2,500 ಜನ ನಗ್ನರಾಗಿ ಕ್ಯಾಮೆರಾಗೆ ಪೋಸ್ ಕೊಟ್ರು ಬೀಚಿನಲ್ಲಿ !!!
ಹಲವಾರು ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಈ ಬಗ್ಗೆ ಒಂದು ಜಾಗೃತಿ ಮೂಡಿಸಲು ಆಸ್ಟೇಲಿಯಾದಲ್ಲಿ ವಿಭಿನ್ನವಾಗಿ ಜಾಗೃತಿ ಹಮ್ಮಿಕೊಳ್ಳಲಾಯಿತು. ಕೋಟ್ಯಾಂತರ ಜನ ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದರಿಂದ ಈ ಕುರಿತು ಜಾಗೃತಿ ಮೂಡಿಸಲಾಯಿತು.
ಸುಮಾರು 2,500 ಜನ ಸಮುದ್ರ ತೀರದಲ್ಲಿ ಬೆತ್ತಲೆಯಾಗಿ ಕ್ಯಾಮೆರಾಗಿ ಪೋಸ್ ಕೊಡುವ ಮೂಲಕ ಸ್ಕಿನ್ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿದ್ದಾರೆ. ಪುರುಷರು ಹಾಗೂ ಮಹಿಳೆಯರು ಸೇರಿ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಫೋಸ್ ನೀಡಿದ್ದಾರೆ. ಸುಮಾರು 2,500ಕ್ಕೂ ಹೆಚ್ಚು ಜನ ಬೆತ್ತಲೆಯಾಗಿ ಕ್ಯಾಮೆರಾಗಿ ಮುಖ ಮಾಡಿದ್ದಾರೆ.
ಬೆತ್ತಲೆ ಫೋಟೊ ತೆಗೆಯುವುದಕ್ಕೇ ಖ್ಯಾತಿ ಗಳಿಸಿರುವ ಫೋಟೊಗ್ರಾಫಿಕ್ ಆರ್ಟಿಸ್ಟ್ ಸ್ಪೆನ್ಸರ್ ಟ್ಯುನಿಕ್ ಅವರು 2,500 ಜನ ಬಟ್ಟೆ ಕಳಚಿ, ಸಮುದ್ರದ ಕಡೆ ಮುಖ ಮಾಡಿ ನಿಂತಿರುವ ಫೋಟೋ ತೆಗೆದಿದ್ದಾರೆ. ಸ್ಪೆನ್ಸರ್ ಟ್ಯುನಿಕ್ ಅವರು ಅಮೆರಿಕದ ನ್ಯೂಯಾರ್ಕ್ ಮೂಲದ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಕ್ಯಾನ್ಸರ್ ಜಾಗೃತಿ ಮೂಡಿಸುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮೆಲನೋಮ (ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ- Melanoma) ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಈ ಕಾಯಿಲೆ ಬಗ್ಗೆ ಜಾಗೃತಿ ತರೋ ವಿಭಿನ್ನ ಪ್ರಯತ್ನದ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ.