ಪಿಂಚಣಿದಾರರೇ ಗಮನಿಸಿ : ಅಂಚೆ ಮೂಲಕ ಮನೆ ಬಾಗಿಲಿಗೇ ಬರಲಿದೆ `ಜೀವನ ಪ್ರಮಾಣ ಪತ್ರ’

ಪೆನ್ಶನರ್ ಜೀವನ ಪ್ರಮಾಣ ಪತ್ರಕ್ಕಾಗಿ ಟೆನ್ಶನ್ ತೆಗೆದುಕೊಳ್ಳುತ್ತಿರುವವರಿಗೆ ಅಂಚೆ ಇಲಾಖೆಯಿಂದ ಸಿಹಿ ಸುದ್ದಿ. ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಮೂಲಕ ಪೆನ್ಶನರ್‌ಗಳ ಮನೆಬಾಗಿಲಿಗೆ ಜೀವನ ಪ್ರಮಾಣ ಪತ್ರವನ್ನು ನೀಡುವ ಸೇವೆಯನ್ನು ಮಾಡುತ್ತಿದೆ.

 

ಕೇವಲ 70/- ರೂಪಾಯಿಗಳಿಗೆ ಪಿಂಚಣಿದಾರರ ಸಮೀಪದ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಈ ಸೇವೆಯನ್ನು ನೀಡುತ್ತಾರೆ. `ಪೋಸ್ಟ್ ಇನ್ಫೋ ಅಪ್ಲಿಕೇಷನ್’ ಮೂಲಕ ಪಿಂಚಣಿದಾರರು, ತಮ್ಮ ಕೋರಿಕೆಯನ್ನು ಸಲ್ಲಿಸಿದರೆ ಸಂಬಂಧಿಸಿದ ಪೋಸ್ಟ್ ಮ್ಯಾನರು ನಿಮ್ಮ ಮನೆ ಬಾಗಿಲಿಗೆ ಬಂದು ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ನೀಡುತ್ತಾರೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಭೇಟಿಮಾಡಿ, ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೇವೆಯನ್ನು ಪಡೆದುಕೊಳ್ಳುವಂತೆ ಅಂಚೆ ಇಲಾಖೆ ಗದಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.