ರಿಷಬ್ ಶೆಟ್ರ ನಡೆ ಮುಂದಿನ ಸಿನಿಮಾ‌ ಕಡೆ | ಈ ಗುಟ್ಟು ಇದೀಗ ರಟ್ಟು!!!

ಕಾಂತಾರ ಅನ್ನೋ ಸಿನಿಮಾ ರಿಷಬ್ ಶೆಟ್ಟಿ ಅವರನ್ನು ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಅನ್ನುವ ಸ್ಟಾರ್ ಪಟ್ಟ ಕೊಟ್ಟು ಕರ್ನಾಟಕ ಬಿಡಿ ಕ್ಯಾಲಿಫೋರ್ನಿಯದವರೆಗೆ ಪಯಣ ಮಾಡುವಂತೆ ಮಾಡಿದೆ. ಅಷ್ಟೆ ಅಲ್ಲದೆ ರಿಷಬ್ ಶೆಟ್ರು ಕಾಂತಾರ ನಂತರ ಯಾವ ಸಿನಿಮಾ ಮಾಡ್ತಾರೆ?? ಅನ್ನೋ ಚರ್ಚೆ ಸಾಮಾಜಿಕ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಹಾಗಂತ ನಮ್ ಶೆಟ್ರು ಮಾತ್ರ ಮುಂದಿನ ಯೋಜನೆ ಕುರಿತು ಗುಟ್ಟು ರಟ್ಟು ಮಾಡೋ ಪ್ಲಾನ್ ಅಲ್ಲಿ ಅಂತು ಇಲ್ಲ. ಆದರೆ, ಶೆಟ್ರ ಮುಂದಿನ ನಡೆ ಯಾವ ಸಿನಿಮಾದ ಕಡೆಗೆ ಇರಲಿದೆ ಅನ್ನೋದಕ್ಕೆ ಕೆಲವರ ಅಭಿಪ್ರಾಯ ಸಿಕ್ಕಿದ್ದು, ಕೆಜಿಎಫ್ ನ ಕರ್ತ ನೀಲ್ ದಾರಿಯಲ್ಲೇ ಸಾಗಲಿದ್ದಾರೆ ಎನ್ನೋ ಮಾತುಗಳು ಕೇಳಿ ಬರುತ್ತಿವೆ.

 

ಅರೇ!!!. ಕೆಜಿಎಫ್ ನೀಲ್ ಗೂ ರಿಷಬ್ ಶೆಟ್ರಿಗೂ ಏನು ಸಂಬಂಧ ಅಂತೀರಾ!! ಹಾಗಾದ್ರೆ ಈ ಸ್ಟೋರಿ ನೋಡಿ!!

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕೆಜಿಎಫ್ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತ್ತು. ಇದರ ಬಳಿಕ, ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!!

ಬಾಕ್ಸ್ ಆಫೀಸಲ್ಲಿ ಗೆಲುವಿನ ರಯಬೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ. ಕರ್ನಾಟದಲ್ಲಿ ಒಂದು ಕೋಟಿ ಟಿಕೆಟ್ ಗಳು ಈಗಾಗಲೇ ಸೇಲ್ ಆಗಿದ್ದು ,ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ ಕಾಂತಾರ.ಇದರ ಬೆನ್ನಲ್ಲೇ, ಈಗ ಹೊಂಬಾಳೆ ಫಿಲಂಸ್ ಸಿನಿಮಾ ಪ್ಲಾನ್ ಯಾರು ಕೂಡ ಊಹೆ ಮಾಡಲು ಆಗದಂತೆ ನಿರ್ಮಾಣ ಮಾಡಿದ್ದಾರೆ.

ಹೊಂಬಾಳೆ ಫಿಲಂಸ್ ಕೆಜಿಎಪ್ ಸಿನಿಮಾಗೆ ಬಳಸಿದ್ದ ಐಡಿಯಾಲಜಿಯನ್ನು ಕಾಂತಾರ ಸಿನಿಮಾಕ್ಕೂ ಕೂಡ ಬಳಸಲು ಮುಂದಾಗಿದ್ದು, ಕೆಜಿಎಫ್ ಟ್ರೈಲರ್ ನೋಡಿಯೇ ಚಿತ್ರದ ಬಗ್ಗೆ ರಿಸಲ್ಟ್ ಕೊಟ್ಟ ಹೊಂಬಾಳೆ ತಂಡ ಗೇಮ್ ಪ್ಲಾನ್ ಮಾಡಿ ಕೆಜಿಎಫ್ 2 ಕೂಡ ಮಾಡಿ ಹಿಟ್ ಲಿಸ್ಟ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಇದೆ ರೀತಿ ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಊಹೆಗೆ ನಿಲುಕದಂತೆ ರಿಷಬ್ ಶೆಟ್ಟಿ ಅವರ ಜೊತೆ ಕಾಂತಾರ 2 ಮಾಡಲು ಹೊಂಬಾಳೆ ತಂಡ ಹೊರಟಿದ್ದು, ಯೋಜನೆ ರೂಪಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಾಗಾಗಿ, ಕೆಜಿಎಫ್ ದಾರಿಯಲ್ಲೇ ಸಾಗೋ ಪ್ಲಾನ್ ಹಾಕಿದ್ದು, ಹೊಂಬಾಳೆ ಬಳಗ ಸಕ್ಸಸ್ ಪುಲ್ ಟೈಟಲ್ ಕಾಂತಾರವನ್ನು ಕೈಬಿಡದಿರಲು ನಿರ್ಧರಿಸಿ ಶೆಟ್ರು ಕಾಲ್ ಶೀಟ್ ಲಾಕ್ ಮಾಡಿಕೊಂಡು ಕಾಂತಾರ 2 ಮಾಡುವಂತೆ ಆಫರ್ ಕೊಟ್ಟಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿದೆ.

ಹೊಂಬಾಳೆಯ ಈ ಆಫರ್ ಅನ್ನು ರಿಷಬ್ ಅವ್ರು ಕೂಡ ಓಕೆ ಮಾಡಿ, ಕಾಂತಾರ 2 ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ!! ಇನ್ನು ಚಿತ್ರದ ಕಥೆ ಏನಿರಬಹುದು?? ಕಾಂತಾರ 2 ಕಾಂತಾರ ಸಿಕ್ವೇಲ್ಲಾ ಇಲ್ಲ ಹೊಸ ಕಥೆ ಹೆಣೆದು ಸೂಪರ್ ಡೂಪರ್ ಟೈಟಲ್ ಫಿಕ್ಸ್ ಮಾಡ್ತಾರಾ?? ಅನ್ನೋ ಗುಟ್ಟು ಇನ್ನು ರಟ್ಟಾಗಿಲ್ಲ!! ಆದರೆ ಕಾಂತಾರ ಬಳಿಕ ಹೊಂಬಾಳೆ ಜೊತೆ ಚಿತ್ರ ಮಾಡೋದರತ್ತ ಅವರ ಚಿತ್ತ ಪಕ್ಕಾ!! ಅಂತ ಬಲ್ಲ ಮೂಲಗಳ ಅಭಿಪ್ರಾಯ.

ಸದ್ಯ ಕಾಂತಾರ ಸಿನೆಮಾದ ಕೆಲಸಗಳಲ್ಲಿ ನಿರತರಾಗಿರುವ ರಿಷಬ್ ಆದಷ್ಟು ಬೇಗ ಕಾಂತಾರ 2 ಹಿಂಟ್ ಕೊಟ್ಟು ಹೊಸ ಚಿತ್ರಕ್ಕೆ ಹೊಸ ಅನುಭವ ಜನರಿಗೆ ನೀಡಿ ಮನರಂಜನೆ ನೀಡೋದು ಗ್ಯಾರಂಟಿ!!.. ಅದರೆ ಕಾಂತಾರ ದಲ್ಲಿ ದೈವದ ಕತೆ ಹೆಣೆದು ಎಲ್ಲರನ್ನು ಸೆಳೆದಿರುವ ನಮ್ಮ ಶೆಟ್ರು ಮುಂದೆ ವೀಕ್ಷಕರ ಗಮನ ಸೆಳೆಯಲು ಯಾವ ಹೊಸ ಪ್ಲಾನ್ ಮಾಡುತ್ತಾರೆ ಕಾದು ನೋಡಬೇಕಾಗಿದೆ.

Leave A Reply

Your email address will not be published.