Forestry After 12th : ಪಿಯುಸಿ ಆದ ವಿದ್ಯಾರ್ಥಿಗಳು ಫಾರೆಸ್ಟ್ರಿ ಕೋರ್ಸ್ ಮಾಡಿದರೆ ಬೆಸ್ಟ್ ಉದ್ಯೋಗ ಸಿಗುತ್ತೆ!
ಪಿಯುಸಿ ಮುಗಿಸಿ, ಡಿಗ್ರಿಯಲ್ಲಿ ವಿಜ್ಞಾನ ಆಯ್ದುಕೊಂಡು, ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆಯ್ದುಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದರ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ ನೋಡಿ;
ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಆರಿಸುವಾಗ, ಗಮನಿಸಬೇಕಾದ ಮುಖ್ಯ ವಿಷಯಗಳು (Subject) ಮೌಖಿಕ ಮೌಲ್ಯ ಶಿಕ್ಷಣ, ಅರಣ್ಯ ಮಾಪನ, ವೃತ್ತಿಪರ ಸಂವಹನ, ಪರಿಸರ ಅಧ್ಯಯನಗಳು ಮತ್ತು ಅರಣ್ಯ (Forest) ಮಣ್ಣಿನ ವಿಜ್ಞಾನಗಳ ತತ್ವ ವಿಷಯಗಳ ಸಂಪೂರ್ಣ ವಿವರಗಳ ಮಾಹಿತಿ ಲಭ್ಯವಾಗಲಿದೆ.ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ 4 ವರ್ಷಗಳ ಪೂರ್ಣ ಸಮಯದ ಯುಜಿ ಕೋರ್ಸ್ ಆಗಿದ್ದು, 8 ಸೆಮಿಸ್ಟರ್‌ಗಳಾಗಿ ವಿಂಗಡನೆ ಮಾಡಲಾಗಿದೆ.
ಈ ಕೋರ್ಸ್ ಮುಗಿಸಿದ ಬಳಿಕ ಉತ್ತಮ ಉದ್ಯೋಗ ಅವಕಾಶಗಳು ಕೂಡ ದೊರೆಯಲಿವೆ. ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಗಮನ ಹರಿಸಬೇಕಾದ ಮತ್ತೊಂದು ವಿಚಾರ ಇತ್ತೀಚಿನ ಪರೀಕ್ಷೆ ಮಾದರಿ ಹಾಗೂ ಪಠ್ಯಕ್ರಮದ ಪ್ರಕಾರ ಹೇಗಿದೆ ಎಂಬ ಮಾಹಿತಿ ಪಡೆದು ಅಧ್ಯಯನ ಮಾಡುವುದು ಉತ್ತಮ. ಇದರಲ್ಲಿ ಬಹುತೇಕ ಎಲ್ಲಾ ಪ್ರವೇಶ ಪರೀಕ್ಷೆಗಳಲ್ಲಿ ಐದು ವಿಭಾಗಗಳಿದ್ದು, ಅವುಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕೃಷಿ ವಿಷಯಗಳನ್ನು ಒಳಗೊಂಡಿವೆ.
ಈ ಕೋರ್ಸ್ ಮಾಡಲು ಬಯಸುವ ಅಭ್ಯರ್ಥಿಗಳಿಗೆ ವನ್ಯಜೀವಿ ನಿರ್ವಹಣೆಯ ಪ್ರಮಾಣಪತ್ರದ ಕೋರ್ಸ್ ಜೊತೆಗೆ ಝೂ ಮತ್ತು ವೈಲ್ಡ್ ಅನಿಮಲ್ ಹೆಲ್ತ್ ಕ್ಯೂರ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಕೋರ್ಸ್ ಮಾಹಿತಿ ಲಭ್ಯವಾಗಲಿದೆ.
ಅಷ್ಟೇ ಅಲ್ಲದೆ, ಅರಣ್ಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDFM) ಜೊತೆಗೆಪೋಸ್ಟ್-ಮಾಸ್ಟರ್ಸ್ ಡಿಪ್ಲೋಮಾ ನಾನ್-ವುಡ್ ಫಾರೆಸ್ಟ್ ಪ್ರಾಡಕ್ಟ್ಸ್ ಅಧ್ಯಯನ ಅವಕಾಶದ ಜೊತೆಗೆ ಪ್ರಮಾಣ ಪತ್ರ ಕೂಡ ದೊರೆಯಲಿದೆ.
ಸಾರ್ವಜನಿಕ ವಲಯದ ಉದ್ಯೋಗಗಳು ಝೂಲಾಜಿಕಲ್ ಪಾರ್ಕ್‌ಗಳು, ವನ್ಯಜೀವಿ ಶ್ರೇಣಿಗಳು, ಮರಗಳ ತಯಾರಿಕೆಗಾಗಿ ತಮ್ಮದೇ ಆದ ತೋಟಗಳನ್ನು ಹೊಂದಿರುವ ಕಾರ್ಪೊರೇಟ್, ವನ್ಯಜೀವಿ ಸಂಶೋಧನಾ ಸಂಸ್ಥೆಗಳು, ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE), ಮತ್ತು ಅದರ ಅಂಗಸಂಸ್ಥೆಗಳು, ವನ್ಯಜೀವಿ ಇಲಾಖೆ, ಅರಣ್ಯ ಇಲಾಖೆ, ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳು, ಅರಣ್ಯ ನರ್ಸರಿಗಳು ಈ ಎಲ್ಲ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು ದೊರೆಯಲಿದ್ದು, ಉದ್ಯೋಗಾವಕಾಶಗಳು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಲಭ್ಯವಿದೆ.
ಈ ಕೋರ್ಸ್ ಗಳು ಯಾವೆಲ್ಲ ಕಾಲೇಜ್ಗಳಲ್ಲಿ ಲಭ್ಯವಿದೆ ;
ಡಾ . ಬಿ ಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶದಲ್ಲಿ ಲಭ್ಯವಿದೆ. ಇದರ ಜೊತೆಗೆ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆ, ಜೋಧಪುರದಲ್ಲಿ ಲಭ್ಯವಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್‌ಮೆಂಟ್, ಭೋಪಾಲ್ ನಲ್ಲಿ ಲಭ್ಯವಿದೆ. ಅರಣ್ಯ ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯ, ಡೆಹ್ರಾ ಡನ್ ನಲ್ಲಿಯೂ ಈ ಕೋರ್ಸ್ ಮಾಡಬಹುದಾಗಿದೆ.
ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ ನಲ್ಲಿ ಲಭ್ಯವಿದೆ. ಜಿಬಿ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪಂತನಗರ ದಲ್ಲಿಯೂ ಈ ಕೋರ್ಸ್ ಮಾಡಬಹುದಾಗಿದೆ. ಡಾ. ಯಶವಂತ್ ಸಿಂಗ್ ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ, ಹಿಮಾಚಲ ಪ್ರದೇಶದಲ್ಲಿ ಕೂಡ ಲಭ್ಯವಿದೆ.
ಇದರ ಜೊತೆಗೆ ಉಷ್ಣವಲಯದ ಅರಣ್ಯ ಸಂಶೋಧನಾ ಸಂಸ್ಥೆ, ಜಬಲ್ಪುರ ಹಾಗೂ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಜೆನೆಟಿಕ್ಸ್ ಮತ್ತು ಟ್ರೀ ಬ್ರೀಡಿಂಗ್, ಕೊಯಮತ್ತೂರು ಈ ಎಲ್ಲ ಕಾಲೇಜುಗಳಲ್ಲಿ ಈ ಕೋರ್ಸ್ ಮಾಡಬಹುದು.
ಇಷ್ಟೇ ಅಲ್ಲದೆ, ಕರ್ನಾಟಕದ ಕೆಲವು ಕಾಲೇಜುಗಳಲ್ಲೂ ಸಹ BSC ಮತ್ತು MSC ಪದವಿ ಕೂಡ ಲಭ್ಯವಿದೆ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯ ಮೂಲಕ ಅರಣ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಉಪನ್ಯಾಸಕರ ಹುದ್ದೆಗೆ ಕಾಲೇಜುಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಅನೇಕ ಉದ್ಯೋಗಾವಕಾಶದ ಅವಕಾಶದ ಬಾಗಿಲು ತೆರೆದಿದ್ದು, ಈ ಕೋರ್ಸ್ ಮಾಡಿ ಅನೇಕ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.