BBK9 : ಬಿಗ್ ಬಾಸ್ ಮನೆಯಿಂದ ವಿನೋದ್ ಗೊಬ್ಬರಗಾಲ ಔಟ್ !!! ಕಾರಣ ಇಲ್ಲಿದೆ

ಬಿಗ್ ಬಾಸ್ ಸೀಸನ್ 09 ರಲ್ಲಿ ಈ ವಾರ ವೀಕೆಂಡ್ ವಿತ್ ಸುದೀಪ್ ನಡೆತಾ ಇದೆ. ಈ ಬಾರಿ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿರುವುದರಿಂದ ಈ ಬಾರಿಯ ಎಲಿಮಿನೇಟ್ ತೂಗುಕತ್ತಿ ಯಾರ ಮೇಲೆ ಇದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಈ ಬಾರಿ ಗೊಬ್ಬರಗಾಲ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್ ಆಗಿದ್ದಾರೆ.

 

ನವೀನರು, ಪ್ರವೀಣರು ಎಂಟ್ರಿ ಆಗಿದ್ದ ಈ ಬಾರಿ ನವೀನರಾಗಿ ಕಾಮಿಡಿಯನ್ ವಿನೋದ್ ಗೊಬ್ಬರಗಾಲ ಇದ್ದರು. ಆದರೆ ಈ ವಾರ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ವಿನೋದ್ ಗೊಬ್ಬರಗಾಲ ಟಾಸ್ಕ್ ವಿಚಾರಕ್ಕೆ ಬಂದರೆ ಎಲ್ಲಾ ಆಟಗಳನ್ನು ಸಲೀಸಾಗಿ ಆಟವಾಡಿ ಜನಮನ್ನಣೆ ಗಳಿಸಿದ್ದರು. ಆದರೆ ಅವರ ಎಲಿಮಿನೇಷನ್ ಎಲ್ಲರಿಗೂ ಶಾಕ್ ನೀಡಿದೆ. ಬಿಗ್ ಬಾಸ್ ಮನೆಯಲ್ಲೂ ಎಲ್ಲರ ಜೊತೆ ಚೆನ್ನಾಗಿದ್ದ ಗೊಬ್ಬರಗಾಲ ಹೆಚ್ಚಾಗಿ ಅರುಣ್ ಸಾಗರ್ ಜೊತೆ ಹೆಚ್ಚು ಇರುತ್ತಿದ್ದರು.

ಬಿಗ್ ಬಾಸ್ ಗೆ ಬರೋ ಮೊದಲು ಗೊಬ್ಬರಗಾಲ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಿಂದ ಹೆಸರು ವಾಸಿಯಾಗಿದ್ದರು. ಅಲ್ಲದೇ ಗಿಚ್ಚಿ ಗಿಲಿ ಗಿಲಿ ಶೋನ ರನ್ನರ್ ಅಪ್ ಕೂಡ ಆಗಿದ್ದರು. ತನ್ನ ಹಾಡು ಹಾಗೂ ಕಾಮಿಡಿಯಿಂದ ಲವಲವಿಕೆಯಿಂದ ಗೊಬ್ಬರಗಾಲ ಔಟ್ ಆಗಲು ಅವರು ಮಾಡಿದ ಗೋಲ್ ಮಾಲ್ ಕಾರಣವಾಯ್ತೇ ಎಂಬ ಪ್ರಶ್ನೆಗಳು ಎದ್ದಿವೆ.

ನಟ್ ಬಿಚ್ಚುವ ಟಾಸ್ಕ್ ನಲ್ಲಿ ವಿನೋದ್ ಅವರು ಕೂಡಾ ಬಟ್ಟೆ ಬಳಸೋಕೆ ಟ್ರೈ ಮಾಡಿದ್ದರು. ಆದರೆ ಇಲ್ಲಿ ಹೈಲೈಟ್ ಆದದ್ದು ಮಾತ್ರ ಆರ್ಯವರ್ಧನ್. ‌ಕಳೆದ ವಾರದ ಟಾಸ್ಕ್ ನಲ್ಲಿ ಮನೆ ಕಾಡಾಗಿ ರೂಪಾಂತರಗೊಂಡಿತ್ತು. ಆಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈಜುಕೊಳದಲ್ಲಿರು ಬಾಕ್ಸ್ ನ ನಟ್ ಗಳನ್ನು ಕೈಯಿಂದ ಬಿಚ್ಚಬೇಕು ಎಂದು. ಗುರೂಜಿ ಬಟ್ಟೆ ಬಳಸಿ ಬಿಚ್ಚಿರುತ್ತಾರೆ.

ಮನೆಯವರೆಲ್ಲಾ ಗುರೂಜಿಗೆ ಬೈಯುತ್ತಿರುವಾಗ, ವಿನೋದ್ ಸಹ ಬೈದಿರುತ್ತಾರೆ. ಆದ್ರೆ ಅವರು ಸಹ ಬಟ್ಟೆ ಬಿಚ್ಚಿ ನಟ್ ಬಿಚ್ಚಿರುತ್ತಾರೆ. ಮನೆಯವರ ಮುಂದೆ ತಪ್ಪೇ ಮಾಡಿಲ್ಲ ಎನ್ನೋ ರೀತಿಯಲ್ಲಿ ವರ್ತಿಸುತ್ತಾರೆ. ಬಹುಶಃ ಇದು ವಿನೋದ್ ಔಟ್ ಆಗಲು ಕಾರಣ ಇರಬಹುದೇ ಎಂದು ಎಲ್ಲರ ಅನಿಸಿಕೆ.

Leave A Reply

Your email address will not be published.