ಫುಟ್ಬಾಲ್‌ ಪಂದ್ಯ ನೋಡಲು ರಜೆ ಕೇಳಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ | ವೈರಲ್‌ ಆಯಿತು ರಜೆ ಅರ್ಜಿ

ನಾವು ಸಾಮಾನ್ಯವಾಗಿ ಆರೋಗ್ಯ ಕೆಟ್ಟಾಗ ಇಲ್ಲವೇ ಮನೆಯಲ್ಲಿ ಯಾವುದಾದರೂ ಸಮಾರಂಭ ಇದ್ದಾಗ ರಜೆ ಕೇಳುವುದು ನೋಡಿರುತ್ತೇವೆ.. ಆದ್ರೆ .. ಇಲ್ಲಿ ನಾವು ಹೇಳುವ ಇಂಟರೆಸ್ಟಿಂಗ್ ಸ್ಟೋರಿ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ!!

ಯಾಕೆ ಅಂತೀರಾ?? ಇಲ್ಲಿ ವಿದ್ಯಾರ್ಥಿಗಳು ರಜೆ ಕೇಳಿರೋದು ಅನಾರೋಗ್ಯ ದ ನಿಮಿತ್ತ ವಂತು ಅಲ್ಲ ಜೊತೆಗೆ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಹೋಗೋದಕ್ಕೂ ಅಲ್ಲ ಹೊರತಾಗಿ, ಮ್ಯಾಚ್ ನೋಡೋದಕ್ಕೆ!! !!

ಹೌದು !!.ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಫಿಫಾ ವಿಶ್ವಕಪ್ ನಡೆಯಿತ್ತಿದದ್ದು ಗೊತ್ತಿರುವ ವಿಚಾರವೇ ತಾನೇ!! ಈ ಪಂದ್ಯವನ್ನು ವೀಕ್ಷಿಸಲು ಕೇರಳದ ವಿದ್ಯಾರ್ಥಿಗಳ ರಜೆಯನ್ನು ಕೋರಿ ಅರ್ಜಿಯನ್ನು ಬರೆದಿದ್ದಾರೆ.

ಕೇರಳದ ಕ್ಯಾಲಿಕಟ್‌ನ ಕೆಲವು ಮಕ್ಕಳು ಸೌದಿ ಅರೇಬಿಯಾ ವಿರುದ್ಧ ಮೆಸ್ಸಿಯ ಅರ್ಜೆಂಟೀನಾ ಆಟವನ್ನು ವೀಕ್ಷಿಸಲು ತಮ್ಮ ಶಿಕ್ಷಕರಿಗೆ ರಜೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಈ ರಜೆ ಅರ್ಜಿಯನ್ನು ಸ್ಥಳೀಯ ಭಾಷೆಯಲ್ಲಿ ಬರೆದಿದ್ದು, ಫುಟ್ಬಾಲ್ ಪಂದ್ಯದ ಬಗ್ಗೆ ಮಕ್ಕಳಿಗಿರುವ ಆಸಕ್ತಿ ಎದ್ದು ಕಾಣುತ್ತದೆ.

ಅಷ್ಟೆ ಅಲ್ಲ, ಫುಟ್ಬಾಲ್ ಆಟವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದನ್ನು ರುಜುವಾತು ಮಾಡುತ್ತದೆ. ಮಕ್ಕಳ ಮನವಿಯ ಮೇರೆಗೆ ರಜೆ ನೀಡಲಾಗಿದ್ದು, ಸದ್ಯ ಈ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿದೆ. ಕೆಲ ವರದಿಗಳ ಪ್ರಕಾರ, ಕೇರಳದ ಪೆರಂಬ್ರಾ ಎಂಬಲ್ಲಿನ ನೊಚಾಡ್ ಹೈಯರ್ ಸೆಕೆಂಡರಿ ಸ್ಕೂಲ್ 9 ನೇ ತರಗತಿಯ ವಿದ್ಯಾರ್ಥಿಗಳು ಈ ಅರ್ಜಿ ಬರೆದಿದ್ದು ಜೊತೆಗೆ ತಮ್ಮ ಸಹಿ ಕೂಡ ಪತ್ರದಲ್ಲಿದೆ .

ಈ ಕ್ರೀಡಾ ಪ್ರೇಮಿಗಳು 100 ಕ್ಕೂ ಹೆಚ್ಚು ಸಹಿ ಕೂಡ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಏನೇ ಆಗಲಿ.. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ.. ಈ ಮಕ್ಕಳ ಕ್ರೀಡಾ ಒಲವು ಆಟವನ್ನು ಗಮನಿಸಿ..ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಮಾಡಿಕೊಡಬಹುದೇನೋ!!

Leave A Reply

Your email address will not be published.