ಮಂಗಳೂರಿನ ಭೂತಾರಾಧನೆ ಈಗ ಬೆಂಗಳೂರಿನಲ್ಲಿ | ಏನಿದು ಹೊಸ ಮರ್ಮ?
ಕಾಂತರ (Kantara) ಸಿನಿಮಾ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಈಗ ದೈವಕೋಲ ದೈವಸ್ಥಾನದ ವೈಭವ ಶುರುವಾಗಿದ್ದು, ಕರಾವಳಿಯಲ್ಲಿ ಕೋಲಾಹಲ ಹಬ್ಬಿದೆ.ಈ ಸಿನಿಮಾ ಭರ್ಜರಿ ಗೆಲುವಿನ ಬಳಿಕ, ಗುಳಿಗ ಆಚರಣೆಗಳು ಹೆಚ್ಚು ಪ್ರಚಲಿತವಾಗಿದೆ ಎನ್ನಲಾಗುತ್ತಿದ್ದು, ಇದೀಗ, ಜನರ ದೈವಗಳ ಮೇಲಿನ ನಂಬಿಕೆಯನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಎನ್ನುವ ಆರೋಪವು ಕೇಳಿಬಂದಿವೆ.
ದೈವದ ಹೆಸರಲ್ಲಿ ಅನೇಕರು ಹಣ ಲೂಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಆರೋಪ ಜೋರಾಗಿ ಸದ್ದು ಮಾಡಿದ್ದು,. ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಕೆಲವೊಂದು ಪೋಸ್ಟ್ಗಳು ಹರಿದಾಡುತ್ತಿದ್ದು, ಈ ರೀತಿ ಮಾಡುತ್ತಿರುವವರಿಗೆ ತುಳುನಾಡ ದೈವಾರಾಧಕರು ಖಡಕ್ ವಾರ್ನಿಂಗ್ (Warning) ಕೊಟ್ಟಿದ್ದ ಬೆನ್ನಲ್ಲೇ ಮತ್ತೊಂದು ವಿಚಾರ ಮುನ್ನಲೆಗೆ ಬಂದಿದೆ.
ಕಾಂತಾರ ಸಿನಿಮಾ ಭರ್ಜರಿ ಗೆಲುವಿನ ಹಿಂದೆ, ದೈವಶಕ್ತಿಯ ಪ್ರೇರಣೆ ಇದೆ ಅನ್ನೋದು ಚಿತ್ರತಂಡದ ಹಾಗೂ ಅಭಿಮಾನಿಗಳ ನಂಬಿಕೆಯಾಗಿದೆ. ತುಳುನಾಡಿನ ದೈವಾರಾಧನೆ ಸಂಸ್ಕೃತಿ ಈಗ ಎಲ್ಲೆಡೆ ಪ್ರಚಲಿತ ವಾಗಿದ್ದು, ಆದರೆ ಈಗ ಬೆಂಗಳೂರಿನಲ್ಲಿ ಮಾತ್ರ ದೈವದ ವಿಷಯದಲ್ಲಿ ಮನಸ್ತಾಪ ಬುಗಿಲೆ ದ್ದಿದೆ.ಹೌದು ಬೆಂಗಳೂರಿನ ದೊಡ್ಡಬಳ್ಳಾಪುರ (Doddaballapur) ದಲ್ಲಿ ಈಗ ಕೊರಗಜ್ಜನ ದೈವಸ್ಥಾನ (Koragajja) ನಿರ್ಮಿಸಲಾಗಿದ್ದು ಇದರ ಜೊತೆಗೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಇದೇ ಭಾನುವಾರ ದೈವಕೋಲವೂ ಕೂಡ ನಡೆಯುವ ಕುರಿತಾದ ಅಚ್ಚರಿಯ ಬೆಳವಣಿಗೆ ಕಂಡು ಬಂದಿದೆ.
ಇದರ ಜೊತೆಗೆ ಆಮಂತ್ರಣ ಪತ್ರಿಕೆ ಕೂಡ ಜೋರಾಗಿ ಹರಿದಾಡುತ್ತಿದ್ದು, ಇಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಕುಟುಂಬ ನಮಗೆ ಕೊರಗಜ್ಜ ಸ್ವಪ್ನದಲ್ಲಿ ಬಂದು ಇಲ್ಲಿ ನೆಲೆಯಾಗುವ ಕುರಿತು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಕಲ್ಲು ಸಿಕ್ಕಿದೆ ಎನ್ನುತ್ತಿದ್ದ, ಆದರೆ ದೈವದ ಹೆಸರಿನಲ್ಲಿ ಹಣ ಮಾಡುವ ದಂಧೆ ನಡೆಯಬಾರದು .
ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ರೀತಿ ತುಳು ನಾಡಿನಲ್ಲಿ ನೂರಾರು ದೈವಗಳಿದ್ದು, ಕರಾವಳಿಯ ಜನ ದೈವಗಳನ್ನು ಭಕ್ತಿ ಭಾವದಿಂದ ಆರಾಧನೆ ಮಾಡುವ ಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆಯಿದ್ದು, ದೇವರು ನಮ್ಮನ್ನು ಕೈ ಬಿಟ್ಟರೂ ಕೂಡ ದೈವಗಳು ಎಂದಿಗೂ ನಂಬಿದವರ ಕೈ ಬಿಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಜನರಿಗೆ ನಂಬಿಕೆ ಇದೆ.ಹಿಂದಿನಿಂದಲೂ ಇಲ್ಲಿಯವರೆಗೂ ಈ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಕರಾವಳಿಯಲ್ಲಿ ದೈವಸ್ಥಾನ, ಭೂತಕೋಲ ನಡೆಯುವ ಕ್ರಮವಿದ್ದು, ದುಡ್ಡಿಗಾಗಿ ಬೇರೆ ಕಡೆ ದೈವ, ದೈವ ಕೋಲದ ನೆಪದಲ್ಲಿ ಕರಾವಳಿಯ ಭಕ್ತಿಯನ್ನು ಪ್ರಶ್ನಿಸುವ ರೀತಿಯಲ್ಲಿ ಹಣ ಲೂಟಿ ಮಾಡುವ ಪ್ರಯತ್ನಕ್ಕೆ ಕರಾವಳಿಯ ದೈವವನ್ನು ನಂಬುವ ಜನ ಗರಂ ಆಗಿದ್ದು, ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಮಹಿಳೆಗೆ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗಾರಾಧನೆ ಮತ್ತು ದೈವರಾದನೆಗಳು ತುಳುನಾಡಿ (Tulunadu) ನಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಯಾಗಿದ್ದು, ಕಾಂತಾರ ಚಿತ್ರದ ನಂತರ ಮೈಸೂರು ಬೆಂಗಳೂರು ಭಾಗಗಳಲ್ಲೂ ದೈವಾರಾಧನೆ ಎಂಬ ಹೆಸರಿನಲ್ಲಿ ಆಚರಣೆಗಳು ಶುರುವಾಗಿದ್ದು, ಈ ವಿಷಯ ಇದೀಗ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪ ಜೋರಾಗಿ ಸದ್ದು ಮಾಡುತ್ತಿದೆ. ನೀತಿ ನಿಯಮ ಸಂಪ್ರದಾಯ ಮತ್ತು ಕಟ್ಟುಕಟ್ಟಲೆಯನ್ನು ಮೀರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ತುಳುನಾಡಿನ ಆಚರಣೆಗಳನ್ನು ಎಲ್ಲೆಲ್ಲೋ ನಡೆಸಬಾರದು. ಆಯಾಯ ಊರಿನ ಸಂಪ್ರದಾಯಗಳನ್ನು ಆ ಭಾಗದ ಜನರು ಆಚರಣೆ ಮಾಡಬೇಕು ಎಂದು ದೈವರಾದಕರೊಬ್ಬರು ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ದೈವಕೋಲ ದೈವನರ್ತನ ಕರಾವಳಿಯಲ್ಲಿ ನಡೆಯಬೇಕು, ಅದನ್ನು ಹೊರತುಪಡಿಸಿ ಬೇರೆ ಕಡೆ ನಡೆದರೆ ದೈವದ ಪವಾಡ ನಡೆಯುವುದಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ತುಳುನಾಡಿನ ಸಂಸ್ಕೃತಿಯ ವೈಭವತೆಗೆ ಜೊತೆಗೆ ಅದರ ಆಚರಣೆಯ ಶುದ್ಧತೆಗೆ ಧಕ್ಕೆ ಉಂಟಾಗುತ್ತದೆ ಎನ್ನುವ ಆಕ್ರೋಶವ ನ್ನು ಕರಾವಳಿ ದೈವ ಆರಾಧಕರು ಹೊರಹಾಕುತ್ತಿದ್ದಾರೆ.