ಕರಾವಳಿಯಲ್ಲಿ ʼಲವ್‌ ಜಿಹಾದ್‌ ʼವಿರುದ್ದ ಪೋಸ್ಟರ್‌ ವಾರ್‌ : ಮುಸ್ಲಿಂ ಸುಮುದಾಯದ ವಿರುದ್ಧ ಪುನೀತ್‌ ಅತ್ತಾವರ್‌ ಎಚ್ಚರಿಕೆ

ದಕ್ಷಿಣ ಕನ್ನಡ :  ದೆಹಲಿ ಶ್ರದ್ಧಾ ಕೇಸ್‌ ಮುಂದಿಟ್ಟುಕೊಂಡು ಇದೀಗ ಕರಾವಳಿ ಭಾಗದಲ್ಲಿ ಮತ್ತೊಂದು ಧರ್ಮ ದಂಗಲ್‌ ಕಿಚ್ಚು ಹಚ್ಚಲಾಗಿದೆ. ಲವ್‌ ಜಿಹಾದ್‌ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ಪೋಸ್ಟರ್‌ ಮೂಲಕ ಜಾಗೃತಿ ಮೂಡಿಸುವ ಮೂಲಕ ಮುಸ್ಲಿಂ ಸಮುದಾಯದವರ ವಿರುದ್ಧ ಖಡಕ್‌ ಎಚ್ಚರಿಕೆ ನೀಡಲಾಗಿದೆ.

 

ಒಂದು ಪೋಸ್ಟರ್‌ನಲ್ಲಿ ಹೀಗೆ ಬರೆದಿದ್ದು, “ಕಣ್ಣಿದ್ದು ಕುರುಡಾಗಬೇಡಿ” ತಿಳಿದು ತಪ್ಪು,ಮಾಡಬೇಡಿ.. ಹಿಂದೂ ಯುವತಿಯ ಜೊತೆ ತಿರುಗಾಡಿದ್ರೆ ಹುಷಾರ್‌..! ಶವ ಯಾತ್ರೆ ಮಾಡಲಾಗುತ್ತದೆ ಎಂದು ಮುಸ್ಲಿಂ ಯುವಕರಿಗೆ ಭಜರಂಗದಳ ಸಂಚಾಲಕ ಪುನೀತ್‌ ಅತ್ತಾವರ್‌ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಪದೇ ಪದೇ ಹೇಳುತ್ತಿದ್ದೇವೆ ಹಿಂದು ಹುಡುಗಿಯರ ಜೊತೆ ತಿರುಗೇಡಿ ʻಲವ್‌ ಜಿಹಾದ್‌ʼ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ. ನೀವು ಕೇಳುತ್ತಿಲ್ಲ ನಂತೂರು ಘಟನೆ ಕೇವಲ ಸ್ಯಾಂಪಲ್‌ ಮಾತ್ರ ಇನ್ನೂ ಕೂಡ ನೀವು ಲಬ್‌ ಜಿಹಾದ್‌ ನಿಲ್ಲಿಸದಿದ್ದರೆ ನಿಮಗೆ ಮಯ್ಯತ್‌ ಶತಸಿದ್ಧ ಎಂದು  ಪುನೀತ್‌ ಅತ್ತಾವರ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇದೀಗ ಮತ್ತೊಂದು ಧರ್ಮ ದಂಗಲ್‌ಗೆ ಕಾರಣವಾಗಿದಂತೂ ನಿಜ

Leave A Reply

Your email address will not be published.