ISRO Recruitment 2022: ಇಸ್ರೋದಲ್ಲಿದೆ ಬಂಪರ್ ಉದ್ಯೋಗ| ಬಿಇ/ಬಿ.ಟೆಕ್ ಆದವರಿಗೆ ಅವಕಾಶ | ತಿಂಗಳಿಗೆ ₹ 56,000 ಸಂಬಳ
ISRO Recruitment 2022: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:29/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 19/12/2022
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 21/12/2022
ಹುದ್ದೆಯ ಹೆಸರು : ಸೈಂಟಿಸ್ಟ್/ಎಂಜಿನಿಯರ್
ಹುದ್ದೆ : 68
ಉದ್ಯೋಗದ ಸ್ಥಳ :ಆಂಧ್ರ ಪ್ರದೇಶ, ಕೇರಳ, ಕರ್ನಾಟಕ, ಒಡಿಶಾ
ವೇತನ ಮಾಸಿಕ : ₹ 56,100
ಹುದ್ದೆಯ ಮಾಹಿತಿ:
ಸೈಂಟಿಸ್ಟ್/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್)- 21
ಸೈಂಟಿಸ್ಟ್/ಎಂಜಿನಿಯರ್ (ಮೆಕ್ಯಾನಿಕಲ್)- 33
ಸೈಂಟಿಸ್ಟ್/ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್)- 14
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ ಮಹಿಳಾ/PWD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 250 ರೂ.
ಅಭ್ಯರ್ಥಿಗಳು ಆನ್ಲೈನ್/ಆಫ್ಲೈನ್ ಮೂಲಕ ಪಾವತಿಸಬಹುದು.
ವಿದ್ಯಾರ್ಹತೆ:
ಸೈಂಟಿಸ್ಟ್/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್)- ECE ವಿಭಾಗದಲ್ಲಿ ಬಿಇ/ಬಿ.ಟೆಕ್ ತೇರ್ಗಡೆಹೊಂದಿರಬೇಕು.
ಸೈಂಟಿಸ್ಟ್/ಎಂಜಿನಿಯರ್ (ಮೆಕ್ಯಾನಿಕಲ್)- ಮೆಕ್ಯಾನಿಕಲ್ ಎಂಜಿನಿಯರಿಂಗ್ ಬಿಇ/ ಬಿ.ಟೆಕ್ ತೇರ್ಗಡೆಹೊಂದಿರಬೇಕು.
ಸೈಂಟಿಸ್ಟ್/ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್)-ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್ ತೇರ್ಗಡೆಹೊಂದಿರಬೇಕು.
ವಯೋಮಿತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 19/12/2022 ಕ್ಕೆ 28 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಗೇಟ್ ಸ್ಕೋರ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ