ಈಸಿಯಾಗಿ ನಿಮ್ಮ ಹುಬ್ಬುಗಳನ್ನು ಡಾರ್ಕ್ ಮಾಡಿಕೊಳ್ಳಿ
ಅದೆಷ್ಟೋ ಜನರಿಗೆ ತಮಗೆ ದಪ್ಪವಾದ ಮತ್ತು ಕಪ್ಪಾದ ಹುಬ್ಬು ಬೇಕು ಅಂತ ಆಸೆ ಇರುತ್ತೆ. ಹಾಗೆ ಏನೇ ಮಾಡಿದ್ರೂ ದಪ್ಪ ಹುಬ್ಬು ಇಲ್ಲ ಅಂತ ಬೇಸರ ಮಾಡಿಕೊಳ್ತಾ ಇದ್ದೀರಾ? ನಿಮಗಾಗಿ ಇಲ್ಲಿದೆ ಸಿಂಪಲ್ ಹೋಮ್ ರೆಮಿಡೀಸ್ ಫಾರ್ ಡಾರ್ಕ್ ಐ ಬ್ರೋ.
ಯೆಸ್, ಇದಕ್ಕಾಗಿ ನೀವು ಸಾವಿರಾರು ರುಪಾಯಿ ಕೊಟ್ಟು ಯಾವುದೇ ಟ್ರೀಟ್ಮೆಂಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಈ ಸಿಂಪಲ್ ಮನೆ ಮದ್ದುಗಳನ್ನು ಫಾಲೋ ಮಾಡಿ.
ದಪ್ಪ ಹುಬ್ಬಿಗಾಗಿ ನೀವು ಈರುಳ್ಳಿ ರಸವನ್ನು ನೀವು ನಾಲ್ಕರಿಂದ, ಆರು ವಾರಗಳ ವರೆಗೆ ಪ್ರತಿ ದಿನ 2 ಬಾರಿ ಹುಬ್ಬಿಗೆ ಮಸಾಜ್ ಮಾಡಿಕೊಳ್ಳಿ.
ಮೊಟ್ಟೆಯ ಹಳದಿ: ಇದು ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಇದು ಕೂದಲಿನ ಪೋಷಣೆಗೂ ಅವಶ್ಯಕವಾಗಿದೆ. ಅದಕ್ಕಾಗಿಯೇ ತಲೆಗೂದಲಿಗೂ ಮೊಟ್ಟೆಯ ಹಳದಿಯನ್ನು ಹಚ್ಚಿ ಎಂದು ಹೇಳಲಾಗುತ್ತದೆ.
ಮೆಂತ್ಯೆ ಬೀಜ: ಈ ಬೀಜವನ್ನು ಸ್ವಲ್ಪ ಕಾಲದ ತನಕ ನೆನೆಸಿ, ಪೇಸ್ಟ್ ಮಾಡಿ ಇದರ ಜೊತೆಗೆ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಸೇರಿಸಿ. ಮಲಗುವ ಮುನ್ನ ಇದನ್ನು ಹುಬ್ಬಿಗೆ ಹಚ್ಚಿ ಮಲಗಿ.
ಹಾಲು: ಹತ್ತಿಯ ಉಂಡೆಯನ್ನು ಹಾಲಿಗೆ ಅದ್ದಿ ನಿಮ್ಮ ಹುಬ್ಬಿನ ಮೇಲೆ ಸ್ವಲ್ಪ ಕಾಲದ ತನಕ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ತನ್ನಷ್ಟಕ್ಕೆ ತಾನೇ ಉಣಗಲು ಬಿಡಿ ಮತ್ತೆ ಉಗುರು ಬೆಚ್ಚಗಿನ ನೀರಿನಲ್ಲಿ ಹುಬ್ಬನ್ನು ತೊಳೆದುಕೊಳ್ಳಿ.
ಅಲೋವೇರಾ: ಇದರ ಜೆಲ್ ಅನ್ನು ನಿಮ್ಮ ಹುಬ್ಬುಗಳ ಮೇಲೆ ಲೇಪಿಸಿ. ಇದರಿಂದ ನಿಮ್ಗೆ ತಣ್ಣನೆಯ ಭಾವನೆ ಆಗುತ್ತೆ. ಇದರ ಜೊತೆಗೆ ದಟ್ಟವಾಗಿ ಹುಬ್ಬು ಬೆಳೆಯುತ್ತೆ. 30 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ತಲೆ ಕೂದಲಿಗೂ ಈ ಜಲ್ ಅನ್ನು ಹಚ್ಚಿ.
ನಿಂಬೆಹಣ್ಣು: ಈ ಹಣ್ಣಿನ ರಸದಿಂದ ನಿಮ್ಮ ಹುಬ್ಬು ಶೈನ್ ಆಗಿ ಕಾಣುತ್ತೆ. ಹಾಗಾಗಿ ವಾರಕ್ಕೆ ಒಮ್ಮೆ ಆದ್ರೂ ಹಚ್ಚಿ.
ಆಲೀವ್ ಎಣ್ಣೆ: ನಿಮ್ಮ ಹುಬ್ಬಿಗೆ ಕಾಜಲ್ ಹಚ್ಚಿ ಅದಕ್ಕೆ ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಹಚ್ಚಿ ಮಲಗಿ. ಇದನ್ನು ಪ್ರತಿ ದಿನ ಮಾಡುವುದರಿಂದ ನಿಮ್ಮ ಹುಬ್ಬು ದಟ್ಟವಾಗಿ ಬೆಳೆಯುತ್ತದೆ.
ತೆಂಗಿನ ಎಣ್ಣೆ: ಉಗುರು ಬೆಚ್ಚಗೆ ಮಾಡಿ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ಇದರಿಂದ ಉದುರುತ್ತಿರು ಕೂದಲಿಗೆ ಶಕ್ತಿ ನೀಡಿದಂತೆ ಆಗುತ್ತದೆ. ಹೀಗಾಗಿ ಕೊಂಚ ಬಿಸಿ ಮಾಡಿ ಕೂದಲಿಗೆ ಹಚ್ಚಿ.