ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮಧ್ಯೆ ಈ ಯುವಕ ಯುವತಿಯ ವರ್ತನೆ | ಅಷ್ಟಕ್ಕೂ ಇವರೆಂತ ಮಾಡೋದು?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವೀಡಿಯೋಗಳು ಅಪ್ಲೋಡ್ ಆಗುತ್ತಿರುತ್ತದೆ. ಅದರಲ್ಲಿ ಕೆಲವೊಂದು ವೀಡಿಯೋ ಜನರ ಮನಸ್ಸಿಗೆ ಸಂತೋಷ ಉಂಟು ಮಾಡಿದರೆ, ಕೆಲವೊಂದು ಅತಿರೇಕ ಎಂದೆನಿಸುತ್ತದೆ. ಅಂತಹ ಒಂದು ವೀಡಿಯೋ ಬಗ್ಗೆ ನಿಮಗೆ‌ ನಾವು ಹೇಳೋಕೆ ಹೊರಟಿರೋದು.

ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರ ವೀಡಿಯೋಗಳು, ಶಾಲಾ ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ವೈರಲ್ ಆಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯ ವೀಡಿಯೋ ವೀಕ್ಷಕರನ್ನು ಒಂದು ಕ್ಷಣ ದಂಗು ಬಡಿಸುತ್ತದೆ. ಕಲಿತು ಉದ್ಧಾರವಾಗುವ ಎಂದು ಶಾಲೆಗೆ ಬರುವ ವಿದ್ಯಾರ್ಥಿಗಳು ತರಗತಿಗೆ ಬಂದು ಏನು ಕಲಿಯುತ್ತಿದ್ದಾರೆ ಎನ್ನುವುದೇ ಇಲ್ಲಿ ನಿಜಕ್ಕೂ ದೊಡ್ಡ ಪ್ರಶ್ನಾರ್ಥಕ.

ಈ ವಿಡಿಯೋದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತರಗತಿಯಲ್ಲಿ ಕುಳಿತು ಕೊಂಡಿರುತ್ತಾರೆ. ತಕ್ಷಣಕ್ಕೆ ನೋಡಿದರೆ ಇಬ್ಬರೂ ಕುಳಿತು ಓದುತ್ತಿದ್ದಾರೆ ಎನ್ನುವಂತೆ ಕಾಣಿಸುತ್ತದೆ. ಆದರೆ ಇಲ್ಲಿ ಹುಡುಗಿ ಹುಡುಗನಿಗೆ ಪಾಠ ಹೇಳಿಕೊಡುತ್ತಿದಾಳೋ ಅಥವಾ ಮಾತನಾಡುತ್ತಿದ್ದಾಳೋ ಗೊತ್ತಿಲ್ಲ. ಹುಡುಗ ಮಾತ್ರ ಅವಳು ಏನು ಹೇಳುತ್ತಿದ್ದಾನೆ ಎನ್ನುವುದಕ್ಕೆ ಕಿವಿಯಾಗಿದ್ದಾನೆ.

ಬರೀ ಇಷ್ಟೇ ಆದರೆ ಯಾರೂ ಏನೂ ಹೇಳುತ್ತಿರಲಿಲ್ಲ. ಅಥವಾ ಅದರ ಬಗ್ಗೆ ಚರ್ಚೆ ಆಗ್ತಿರಲಿಲ್ಲ. ಇಲ್ಲಿ ವೈರಲ್ ಆಗಿರೋ ಮ್ಯಾಟರ್ ಏನೆಂದರೆ, ಇಲ್ಲಿ ಹುಡುಗಿಯ ಕಾಲಿಗೆ ಹುಡುಗ ತರಗತಿಯಲ್ಲಿ ಕುಳಿತುಕೊಂಡು ಮಸಾಜ್ ಮಾಡುತ್ತಿದ್ದಾನೆ. ಅದು ಸ್ನೇಹದಿಂದಲೋ ಅಥವಾ ಪ್ರೀತಿಯಿಂದಲೋ ಗೊತ್ತಿಲ್ಲ. ಅದೇನೇ ಇರಲಿ. ಆದರೆ ತರಗತಿಯಲ್ಲಿ ವಿದ್ಯಾರ್ಥಿಗಳ ನಡವಳಿಕೆಗಳು ಎಷ್ಟು ಸರಿ ಎನ್ನುವುದು ಪ್ರಶ್ನೆ. ಇಂಥ ಕೆಲವೊಂದು ವಿದ್ಯಾರ್ಥಿಗಳ ನಡವಳಿಕೆ ಬೇರೆ ವಿದ್ಯಾರ್ಥಿಗಳ ಮೇಲೇ ಕೂಡಾ ಪ್ರಭಾವ ಬೀರತ್ತೆ ಅನ್ನೋದು ಸತ್ಯ.

https://www.instagram.com/reel/ClSzhecj6C5/?utm_source=ig_web_copy_link

Leave A Reply

Your email address will not be published.