ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ | ಮಹೇಶ್, ಚಂದ್ರ ನಾಯ್ಕರ ನಡುವೆ ಹೊಯ್-ಕೈ

ಪುತ್ತೂರು: ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಮಧ್ಯಾಹ್ನ ಊಟದ ಸಮಯದಲ್ಲಿ ಅವರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥವಾಗಿದೆ ಎಂದು ಸುದ್ದಿಯಾಗಿದೆ.

 

ತಾಲೂಕು ಆಡಳಿತ ಸೌಧದಲ್ಲಿರುವ ರೆಕಾರ್ಡ್ ರೂಂ ಮುಖ್ಯಸ್ಥರಾಗಿರುವ ಮಹೇಶ್ ಮತ್ತು ಕಡಬದ ಆಹಾರದ ವಿಭಾಗದ ಅಧಿಕಾರಿ ಚಂದ್ರ ನಾಯ್ಕ ಎಂಬವರ ನಡುವೆ ಮಾತಿನ ಚಕಮಕಿ ಹೊಡೆದಾಡಿಕೊಂಡಿದ್ದಾರೆ.

ರೆಕಾರ್ಡ್ ಪ್ರವೇಶವಿಲ್ಲದಿದ್ದರೂ ಚಂದ್ರ ನಾಯ್ಕ ಅವರು ರೂಮ್‌ಗೆ ಹೋಗಿರುವುದನ್ನು ಮಹೇಶ್ ಪ್ರಶ್ನಿಸಿದ್ದಾರೆ.ಇದೇ ವಿಚಾರದಲ್ಲಿ ಅವರಿಬ್ಬರೊಳಗೆ ಮಾತಿನ ಚಕಮಕಿ ನಡೆದಿದೆ.ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ.ಘಟನೆಗೆ ಸಂಬಂಧಿಸಿ ಅವರಿಬ್ಬರೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಆರೋಪ ಹೊರಿಸಿಕೊಂಡು ದೂರು ನೀಡಿದ್ದರು.ಸಂಜೆ ವೇಳೆ ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ಅವರು ಠಾಣೆಗೆ ತೆರಳಿ ಇನ್‌ಸ್ಪೆಕ್ಟರ್ ಜೊತೆ ಮಾತುಕತೆ ನಡೆಸಿದ್ದು ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿದೆ ಎಂದು ಹೇಳಲಾಗಿದೆ.

Leave A Reply

Your email address will not be published.