ವಾಟ್ಸಪ್ ನಲ್ಲಿ ಮೆಸೇಜ್ ಬರುತ್ತಿದ್ದಂತೆ ಆಫ್ ಆಗುತ್ತಿದ್ದ ಮನೆಯ ಫ್ಯಾನ್, ಟಿವಿ!!

ಇಂದಿನ ಟೆಕ್ನಾಲಜಿ ಯುಗದಲ್ಲಿ ಯಾವುದು ಕೂಡ ಅಸಾಧ್ಯ ಎಂಬುದು ಇಲ್ಲ. ಯಾಕಂದ್ರೆ, ದಿನದಿಂದ ದಿನಕ್ಕೆ ಹೊಸ ಹೊಸ ವಿಚಿತ್ರ ಘಟನೆಗಳು ನಡೆಯುತ್ತಲೇ ಇದೆ. ಅದರಂತೆ ಇಲ್ಲೊಂದು ಕಡೆ ಆಶ್ಚರ್ಯ ಪಡುವಂತಹ ಘಟನೆ ನಡೆದಿದೆ.

ಹೌದು. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಮನೆಯವರ ವಾಟ್ಸಪ್ ಗೆ ಮೆಸೇಜ್ ಬಂದಂತೆಯೇ ಘಟನೆಗಳು ನಡೆಯುತ್ತಿದ್ದವು. ಈಗ ಫ್ಯಾನ್ ಬಂದ್ ಆಗುತ್ತದೆ ಎಂದು ಮೆಸೇಜ್ ಬಂದ ಕೂಡಲೇ ಮನೆಯಲ್ಲಿ ಫ್ಯಾನ್ ಆಫ್ ಆಗುತ್ತಿತ್ತು. ಹೀಗೇನೆ ಹಲವು ಘಟನೆಗಳು ಸಂಭವಿಸುತ್ತ ಇದ್ದವು.

ಈ ಘಟನೆ ಕೊಲ್ಲಂ ಜಿಲ್ಲೆ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್​ ಗ್ರಾಮದ ನಿವಾಸಿ ಹಾಗೂ ಎಲೆಕ್ಟ್ರಿಷಿಯನ್​ ರಾಜನ್​ ಅವರ ಮನೆಯಲ್ಲಿ ನಡೆದಿದೆ. ಕಳೆದ ಏಳು ತಿಂಗಳಿಂದಲೂ ರಾಜನ್​ ಮಗಳು ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್​ನಲ್ಲಿ ಆಕೆಯ ಗಮನಕ್ಕೆ ಬಾರದಂತೆ ಮಸೇಜ್​ಗಳನ್ನು ಸ್ವೀಕರಿಸುತ್ತಿದ್ದಳು. ಅಚ್ಚರಿ ಏನೆಂದರೆ, ಮಸೇಜ್​ ಬಂದ ಕೂಡಲೇ ವಿದ್ಯುತ್​ ಸಾಧನಗಳು ಹಾಗೂ ಸ್ವಿಚ್​ ಬೋರ್ಡ್​ಗಳು ಇದ್ದಕ್ಕಿದ್ದಂತೆ ಸುಡಲು ಆರಂಭಿಸುತ್ತಿತ್ತು. ರಾಜನ್​ ಎಲೆಕ್ಟ್ರಿಷಿಯನ್​ ಆಗಿದ್ದರೂ ಸಹ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.

ಇದರಿಂದ ಇಡೀ ಕುಟುಂಬ ಗಾಬರಿಗೊಂಡು ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿತ್ತು. ಇದೀಗ ಆ ವಿಚಿತ್ರ ಘಟನೆಯ ಹಿಂದೆ ಯುವಕನೊಬ್ಬನ ಕೈವಾಡ ಇರುವುದು ಬಹಿರಂಗವಾಗಿದ್ದು, ಅಸಲಿ ಸತ್ಯ ಇದೀಗ ಬಯಲಾಗಿದೆ. ಆರೋಪಿ ಯುವಕನ ಮೊಬೈಲ್​ ಫೋನ್​ನಲ್ಲಿ ವಿಶೇಷ ಆಪ್ ಒಂದು ಇನ್​ಸ್ಟಾಲ್​ ಆಗಿದ್ದು, ಅದರ ಮೂಲಕವೇ ಸಂತ್ರಸ್ತ ಕುಟುಂಬದ ವಿದ್ಯುತ್​ ಸಾಧನಗಳನ್ನು ಹ್ಯಾಕ್​ ಮಾಡಿ ನಿಯಂತ್ರಣ ಮಾಡುತ್ತಿದ್ದ.

ಇದನ್ನು ತಮಾಷೆಗಾಗಿ ಆತ ಮಾಡಿದನಂತೆ. ಆದರೆ, ಇಷ್ಟೊಂದು ಗಂಭೀರವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಆರೋಪಿ ಯುವಕ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಟಿವಿ ಸೇರಿದಂತೆ ಇತರೆ ಗೃಹ ಬಳಕೆಯ ವಿದ್ಯುತ್​ ಸಾಧನಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೊಟ್ಟಾರಕ್ಕರ ಎಸ್​ಐ ಪ್ರಶಾಂತ್​ ತಿಳಿಸಿದ್ದಾರೆ. ಒಟ್ಟಾರೆ ಈತನ ಹುಚ್ಚಾಟದಿಂದ ಮನೆ ಮಂದಿ ಗಾಬರಿ ಆಗಿದ್ದು ಅಂತೂ ನಿಜ..

Leave A Reply

Your email address will not be published.