Vitamid D : ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಸಾವು| ಅಧ್ಯಯನದಲ್ಲಿ ಬಹಿರಂಗ!

ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಹರಸಾಹಸ ಪಡುತ್ತಿದ್ದಾನೆ ಅಂದರೆ ತಪ್ಪಾಗಲಾರದು. ಯಾಕೆಂದರೆ ಈಗಿನ ಆಧುನಿಕ ಜಗತ್ತಿನಲ್ಲಿ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಅದಲ್ಲದೆ ಇತ್ತೀಚಿನ ಅಧ್ಯಯನವು ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಮಾಹಿತಿ ದೊರೆತಿದೆ.

 

ದೇಹವನ್ನು ರೋಗಗಳಿಂದ ದೂರವಿಡಲು ನಾವು ನಮ್ಮ ಆಹಾರದಲ್ಲಿ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸೇರಿಸಬೇಕು. ನೀವು ಜೀವಸತ್ವಗಳು, ಖನಿಜಗಳು, ಪ್ರೋಟೀನ್​ಗಳು ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದೇಹವನ್ನು ಬಲಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಡಿ ಬಹಳ ಮುಖ್ಯ. ನಗರ ಜೀವನಶೈಲಿಯಲ್ಲಿ ವಿಟಮಿನ್ ಡಿ ಕೊರತೆಯು ಜನರಲ್ಲಿ ಹೆಚ್ಚಾಗಿ ಕಾಣಿಸ್ತಿದೆ. ಫ್ಲಾಟ್‌ಗಳಲ್ಲಿ ವಾಸಿಸುವ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಜನರು ದಿನವಿಡೀ ಸೂರ್ಯನ ಬೆಳಕಿಗೆ ಹೋಗುವುದಿಲ್ಲ. ಇದರಿಂದಾಗಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಾಣಿಸುತ್ತದೆ.

ವಿಟಮಿನ್ ಡಿ ಹೆಚ್ಚಿಸುವ ಆಹಾರಗಳು :
ಸಾಲ್ಮನ್, ಸಾರ್ಡೀನ್, ಹೆರಿಂಗ್ ಮತ್ತು ಮ್ಯಾಕೆರೆಲ್‌ನಂತಹ ಎಣ್ಣೆಯುಕ್ತ ಮೀನುಗಳಲ್ಲಿ ಧಾರಾಳವಾಗಿ ವಿಟಮಿನ್‌ ಡಿ ನಮ್ಗೆ ದೊರಕುತ್ತದೆ. ಕೆಲವು ಇತರ ಆಹಾರ ಮೂಲಗಳು ಮಾಂಸ, ಯಕೃತ್ತು, ಮೊಟ್ಟೆಯ ಹಳದಿ, ಮತ್ತು ಉಪಹಾರ ಧಾನ್ಯಗಳಂತಹ ಬಲವರ್ಧಿತ ಆಹಾರಗಳಲ್ಲಿ ವಿಟಮಿನ್‌ ಡಿ ಹೆಚ್ಚಿದೆ ಎಂದು ಹೇಳಬಹುದು.

ಅಕಾಲಿಕ ಮರಣಕ್ಕೆ ನೇರ ಕಾರಣ ವಿಟಮಿನ್‌ ಡಿ ಕೊರತೆ:
ಅಕ್ಟೋಬರ್ 25 ರಂದು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವು ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚು ಎಂದು ಸಾಬೀತು ಪಡಿಸಿದೆ.

ಅದಲ್ಲದೆ “ವಿಟಮಿನ್ ಡಿ ಕೊರತೆಯಿಂದ ಯುನೈಟೈಡ್‌ ಕಿಂಗ್‌ಡಮ್‌ನ ಬಯೋಬ್ಯಾಂಕ್‌ನಲ್ಲಿ ಹೆಚ್ಚಿನ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ” ಎಂಬ ಶೀರ್ಷಿಕೆಯ ಸಂಶೋಧನಾ ಅಧ್ಯಯನವನ್ನು ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರಿಸಿಶನ್ ಹೆಲ್ತ್, ಯುನಿಟ್ ಆಫ್ ಕ್ಲಿನಿಕಲ್ ಮತ್ತು ಹೆಲ್ತ್ ಸೈನ್ಸಸ್, ದಕ್ಷಿಣ ಆಸ್ಟ್ರೇಲಿಯಾ, ಅಡಿಲೇಡ್ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ್ದಾರೆ.

ಈಗಾಗಲೇ ಮಾರ್ಚ್ 2006 ರಿಂದ ಜುಲೈ 2020 ರವರೆಗೆ 14 ವರ್ಷಗಳ ಕಾಲ ಒಟ್ಟು 307601 ಜನರನ್ನು ಅಧ್ಯಯನ ಮಾಡಲಾಗಿದೆ.

ಈ ಸಂಶೋಧನಾ ಅಧ್ಯಯನದಲ್ಲಿ ಪಾಲ್ಗೊಂಡ ಜನರಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಕೊರತೆ ಇದ್ದಿದ್ದರಿಂದ ಸಾವಿನ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 14 ವರ್ಷಗಳ ಒಟ್ಟು ಅಧ್ಯಯನದಲ್ಲಿ ಒಟ್ಟು 18,700 ಸಾವುಗಳು ವರದಿಯಾಗಿವೆ. ಸಾವಿನ ಅಪಾಯವು ವಿಟಮಿನ್‌ ಡಿ ಯ ಕೊರತೆಯ ಮಟ್ಟಕ್ಕೆ ನೇರ ಅನುಪಾತದಲ್ಲಿದೆ. ವಿಟಮಿನ್‌ ಡಿ ಕೊರತೆ ಹೆಚ್ಚಾದಂತೆ, ಸಾವಿನ ಅಪಾಯ ಕೂಡ ಹೆಚ್ಚು ಎಂದು ಸಂಶೋಧನೆಯ ಫಲಿತಾಂಶವಾಗಿದೆ.

ವಿಟಮಿನ್ ಡಿ ಕೊರತೆಯ ಲಕ್ಷಣಗಳು:

  • ಆಗಾಗ ಅನಾರೋಗ್ಯ ಉಂಟಾಗುವುದು.
  • • ನಿರಂತರ ಆಯಾಸ ಉಂಟಾಗುವುದು.
  • ಮಾನಸಿಕ ಬದಲಾವಣೆಗಳು, ಆತಂಕ, ಖಿನ್ನತೆಯ ಸಮಸ್ಯೆ ತಲೆದೋರುತ್ತದೆ.
  • • ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುತ್ತದೆ.
  • ಚರ್ಮದ ದದ್ದುಗಳು ಮತ್ತು ಮೊಡವೆಗಳು ದೇಹದಲ್ಲಿನ ವಿಟಮಿನ್ ಡಿ ಮಟ್ಟವನ್ನು ಕಡಿಮೆಗೊಳಿಸುತ್ತದೆ.
  • • ಮೂಳೆಗಳು ದುರ್ಬಲಗೊಳ್ಳುವುದು, ಕೀಲು ಪ್ರದೇಶಗಳಲ್ಲಿ ನೋವು, ಸ್ನಾಯು ಸೆಳೆತ, ವಿಪರೀತ ಕಾಲುಗಳಲ್ಲಿ ನೋವು, ಮತ್ತು ದೇಹದಲ್ಲಿ ಬಿಗಿತ ಉಂಟಾಗುವ ಸಾಮಾನ್ಯ ಲಕ್ಷಣಗಳನ್ನು ವಿಟಮಿನ್ ಡಿ ಕೊರತೆಯಿಂದ ಅನುಭವಿಸಬೇಕಾಗಬಹುದು.

ವಿಟಮಿನ್‌ ಡಿ ಯಿಂದ ಬರುವ ಕಾಯಿಲೆಗಳು:

  • ವಿಟಮಿನ್ ಡಿ ಕೊರತೆಯು ಎಲ್ಲಕ್ಕಿಂತ ಹೆಚ್ಚಾಗಿ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮೂಳೆಯ ಆರೋಗ್ಯವನ್ನು ಕುಂಠಿತಗೊಳಿಸುತ್ತದೆ. ಇದರ ಕೊರತೆಯು ಮಕ್ಕಳಲ್ಲಿ ರಿಕೆಟ್‌ಗಳಿಗೆ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾಕ್ಕೆ ಕಾರಣವಾಗುತ್ತದೆ.
  • • ವಿಟಮಿನ್ ಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ ಎಂದು ಹಲವಾರು ಸಂಶೋಧನಾ ಅಧ್ಯಯನಗಳು ತಿಳಿಸಿವೆ . ಪರಿಣಾಮವಾಗಿ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಅತ್ಯಗತ್ಯ ಅಂಶವೆಂದು ಪರಿಗಣಿಸಲಾಗಿದೆ.
  • ಈ ವಿಟಮಿನ್‌ ಕೊರತೆ ನೇರ ಕ್ಯಾನ್ಸರ್‌ ಮತ್ತು ಹೃದಯಕ್ಕೆ ಸಂಬಂಧಪಟ್ಟ ರೋಗಕ್ಕೂ ಕಾರಣ ಎಂದು ತಜ್ಞರು ಸೂಚಿಸುತ್ತಾರೆ.
  • ಸಂಶೋಧನಾ ಅಧ್ಯಯನಗಳು ಕರುಳಿನ ಕ್ಯಾನ್ಸರ್ ಅಪಾಯವು ಸಹ ವಿಟಮಿನ್ ಡಿ ಕೊರತೆಯಿಂದ ಬರುತ್ತದೆ ಎಂದು ತಿಳಿಸಿವೆ.

ಪ್ರಸ್ತುತ ಮನುಷ್ಯನಿಗೆ ವಿಟಮಿನ್ ಡಿ ದೇಹಕ್ಕೆ ಬಹಳ ಮುಖ್ಯವಾಗಿದೆ. ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕಷ್ಟ. ಸೂರ್ಯನ UVB ವಿಕಿರಣದಿಂದ 7-ಡಿಹೈಡ್ರೊಕೊಲೆಸ್ಟರಾಲ್ ವಿಭಜನೆಯಾದಾಗ ಜೈವಿಕವಾಗಿ ಉಪಯುಕ್ತವಾದ ವಿಟಮಿನ್ D ರೂಪುಗೊಳ್ಳುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅಗತ್ಯವಾದ ವಿಟಮಿನ್‌ ನೀಡುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

Leave A Reply

Your email address will not be published.