ಧರ್ಮಸ್ಥಳ : ಮನೆಯ ಅಂಗಳದಲ್ಲಿ ಅಪ್ಪ-ಮಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ಪುದುವೆಟ್ಟು ಎಂಬಲ್ಲಿ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗುರುವ (75 ) ಹಾಗೂ ಪುತ್ರ ಓಡಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ವಿಷಪೂರಿತ ಅಣಬೆಯ ಸೇವನೆಯಿಂದ ಈ ಸಾವು ಆಗಿದೆಯೇ ಎಂಬ ಸಂಶಯವಿದೆ.

 

ಇವರಿಬ್ಬರ ಮೃತ ದೇಹ ಮಿಯ್ಯಾರು ಸಾಮೆದಕಲಪು ಅಂಚೆ ಕಚೇರಿ ಬಳಿಯ ಇವರ ಮನೆಯ ಅಂಗಳದಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply

Your email address will not be published.