SBI Account Transfer: ನಿಮ್ಮ ಬ್ಯಾಂಕ್ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸಬೇಕೇ? ಮನೆಯಲ್ಲಿಯೇ ಕುಳಿತು ಈ ಕೆಲಸ ಈ ರೀತಿ ಮಾಡಿ!!
ಹಿಂದಿನಂತೆ ಈಗ ಬ್ಯಾಂಕ್ ಗೆ ವ್ಯವಹಾರಕ್ಕಾಗಿ ಅಲೆದಾಡುವ ತಾಪತ್ಯಯ ಈಗಿಲ್ಲ. ಮನೆಯಲ್ಲೇ ಅದು ಕೂಡ ಬೆರಳಿನ ತುದಿಯಲ್ಲೇ ಕ್ಷಣ ಮಾತ್ರದಲ್ಲಿಯೆ ಕುಳಿತಲ್ಲೇ ಎಲ್ಲ ಶಾಪಿಂಗ್, ಆನ್ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಗ್ರಾಹಕರಿಗೆ ಅನುವು ಮಾಡಿಕೊಟ್ಟಿದೆ.
ಹಾಗಾದರೆ, ಮನೆಯಲ್ಲಿಯೇ ಕುಳಿತು SBI Account Transfer ನಿಮ್ಮ ಬ್ಯಾಂಕ್ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸುವುದು ಹೇಗೆ?? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಉತ್ತರ ಇಲ್ಲಿದೆ ನೋಡಿ:
Bank Account Transfer :ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾವಣೆಯನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಪ್ರಕ್ರಿಯೆ ಮೂಲಕ ಪೂರ್ಣಗೊಳಿಸಬಹುದಾಗಿದೆ.ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗಾಗಿ ಬ್ಯಾಂಕ್ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದೆ.
ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದು, SBI ಗ್ರಾಹಕರು ಬ್ಯಾಂಕ್ಗೆ ಹೋಗದೇ ಅನ್ಲೈನ್ನಲ್ಲಿಯೇ ಅನೇಕ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.Bank Statement, Money Transfer, Cheque book request ಸೇರಿದಂತೆ ಹಲವು ಸೇವೆಗಳನ್ನು ಮನೆಯಿಂದಲೇ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕ್ ಸೇವೆಯಲ್ಲಿ ಶಾಖೆ ವರ್ಗಾವಣೆ ಆಯ್ಕೆ ಕೂಡ ಬಳಕೆದಾರರಿಗೆ ಲಭ್ಯವಿದ್ದು, ಗ್ರಾಹಕರು ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಸುಲಭವಾಗಿ ವರ್ಗಾಯಿಸಬಹುದಾಗಿದ್ದು, ಬ್ಯಾಂಕ್ಗೆ ಭೇಟಿ ನೀಡದೆ ಈ ಸೇವೆಯನ್ನು ಆನ್ಲೈನ್ನಲ್ಲಿಯೆ ಮಾಡಬಹುದಾಗಿದೆ.
ಎಸ್ ಬಿಐ ಗ್ರಾಹಕರು ಮೊದಲು ನೆಟ್ ಬ್ಯಾಂಕಿಂಗ್ಗೆ ಲಾಗ್ ಇನ್ ಆಗಬೇಕು. ಬಳಿಕ, ಖಾತೆಯನ್ನು ವರ್ಗಾವಣೆ ಮಾಡುವಲ್ಲಿ ಶಾಖೆಯ ಕೋಡ್ ಸಹ ಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಫೋನ್ ಸಂಖ್ಯೆಯನ್ನು ಬ್ಯಾಂಕ್ ನೀವು ಮೊದಲು ನೆಟ್ ಬ್ಯಾಂಕಿಂಗ್ಗೆ ಲಾಗ್ ಇನ್ ಆಗಬೇಕಾಗುತ್ತದೆ. ಇದಲ್ಲದೆ, ನಿಮ್ಮ ಫೋನ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ.
ಇದರ ಜೊತೆಗೆ ಮೊದಲು ನೀವು ಎಸ್ಬಿಐ ವೆಬ್ಸೈಟ್ಗೆ ಹೋಗಬೇಕಾಗುತ್ತದೆ. ನಂತರ, ವೈಯಕ್ತಿಕ ಬ್ಯಾಂಕಿಂಗ್ ಮೇಲೆ ಕ್ಲಿಕ್ ಮಾಡಿಕೊಂಡು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ನೊಂದಿಗೆ ಲಾಗಿನ್ ಮಾಡಬೇಕು.
ಈ ಬಳಿಕ, ನೀವು eServices ಎಂಬ ಆಯ್ಕೆಯನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿಕೊಂಡು ವರ್ಗಾವಣೆ ಉಳಿತಾಯ ಖಾತೆ ಆಯ್ಕೆಯನ್ನು ಆರಿಸಬೇಕು. ಈಗ ನೀವು ಯಾವ ಖಾತೆಯನ್ನು ವರ್ಗಾಯಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬೇಕು.
ಎಲ್ಲಾ ವಿವರಗಳನ್ನು ನಮೂದಿಸಿದ ಬಳಿಕ ದೃಢೀಕರಣ ಬಟನ್ ಕ್ಲಿಕ್ ಮಾಡಬೇಕು ಆಗ, ನಿಮಗೆ OTP ದೊರೆಯುತ್ತದೆOTP ಯನ್ನು ನಮೂದಿಸಿಕೊಂಡ ಬಳಿಕ ದೃಢೀಕರಣ ಬಟನ್ ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಖಾತೆ ವರ್ಗಾವಣೆಯಾಗುತ್ತದೆ. ಈ ಪ್ರಕ್ರಿಯೆ ಪೂರ್ಣವಾಗಲು ಕೆಲ ದಿನಗಳು ಬೇಕಾಗುತ್ತದೆ.
ಇಷ್ಟೇ ಅಲ್ಲದೆ, ನೀವು ಒಂದು ಊರಿನಿಂದ ಮತ್ತೊಂದು ಊರಿಗೆ ವರ್ಗಾವಣೆ ಇಲ್ಲವೇ ಸ್ಥಳಾಂತರ ಗೊಂಡ ಸಂದರ್ಭ ಸುಲಭವಾಗಿ ಆನ್ಲೈನ್ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದಾಗಿದೆ.