ಅಳಿಯನನ್ನು ಕೂಡಿ ಹಾಕಿ ಮನೆ ದರೋಡೆ ಮಾಡಿದ ಮಾವ !

Share the Article

ಮಂಗಳೂರು : ಅಳಿಯನನ್ನು ಕೂಡಿ ಹಾಕಿ ಮಾವನೇ ಮನೆ ದರೋಡೆ ಮಾಡಿದ ಘಟನೆ ಕುರಿತಂತೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಅತ್ತೂರು ನಸೀಬ್‌ ಅವರು ಉಪ್ಪಿನಂಗಡಿಯಲ್ಲಿರುವ ತಾಯಿಯ ಆರೋಗ್ಯ ವಿಚಾರಿಸಿ ತನ್ನ ಮನೆಗೆ ಮರಳಿದಾಗ ಅವರ ಸಂಬಂಧಿಕರು ಕೂಡಿ ಹಾಕಿ ದರೋಡೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ನಸೀಬ್‌ ಅವರು ತಾಯಿಯನ್ನು ನೋಡಿ, ಮೂಡಬಿದಿರೆಯ ಪ್ರಾಂತ್ಯ ಗ್ರಾಮದಲ್ಲಿರುವ ತನ್ನ ಮನೆಗೆ ಬಂದಾಗ, ಅವರ ಮಾವ (ಹೆಂಡತಿಯ ತಂದೆ) ಇಸ್ಮಾಯಿಲ್‌, ತೋಡಾರು ಶರೀಫ್‌ ಹಾಗೂ ಇತರ ನಾಲ್ವರು ಮನೆಯಲ್ಲಿದ್ದ ಟಿ.ವಿ, ಡಿವಿಡಿ, 3-ಎಸಿ, 1 ಸೋಫಾ ಸೆಟ್‌, ಡೈನಿಂಗ್ ಟೇಬಲ್‌, ಫ್ರಿಡ್ಜ್, ವಾಷಿಂಗ್‌ ಮೆಷಿನ್‌, ಪಾಸ್‌ಬುಕ್‌, ಚೆಕ್‌ಬುಕ್‌ ಮೊದಲಾದ ಸಾಮಾಗ್ರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಇದನ್ನು ತಡೆಯಲು ಹೋದ ಅತ್ತೂರು ನಸೀಬ್‌ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೋಣೆಯಲ್ಲಿ ಕೂಡಿ ಹಾಕಿ ಮನೆಯ ಸಾಮಾಗ್ರಿಗಳನ್ನು ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply