ವಾಹನ ಸವಾರರೇ ಗಮನಿಸಿ | ಟೋಲ್ ತೆರಿಗೆ ನಿಯಮ ಚೇಂಜ್ – ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಹೆದ್ದಾರಿಗಳ ಟೋಲ್ ತೆರಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೋಟ್ಯಂತರ ಚಾಲಕರ ಮೇಲೆ ಪರಿಣಾಮ ಬೀರುವ ಟೋಲ್ ತೆರಿಗೆ ಬಗ್ಗೆ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.

 

ಹೌದು, 2024ರ ವೇಳೆಗೆ ದೇಶದಲ್ಲಿ 26 ಹಸಿರು ಎಕ್ಸ್ಪ್ರೆಸ್ ವೇ ಗಳನ್ನು ನಿರ್ಮಿಸಲಾಗುವುದು ಮತ್ತು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಸಹ ಹೊರಡಿಸಲಾಗುವುದು ಎಂದು ಗಡ್ಕರಿ ಹೇಳಿದರು.

ಈ ಟೋಲ್ ಟ್ಯಾಕ್ಸ್ ತಂತ್ರಜ್ಞಾನದಲ್ಲಿ ಬದಲಾವಣೆ ತರಲಾಗುವುದು ಎಂದು ಅವರು, ಗ್ರೀನ್ ಎಕ್ಸ್ಪ್ರೆಸ್ ವೇ ನಿರ್ಮಾಣದ ನಂತರ ಭಾರತವು ರಸ್ತೆಗಳ ವಿಷಯದಲ್ಲಿ ಅಮೆರಿಕಕ್ಕೆ ಸರಿಸಮಾನವಾಗಲಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದರೊಂದಿಗೆ ಟೋಲ್ ತೆರಿಗೆ ಸಂಗ್ರಹಿಸುವ ನಿಯಮಗಳು ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನ ನೀಡಲು ಸರ್ಕಾರ ಯೋಜಿಸುತ್ತಿದೆ. ಇವುಗಳಲ್ಲಿ ಮೊದಲನೆಯದು ಕಾರುಗಳಲ್ಲಿ ‘ಜಿಪಿಎಸ್’ ವ್ಯವಸ್ಥೆಯನ್ನು ಅಳವಡಿಸಿದರೆ, ಎರಡನೆಯ ವಿಧಾನವು ಆಧುನಿಕ ನಂಬರ್ ಪ್ಲೇಟ್ಗೆ ಸಂಬಂಧಿಸಿದ್ದು. ಸದ್ಯಕ್ಕೆ ಇದಕ್ಕಾಗಿ ಯೋಜನೆ ಜಾರಿಯಲ್ಲಿದೆ.

ಹಾಗೆನೇ, ಟೋಲ್ ಟ್ಯಾಕ್ಸ್ ಪಾವತಿಸದವರಿಗೆ ಯಾವುದೇ ಶಿಕ್ಷೆ ಇರುವುದಿಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟವಾಗಿ ಹೇಳಿದ್ದಾರೆ. ಟೋಲ್ ಟ್ಯಾಕ್ಸ್ ಪಾವತಿಸದಿದ್ದಕ್ಕೆ ಶಿಕ್ಷೆ ವಿಧಿಸುವ ಅವಕಾಶವಿಲ್ಲ ಎಂದು ಹೇಳಿದರು. ಇದಲ್ಲದೇ ಮುಂದಿನ ದಿನಗಳಲ್ಲಿ ಟೋಲ್ ಟ್ಯಾಕ್ಸ್ ಸಂಗ್ರಹಿಸಲು ತಂತ್ರಜ್ಞಾನದ ಬಳಕೆಗೂ ಒತ್ತು ನೀಡುತ್ತೇವೆ.

ಇಲ್ಲಿಯವರೆಗೆ ಟೋಲ್ ಪಾವತಿಸದವರಿಗೆ ಶಿಕ್ಷೆಯ ಅವಕಾಶವಿಲ್ಲ, ಆದರೆ ಟೋಲ್ಗೆ ಸಂಬಂಧಿಸಿದ ಬಿಲ್ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದೀಗ ಟೋಲ್ ತೆರಿಗೆಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಇನ್ನು ಮುಂದೆ ಟೋಲ್ ಟ್ಯಾಕ್ಸ್ ಕಟ್ಟುವ ಅಗತ್ಯವಿಲ್ಲ, ನಿಮ್ಮ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸಲಾಗುವುದು ಎಂದರು. ಇನ್ನು ಕಾರುಗಳ ನಂಬರ್ ಪ್ಲೇಟ್ ವಿಚಾರದಲ್ಲೂ ನಿಯಮದಲ್ಲಿ ಬದಲಾವಣೆ ತರಲಾಗುವುದು ಎಂಬುದರ ಕುರಿತು ಕೂಡ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.

Leave A Reply

Your email address will not be published.