ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಿಮಗೆ ಕೆಲಸ ಮಾಡಲು ಆಸಕ್ತಿಯಿದೆಯೇ? ಉತ್ತಮ ಸಂಬಳದ ಉದ್ಯೋಗ | ಡಿಗ್ರಿ ಆದವರಿಗೆ ಆದ್ಯತೆ
NIFT Recruitment 2022: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(National Institute of Fashion Technology) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ : ಒಟ್ಟು 9 ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 12/12/2022
ಪ್ರಾಜೆಕ್ಟ್ ಎಂಜಿನಿಯರ್- 1
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್)-4
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4
ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಆಫ್ಲೈನ್(Offline) ಮೂಲಕ ಅರ್ಜಿ ಹಾಕಿ.
ಸಂಸ್ಥೆ : ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ
ಹುದ್ದೆಗಳು : 9
ಉದ್ಯೋಗದ ಸ್ಥಳ : ಭಾರತ
ಹುದ್ದೆಯ ಹೆಸರು : ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್
ವೇತನ ಮಾಸಿಕ : ರೂ.15,600-67,000ರೂ.
ವಿದ್ಯಾರ್ಹತೆ : ಪ್ರಾಜೆಕ್ಟ್ ಎಂಜಿನಿಯರ್- ಸ್ನಾತಕೋತ್ತರ ಪದವಿ
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್)- ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಪದವಿ
ವಯೋಮಿತಿ : ಪ್ರಾಜೆಕ್ಟ್ ಎಂಜಿನಿಯರ್- ಗರಿಷ್ಠ 50 ವರ್ಷ
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್)- ಗರಿಷ್ಠ 40 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಗರಿಷ್ಠ 35 ವರ್ಷ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ : ಎಸ್ಟಿ/ಎಸ್ಸಿ/ ಮಹಿಳಾ ಅಭ್ಯರ್ಥಿಗಳು & NIFT ಉದ್ಯೋಗಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಎಲ್ಲಾ ಅಭ್ಯರ್ಥಿಗಳು 1180 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಮಾಸಿಕ ವೇತನ : ಪ್ರಾಜೆಕ್ಟ್ ಎಂಜಿನಿಯರ್- ಮಾಸಿಕ ₹ 37,400-67,000
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್)-ಮಾಸಿಕ ₹ 15,600-39,100
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಮಾಸಿಕ ₹ 15,600-39,100
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳಾದ ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್, ಇತ್ತೀಚಿನ ಫೋಟೋ ಪ್ರತಿ, ಗುರುತಿನ ಚೀಟಿ ಹಾಗೂ ಅನುಭವ ಪ್ರತಿಯೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 12, 2022ರೊಳಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು.
ವಿಳಾಸ : ರಿಜಿಸ್ಟ್ರಾರ್
NIFT ಕ್ಯಾಂಪಸ್
ಹೌಜ್ ಖಾಸ್
ಗೊಲ್ಮಹರ್ ಪಾರ್ಕ್ ಹತ್ತಿರ
ನವದೆಹಲಿ-110016
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ