Kantara : ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಯಾಕೆ ಇನ್ನೂ ಬಳಸಿಲ್ಲ | ಕಾರಣ ಇಲ್ಲಿದೆ
‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡು ಬಹಳ ವಿವಾದ ಹುಟ್ಟು ಹಾಕಿತ್ತು. ಈ ಹಾಡು ಬಳಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳದ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದೆ.
ಆದರೆ ಇಲ್ಲೊಂದು ಸಮಸ್ಯೆ ಇದೆ. ಅದೇನೆಂದರೆ, ಕೋಯಿಕ್ಕೊಡ್ ನ್ಯಾಯಾಲಯವು ‘ಕಾಂತಾರ’ ಸಿನಿಮಾದ ನಿರ್ಮಾಪಕರ ಪರವಾಗಿ ಆದೇಶ ನೀಡಿದ್ದರೂ ಕೂಡಾ ‘ವರಾಹ ರೂಪಂ’ ಹಾಡನ್ನು ಈ ಹಿಂದಿನ ಮಾದರಿಯಲ್ಲಿ ಬಳಸುವ ಆಗಿಲ್ಲ.
ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡವು ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಬೇಕೆಂದು ಕೋಯಿಕ್ಕೊಡ್ ನ್ಯಾಯಾಲಯದ ಮೊರೆ ಹೋಗಿತ್ತು. ಹಾಗಾಗಿ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಲಾಗಿತ್ತು. ನಂತರ ಒಟಿಟಿಯಲ್ಲಿ ಬಿಡುಗಡೆ ಆದ ‘ಕಾಂತಾರ’ ಸಿನಿಮಾದಲ್ಲಿ ಬೇರೆ ಸಂಗೀತ ಬಳಸಲಾಗಿತ್ತು.
ಕೋರ್ಟ್ ನೀಡಿದ ಆದೇಶ ‘ಕಾಂತಾರ’ ಚಿತ್ರತಂಡದ ಪರವಾಗಿಯೇ ಇದ್ದರೂ, ಹಳೆಯ ಮಾದರಿಯಲ್ಲಿ ಹಾಡನ್ನು ಬಳಸೋ ಹಾಗಿಲ್ಲ. ಕಾರಣ ಇದೇ ಹಾಡಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣ ಬಾಕಿ ಇದೆ. ಅದು ಇತ್ಯರ್ಥವಾದ ಬಳಿಕ ಹಾಡನ್ನು ಬಳಸಲು ಚಿತ್ರತಂಡ ಯೋಜಿಸಿದೆ.
ಕೋಳಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡ ದಾವೆ ಹೂಡಿದ್ದರೆ, ‘ನವರಸಂ’ ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಕೇಶನ್ಸ್ ಸಂಸ್ಥೆ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿತ್ತು. ವಿಚಾರಣೆ
ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡ ದಾವೆ ಹೂಡಿದ್ದರೆ, ‘ನವರಸಂ’ ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಕೇಶನ್ಸ್ ಸಂಸ್ಥೆ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು ‘ವರಾಹ ರೂಪಂ’ ಹಾಡನ್ನು ಬಳಸದಂತೆ ಆದೇಶ ನೀಡಿತ್ತು. ಅಲ್ಲಿ ತಡೆಯಾಜ್ಞೆ ತೆರವು ಆದೆಶ ಹೊರಬಿದ್ದಿಲ್ಲವಾದ್ದರಿಂದ ಈಗಲೇ ಹಳೆಯ ಮಾದರಿಯಲ್ಲಿ ‘ವರಾಹ ರೂಪಂ’ ಹಾಡನ್ನು ಬಳಸುವಂತಿಲ್ಲ.