ಟ್ರಾಫಿಕ್ ಇಂದ ಮುಖದ ತ್ವಚೆ ಹಾಳು ಆಗ್ತಾ ಇದ್ಯಾ? ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರಿನ ನಿವಾಸಿಗರಿಗಂತು ಈ ಸಮಸ್ಯೆ ತಪ್ಪಿದ್ದಲ್ಲ. ಯಾಕೆಂದರೆ ದಿನನಿತ್ಯ ಹೊರಗೆ ಓಡಾಡುವ ಮತ್ತು ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಜನರಿಗೆ ಈ ಎಲ್ಲಾ ಸಮಸ್ಯೆಗಳು ತಪ್ಪಿದ್ದಲ್ಲ. ಧೂಳಿನಿಂದ, ವಾಹನಗಳ ಹೊಗೆಯಿಂದ ಮುಖದಲ್ಲಿ ಕಜ್ಜಿಗಳು ಆಗುವುದು ಸಾಮಾನ್ಯ. ಹಾಗಾದ್ರೆ ಸಿಂಪಲ್ ಆಗಿ ಇದರಿಂದ ಹೀಗೆ ಬಚಾವ್ ಆಗಿ.
ಮಾಸ್ಕ್:- ಕೋರೋನದ ಸಮಯದಲ್ಲಿ ಮಾಸ್ಕ್ ಕಡ್ಡಾಯ ಇತ್ತು. ಬರ್ತಾ ಬರ್ತಾ ಯಾರು ಹಾಗ್ತ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ದಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಹಾಕ್ಲೇ ಬೇಕು. ನೀವು ಟ್ರಾಫಿಕ್ ನಲ್ಲಿ ರಸ್ತೆಯಲ್ಲಿ ಚಲಿಸುವಾಗ ಮಾಸ್ಕ್ ಧರಿಸಿ. ನಿಮ್ಮ ಮುಖದ ಅರ್ಧ ಭಾಗ ಮುಚ್ಚುತ್ತದೆ. ಇದರಿಂದ ನಿಮ್ಮ ಮುಖದ ತ್ವಚೆಯನ್ನು ರಕ್ಷಿಸಬಹುದು. ಹಾಗೆಯೇ ಶಾಲ್ ಕೂಡ ಹಾಕಿಕೊಳ್ಳಬಹುದು.
ಆಫೀಸಿನಿಂದ ಮನೆಗೆ ತೆರಳಿದ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಆಗಾಗ ಈ ಕ್ರಮವನ್ನು ಪಾಲನೆ ಮಾಡಿದರೆ ತುಂಬಾ ಒಳಿತು. ವೆಟ್ ಟಿಷ್ಯು ಕೂಡ ಬಳಸಬಹುದು.
ನಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ನೀರನ್ನು ಕುಡಿಯಲೇ ಬೇಕು. ದಿನಕ್ಕೆ 2 ಗ್ಲಾಸ್ ಆದ್ರೂ ನೀರು ಕುಡಿಯುವುದು ಸೂಕ್ತ. ನಾಯಕ್, ನಾಯಕಿ ನಟಿಯರು ತಮ್ಮ ಬ್ಯುಸಿ ಲೈಫ್ ಅಲ್ಲಿ ನೀರನ್ನು ಹೆಚ್ಚು ಕುಡಿಯುತ್ತಾರೆ. ಹೀಗಾಗಿ ಮುಖದ ಸೌಂದರ್ಯ ಕಡಿಮೆ ಆಗುವುದಿಲ್ಲ.
ಇಲ್ಲಿ ತಿಳಿಸಲಾದ ಒಂದಷ್ಟು ಟಿಪ್ಸ್ ಗಳು ಫಾಲೋ ಮಾಡೋದ್ರಿಂದ ನಿಮ್ಮ ಸೌಂದರ್ಯ ಹೀಗೆ ವೃದ್ಧಿಸುತ್ತದೆ ಎಂದು ನೀವೇ ಕಾಣಬಹುದು.