Diploma Courses : ಡಿಪ್ಲೋಮಾ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾ? ಇಲ್ಲಿದೆ ಸಂಪೂರ್ಣ ವಿವರ!
ಈಗಿನ ಮಕ್ಕಳಿಗೆ ಶಿಕ್ಷಣದ ಕೊರತೆಯಿಲ್ಲ. ಏಕೆಂದರೆ ಎಲ್ಲಾ ಕಡೆ ಶಾಲೆಗಳು ಮಾತ್ರವಲ್ಲದೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ಕಾಲೇಜುಗಳಿವೆ. ಶಿಕ್ಷಣ ಕ್ಷೇತ್ರವು ಪ್ರಗತಿ ಹೊಂದುತ್ತಿದ್ದೂ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸರ್ಕಾರವು ಜಾರಿಗೊಳಿಸಿದೆ. ಹಲವಾರು ಹೊಸ ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನು ಕಲ್ಪಿಸಿದೆ. ಅಷ್ಟೇ ಅಲ್ಲಾ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಸಕ್ತಿಯಿರುವ ವಿಷಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ಗಳನ್ನು ನೀವು ಪಡೆಯಬಹುದು. ಅದಕ್ಕೆ ತಕ್ಕ ಕಾಲೇಜುಗಳು ಕರ್ನಾಟಕದಲ್ಲಿವೆ. GTTC ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ನೀವು ಕಡಿಮೆ ಶುಲ್ಕದೊಂದಿಗೆ ಈ ಡಿಪ್ಲೋಮಾ ಕೋರ್ಸ್ (Diploma courses) ಗಳನ್ನು ಪೂರ್ಣಗೊಳಿಸಬಹುದು.
ಡಿಪ್ಲೋಮಾ ಕೋರ್ಸ್ ನಾಲ್ಕು ವರ್ಷಗಳ ಅವಧಿಯಲ್ಲಿರಲಿದ್ದೂ, ನೀವು ಡಿಪ್ಲೋಮಾ ಮಾತ್ರ ಮಾಡಿ ಬಿಡಬಹುದು. ಇಲ್ಲವೇ ಈ ಕೋರ್ಸ್ ಮುಂದುವರೆಸಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವ ಅವಕಾಶಗಳು ಇವೆ. ನೀವು ಹತ್ತನೇ ತರಗತಿ ಮುಗಿಸಿದ ತಕ್ಷಣ ನಿಮಗೆ ಆಸಕ್ತಿಯಿರುವ ಕೋರ್ಸ್ಗಳಿಗೆ ಸೇರಿಕೊಳ್ಳಬಹುದು. ಅಥವಾ ನೀವು ಪಿಯುಸಿ ಮಾಡಲು ಬಯಸಿದರೆ ಅದು ಪೂರ್ಣಗೊಂಡ ನಂತರವೂ ಮಾಡಬಹದು. ಆಯ್ಕೆ ನಿಮ್ಮದು ಆದರೆ ಹತ್ತನೆ ತರಗತಿ ಮುಗಿದ ನಂತರ ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ.
GTTCಯಲ್ಲಿರುವ ಪ್ರಮುಖ ಡಿಪ್ಲೋಮಾ ಕೋರ್ಸ್ಗಳು: ಇಂಜಿನಿಯರಿಂಗ್ ಡ್ರಾಯಿಂಗ್, ಪ್ರೊಡಕ್ಷನ್ ಟೆಕ್ನಾಲಜಿ, ಮೆಟೀರಿಯಲ್ ಟೆಕ್ನಾಲಜಿ, ಮೆಟ್ರೋಲಜಿ, ಜಿಗ್ಸ್ & ಫಿಕ್ಸ್ಚರ್, ಪ್ರೆಸ್ ಟೂಲ್ ಥಿಯರಿ, ಮೋಲ್ಡ್ ಥಿಯರಿ, ಡೈ ಕಾಸ್ಟಿಂಗ್ ಥಿಯರಿ, ಪ್ರೆಸ್ ಟೂಲ್ & ಮೋಲ್ಡ್ ಡಿಸೈನ್. ಈ ಕೋರ್ಸ್ಗಳು ನಿಮಗೆ GTTCಯಲ್ಲೇ ಲಭ್ಯವಿದೆ ಕಡಿಮೆ ಶುಲ್ಕದಲ್ಲಿ ನೀವು ಸರ್ಕಾರಿ ಕಾಲೇಜಿನಲ್ಲಿ ಕಲಿಯಬಹುದು.
ಆಟೋಮೋಟಿವ್ ಎಂಜಿನಿಯರಿಂಗ್:-
ಭಾರತದ ಮಾನ್ಯತೆ ಪಡೆದಿರುವ ಅತ್ಯುತ್ತಮ ಆಟೋಮೋಟಿವ್ ಯಾಂತ್ರಿಕ ಎಂಜಿನಿಯರಿಂಗ್‌ನ ಒಂದು ಭಾಗವಾಗಿದೆ. ಇದು ಸಂಶೋಧನಾ ಆಧಾರಿತ ಕ್ಷೇತ್ರವಾಗಿದ್ದು ಅದು ವಾಹನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಸುರಕ್ಷತಾ ಪರೀಕ್ಷೆಗೆ ಸಂಬಂಧಿಸಿದೆ. ಹಾಗೂ ಇದು ಹೊಸ ವಾಹನಗಳನ್ನು ವಿನ್ಯಾಸಗೊಳಿಸುವ ವಿಧಾನವನ್ನು ತಿಳಿಸಿಕೊಡುತ್ತದೆ. ಈ ಕೋರ್ಸಿಗೆ ಸಂಬಂಧಿಸಿದ
ಶಾಲೆಗಳು ಮತ್ತು ಕೋರ್ಸ್ಗಳಿಂದ ನಿಮ್ಮ ಸ್ನಾತಕೋತ್ತರ ಮತ್ತು ಪಿಜಿ ಪ್ರಮಾಣಪತ್ರಗಳನ್ನು ಪಡೆಯಿರಿ.
ಬಯೋಮೆಡಿಕಲ್ ಡಿಪ್ಲೋಮಾ:-
ಇದರಲ್ಲಿ ನೀವು ಇಂಜಿನಿಯರಿಂಗ್ ಕೂಡಾ ಮಾಡಬಹುದಾಗಿದ್ದೂ, ಈ ಕೋರ್ಸ್ನಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರವಾದ ಆಹಾರ, ವೈದ್ಯಕೀಯ, ಕೃಷಿ ಮತ್ತು ಸಸ್ಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತದೆ.
ಕೆಮಿಕಲ್ ಇಂಜಿನಿಯರಿಂಗ್:- ಈ ಕೋರ್ಸ್ ಪಡೆಯಬೇಕಾದರೆ, ನಿಮಗೆ ಪ್ರವೇಶ ಪರೀಕ್ಷೆಯನ್ನು ಮೆರಿಟ್ ಆಧಾರದ ಮೇಲೆ ಮಾಡಲಾಗುತ್ತದೆ ಮತ್ತು ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ 45% ನೊಂದಿಗೆ ತೇರ್ಗಡೆ ಹೊಂದಿರುವುದು ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ಎರಡನೇ ವರ್ಷದಿಂದ ಬಿಟೆಕ್ ಲ್ಯಾಟರಲ್ ಎಂಟ್ರಿ ಮೂಲಕ ಬಿಟೆಕ್ ಕೋರ್ಸ್‌ಗೆ ಪ್ರವೇಶ ಪಡೆಯಬಹದು.
ನೀವು ಡಿಪ್ಲೋಮಾ ಮಾಡಿದ್ದರೆ ಇಂಜಿನಿಯರಿಂಗ್ ಮಾಡಬಹುದಾಗಿದೆ. ಮೂರು ವರ್ಷಗಳ ಮುಂದುವರೆದ ಭಾಗವಾಗಿ ಇಂಜಿನಿಯರಿಂಗ್ ಇರುತ್ತದೆ. ಜಿಟಿಟಿಸಿಯಲ್ಲಿ 3 ವರ್ಷಗಳು ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಕಡ್ಡಾಯವಾಗಿ ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಿದೆ. ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಅಳವಡಿಸಲಾಗಿರುವ ತಂತ್ರಗಳಿಗೆ ಪ್ರಾಯೋಗಿಕ ಮಾನ್ಯತೆ ಪಡೆಯುತ್ತಾರೆ. ಇದರ ಪಠ್ಯಕ್ರಮವು ಅಗತ್ಯವಾದ ಜೀವನ ಕೌಶಲ್ಯಗಳನ್ನು ಕಲಿಸುವುದರಿಂದ ಹಿಡಿದು ವಿವಿಧ ಉದ್ಯಮಗಳಲ್ಲಿ ಪ್ರಚಲಿತದಲ್ಲಿರುವ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.
ಇಷ್ಟೇ ಅಲ್ಲಾ ಇನ್ನೂ ಹಲವಾರು ರೀತಿಯ ಡಿಪ್ಲೋಮಾ ಕೋರ್ಸ್ಗಳು ಲಭ್ಯವಿದ್ದು ವಿದ್ಯಾರ್ಥಿಗಳು ನಿಖರವಾಗಿ ತಮ್ಮಿಷ್ಟದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಹೊಂದಿರುತ್ತಾರೆ.