಬಾರದ್ದು ಆಗುತ್ತೆ ಎನ್ನೋದಕ್ಕೆ ಈ ಘಟನೆಯೇ ಉದಾಹರಣೆ.

ಹೋದ ಮನೆಯಲ್ಲಿ ತನ್ನ ಮಗಳು ಚೆನ್ನಾಗಿರಲಿ ಎಂದು ಹೆಣ್ಣಿನ ಕಡೆಯವರು ಕಷ್ಟಪಟ್ಟು ಎಲ್ಲವನ್ನೂ ಆದಷ್ಟು ಯಾವುದೂ ಕಡಿಮೆಯಾಗದ ಹಾಗೇ ನೋಡ್ಕೋತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಗಂಡಿನ ಕಡೆಯವರು ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ದೊಡ್ಡದು ಮಾಡ್ತಾರೆ. ಹೀಗೆ ಮಾಡಲು ಹೋಗಿ ಇಲ್ಲೊಂದು ಮದುವೆಯೇ ರದ್ದಾಗಿದೆ. ಕಾರಣ, ಮದುವೆ ಮನೆಯಲ್ಲಿ ವರನ ಸ್ನೇಹಿತರಿಗೆ ಚಿಕನ್ ಊಟ ಬಡಿಸಿಲ್ಲವಂತೆ! ಇದೇ ಕಾರಣಕ್ಕೆ ನನಗೆ ಮದುವೆ ಬೇಡ, ನಾನು ಮದ್ವೆಯಾಗಲ್ಲ ಅಂತ ವರ ಪಟ್ಟು ಹಿಡಿದಿದ್ದಾನೆ. ಹೀಗಾಗಿ ಮದುವೆ ಕ್ಯಾನ್ಸಲ್ ಆಗಿದ್ದು, ವಧು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಹೌದು ಒಂದು ಕೋಳಿಯಿಂದಾಗಿ ಎಲ್ಲರೂ ಸಂಭ್ರಮಿಸಬೇಕಾಗಿದ್ದ ಮದುವೆ ಮನೆಯಲ್ಲಿ ಜಗಳ ನಡೆದು ಮದುವೆ ಕ್ಯಾನ್ಸಲ್ ಆಗಿದೆ. ಈ ಘಟನೆ ತೆಲಂಗಾಣ ರಾಜ್ಯದ ಜೀಡಿಮೆಟ್ ಎಂಬಲ್ಲಿ ನಡೆದಿದೆ. ತೆಲಂಗಾಣದ ವರನಿಗೆ ಬಿಹಾರ ಮೂಲದ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ಒಪ್ಪಿ ಮದುವೆ ನಿಶ್ಚಯವಾಗಿತ್ತು. ಹೈದರಾಬಾದ್‌ನ ಜೀಡಿಮೆಲ್ಲಾ ಉಪ ಪ್ರದೇಶವಾದ ಶಹಪುರನಗರದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಕೋಳಿಯಿಂದಾಗಿ ಮದುವೆ ಕ್ಯಾನ್ಸಲ್ ಆಗಿದೆ.

ವರನು ಜಗದ್ದಿರಿಗುಟ್ಟದ ರಿಂಗ್‌ಬಸ್ತಿ ಮೂಲದವರಾಗಿದ್ದು, ವಧು ಬಿಹಾರದ ಮಾರ್ವಾಡಿ ಕುಟುಂಬಕ್ಕೆ ಸೇರಿದವಳು. ವಧು ಬಿಹಾರದ ಮಾರ್ವಾಡಿ ಕುಟುಂಬದವರಾಗಿರುವುದರಿಂದ ವಿಶೇಷವಾಗಿ ಸಸ್ಯಹಾರಿ ಖಾದ್ಯಗಳು, ಸಿಹಿ ತಿನಿಸುಗಳನ್ನು ಮಾಡಿಸಿದ್ದರು. ಹೀಗಾಗಿ ನಾನ್‌ವೆಜ್ ಇಲ್ಲ ಅಂತ ಅತಿಥಿಗಳಲ್ಲಿ ಅಸಮಾಧಾನದ ಗೊಣಗಾಟ ಪ್ರಾರಂಭವಾಯಿತು. ಈ ವೇಳೆ ಮದುಮಗನ ಗೆಳೆಯರು ಡೈನಿಂಗ್ ಹಾಲ್ ಗೆ ಬಂದರು. ಚಿಕನ್ ಅಡುಗೆ ಬೇಕೇ ಬೇಕು ಅಂತ ಹುಡುಗಿ ಮನೆಯವರ ಜೊತೆ ವಾಗ್ವಾದ ನಡೆಸಿದರು. ಚಿಕನ್ ಇಲ್ಲದ ಊಟ ಬೇಡ ಅಂತ ಊಟ ಮಾಡದೇ ಎದ್ದು ಹೋದ ಗೆಳೆಯರು, ವರನ ಹತ್ತಿರ ಈ ಬಗ್ಗೆ ಕಂಪ್ಲೇಂಟ್ ಮಾಡಿದ್ರು.

ಕೂಡಲೇ ನಾನು ಮದುವೆ ಆಗುವುದಿಲ್ಲ ಅಂತ ವರ ಪಟ್ಟು ಹಿಡಿದಿದ್ದಾನಂತೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ವಧುವಿನ ಮನೆಯವರು ಜೀಡಿಮೆಟ್ಲ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಮಾತನಾಡಿದ್ದಾರೆ.

ಅಂತೂ ‘ಕೋಳಿ ಜಗಳ’ ದಿಂದ ಮದುವೆ ಕ್ಯಾನ್ಸಲ್ ಆಗಿರುವುದು ಮಾತ್ರ ದುರದೃಷ್ಟಕರ ಎಂದೇ ಹೇಳಬಹುದು.

Leave A Reply

Your email address will not be published.