Education News : ವಿದ್ಯಾರ್ಥಿಗಳೇ ಗಮನಿಸಿ | 9 ಮತ್ತು 10 ತರಗತಿ ಇನ್ನು ಮುಂದೆ ಪ್ರೌಢಶಾಲೆಗಳಲ್ಲ!
9 ಮತ್ತು 10ನೇ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ!ಹೌದು, ಇನ್ನು ಮುಂದೆ ಈ ತರಗತಿಗಳನ್ನು ಪ್ರಾಥಮಿಕ ಶಿಕ್ಷಣದ “ಮುಂದುವರಿದ ಶಿಕ್ಷಣ” ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಜ್ಞಾಪನಾ ಪತ್ರ’ ಹೊರಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಳೆದ ನವೆಂಬರ್ 3 ರಂದೇ ಆದೇಶ ಹೊರಡಿಸಿತ್ತು. 01 ರಿಂದ 8 ಅಥವಾ 6 ರಿಂದ 8 ನೇ ತರಗತಿಗಳು ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ತರಗತಿಗಳನ್ನು ಹೊಸ ಶಾಲೆ ಎಂದು ಪರಿಗಣಿಸಬಾರದು ಎಂದು ಇಲಾಖೆಯು ಸ್ಪಷ್ಟವಾಗಿ ಸೂಚಿಸಿದೆ. ಅದರ ಅನ್ವಯವೇ ನೊಂದಣಿ ನಿಯಮಗಳನ್ನು ಅನುಸರಿಸಲಾಗುತ್ತದೆ.
ಒಂದು ವೇಳೆ ಬೇರೆ ಆವರಣದಲ್ಲಿ 9 ಮತ್ತು 10 ನೇ ತರಗತಿಗಳನ್ನು ಪ್ರತ್ಯೇಕವಾಗಿ ಆರಂಭಿಸಿದ್ದಲ್ಲಿ ಮಾತ್ರ ಅಂತಹ ಶಾಲೆಯನ್ನು ಪ್ರೌಢ ಶಾಲೆಯೆಂದು ಪರಿಗಣಿಸಬೇಕು ಎಂದು ತಿಳಿಸಲಾಗಿದೆ. ಈಗಾಗಲೇ ಖಾಸಗಿ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಇಲಾಖೆಯು ಸ್ಪಷ್ಟೀಕರಿಸಿದೆ.