ರುತುರಾಜ್ ಸಿಡಿಸಿದ ಭರ್ಜರಿ ದ್ವಿಶತಕ! ಒಂದೇ ಓವರ್ ನಲ್ಲಿ 7 ಸಿಕ್ಸರ್

ಪ್ರಸ್ತುತ ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯಾಟ ನಡೆಯುತ್ತಿದೆ. ಸದ್ಯ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ.

 

ಸದ್ಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆಟಗಾರ ರುತುರಾಜ್ ಕಾಯಕ್ವಾಡ್ ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಉತ್ತರ ಪ್ರದೇಶ ಬೌಲರ್​ಗಳನ್ನು ಮನಬಂದಂತೆ ದಂಡಿಸಿರುವ ರುತುರಾಜ್ ಕೇವಲ 159 ಎಸೆತಗಳಲ್ಲಿ 220 ರನ್​ಗಳ ಸುರಿಮಳೆ ಸುರಿಸಿದ್ದಾರೆ.

ಆದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್​ಗೆ ಇಳಿದ ಮಹಾರಾಷ್ಟ್ರದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಸತ್ಯಜಿತ್ ಕೂಡ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಬಲಿಷ್ಠನಾದ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಉತ್ತರ ಪ್ರದೇಶ ತಂಡದ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 159 ಎಸೆತಗಳನ್ನು ಎದುರಿಸಿದ ರುತುರಾಜ್ 10 ಬೌಂಡರಿ, ಬರೋಬ್ಬರಿ 16 ಸಿಕ್ಸರ್ ನೇರವಿನಿಂದ 220 ರನ್ ಬಾರಿಸಿದರು.

ಮಹಾರಾಷ್ಟ್ರ ಇನ್ನಿಂಗ್ಸ್​ನ 49ನೇ ಓವರ್​ನಲ್ಲಿ ಉಗ್ರರೂಪ ತಾಳಿದ ರುತುರಾಜ್ ಒಂದೇ ಓವರ್​ನಲ್ಲಿ ಬರೋಬ್ಬರಿ 7 ಸಿಕ್ಸರ್ ಸಿಡಿಸಿದರು. ಈ ಓವರ್​ನಲ್ಲಿ ಒಂದು ನೋ ಬಾಲ್ ಕೂಡ ಆಗಿದ್ದು, ಆ ಎಸೆತದಲ್ಲೂ ರುತುರಾಜ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿದ ದಾಖಲೆಯನ್ನು ರುತುರಾಜ್ ಬರೆದಿದ್ದಾರೆ.

https://twitter.com/BCCIdomestic/status/1597130541374971904?ref_src=twsrc%5Etfw%7Ctwcamp%5Etweetembed%7Ctwterm%5E1597130541374971904%7Ctwgr%5E538f7c1d69ff4e337aec012c6ee825e38ba7faf6%7Ctwcon%5Es1_c10&ref_url=https%3A%2F%2Ftv9kannada.com%2Fsports%2Fcricket-news%2Fruturaj-gaikwad-smashes-double-century-in-vijay-hazare-trophy-vs-uttar-pradesh-psr-au14-477261.html

ಉತ್ತರ ಪ್ರದೇಶ ಪರ 49ನೇ ಓವರ್ ಎಸೆಯಲು ಬಂದ ವೇಗಿ ಶಿವಂ ಸಿಂಗ್ ಅವರ ಮೊದಲೆರಡು ಎಸೆತಗಳನ್ನು ಮಿಡ್ ಆನ್​ನಲ್ಲಿ ಸಿಕ್ಸರ್ ಬಾರಿಸಿದರು . 3ನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್​ಗಟ್ಟಿದ ರುತುರಾಜ್ 4ನೇ ಎಸೆತವನ್ನು ಮಿಡ್​ ಆಫ್​ ಮೇಲೆ ಸಿಕ್ಸರ್ ಬಾರಿಸಿದರು. ಬಳಿಕ ಐದನೇ ಎಸೆತ ನೋ ಬಾಲ್ ಆಗಿದ್ದು, ಆ ಎಸೆತವನ್ನು ರುತುರಾಜ್ ಮಿಡ್ ಆಫ್​ನಲ್ಲಿ ಅದು ಸಹ ಸಿಕ್ಸರ್ . ಬಳಿಕ ಸಿಕ್ಕ ಫ್ರಿ ಹಿಟ್ ಎಸೆತದಲ್ಲೂ ಸಿಕ್ಸರ್ ಸಿಡಿಸಿದ ಗಾಯಕ್ವಾಡ್, 6ನೇ ಎಸೆತವನ್ನು ಮಿಡ್ ಆಫ್​ ಮೇಲೆ ಸಿಕ್ಸರ್​ಗಟ್ಟಿದರು. ಹೀಗಾಗಿ 49ನೇ ಓವರ್​ನಲ್ಲಿ ದಾಖಲೆಯ 43 ರನ್​ಗಳು ಹರಿದುಬಂದವು.

ಈಗಾಗಲೇ ಒಂದೇ ಓವರ್‌ನಲ್ಲಿ 38 ರನ್ ನೀಡಿದ ವೇಗಿ ಜೇಮ್ಸ್ ಫುಲ್ಲರ್ ಹೆಸರು ದಾಖಲೆ ಆಗಿತ್ತು . ಸದ್ಯ ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯದಲ್ಲಿ ರುತುರಾಜ್ ಬರೋಬ್ಬರಿ 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದ ರುತುರಾಜ್ ಕೇವಲ ಬೌಂಡರಿಗಳಿಂದಲೇ 136 ರನ್ ಕಲೆ ಹಾಕಿದರು. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ಅವರ ಖ್ಯಾತಿಯ ಹೆಸರಿಗೆ ಶಿವ ಸಿಂಗ್ ಅವರು ಕಾರಣರಾದರು.

Leave A Reply

Your email address will not be published.